ಗುಜರಾತ್ ವಿಧಾನಸಭಾ ಚುನಾವಣೆ: ಹಾಲಿ ಶಾಸಕರ ಬಂಡಾಯದ ಬಗ್ಗೆ ಬಿಜೆಪಿ ಭಾರೀ ಎಚ್ಚರಿಕೆ
ಅಹಮದಾಬಾದ್, ಅ.28: ಗುಜರಾತ್‌ನಲ್ಲಿ ಪಕ್ಷದ ಬಂಡಾಯಗಾರರು ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಮಾಡುವ ಬಗ್ಗೆ ಎಚ್ಚರದಿಂದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುಜರಾತ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಿದೆ.
ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ವಿಧಾನಸಭೆಗೆ ಅಭ್ಯರ್ಥಿಗಳ ಪಟ್ಟಿಯಿಂದ ಹಾಲಿ ಶಾಸಕರ ಹೆಸರನ್ನು ತೆಗದುಹಾಕುವಲ್ಲಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ.
ಅಧಿಕಾರ ವಿಕೇಂದ್ರಿಕರಣ, ಹೊಸ ಮತ್ತು ಕಿರಿಯ ಮುಖಗಳಿಗೆ ಅವಕಾಶ ಕಲ್ಪಿಸಲು 30% ಹಾಲಿ ಶಾಸಕರನ್ನು ಕೈಬಿಡುವ ಅಭ್ಯಾಸವನ್ನು ಬಿಜೆಪಿ ಅನುಸರಿಸುತ್ತಿದೆ. ಚುನಾವಣೆಯು ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯಾಗಿತ್ತು. ಆದರೆ, ಈಗ ಆಮ್ ಆದ್ಮಿ ಪಕ್ಷವು (ಎಎಪಿ) ರಾಜ್ಯದಲ್ಲಿ ಪರ್ಯಾಯ ಪಕ್ಷವಾಗಿದೆ. ಹೀಗಾಗಿ ಪಕ್ಷದಿಂದ ಟಿಕೆಟ್ ಸಿಗದ ಬಂಡಾಯಗಾರರು ಹೊಸ ಪಕ್ಷಕ್ಕೆ ಅಂದರೆ ಆಪ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇದನ್ನು ತಪ್ಪಿಸಲು ಟಿಕೆಟ್ ಕೊಡುವಾಗ ಎಚ್ಚರಿಕೆ ವಹಿಸುವಂತೆ ಹಲವು ಬಿಜೆಪಿ ಮುಖಂಡರೇ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಬಿಜೆಪಿಗೆ ಭಾರೀ ಆತಂಕ!
"ಹಿಮಾಚಲ ಪ್ರದೇಶದಲ್ಲಿ, ಉದಾಹರಣೆಗೆ 11 ಹಾಲಿ ಶಾಸಕರನ್ನು ಈ ಬಾರಿ ಪಕ್ಷದಿಂದ ಕೈಬಿಡಲಾಯಿತು. ಪಕ್ಷವು ಅವರನ್ನು ಹಲವು ಬಾರಿ ಸಮಾಧಾನ ಪಡಿಸಲು ಯತ್ನಿಸಿದರೂ ಕೂಡ ಅನೇಕರು ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ. ಬಂಡಾಯ ಶಾಸಕರು ಗೆಲ್ಲದಿದ್ದರೂ ಸಹ, ಅವರು ಬಿಜೆಪಿಯ ಮತ ಬ್ಯಾಂಕ್‌ಗೆ ಚ್ಯುತಿ ತರುವ ಸಾಧ್ಯತೆಯಿದೆ. ಗುಜರಾತ್‌ನಲ್ಲಿ ಇಂತಹ ಪರಿಸ್ಥಿತಿ ಮರುಕಳಿಸುವುದನ್ನು ಪಕ್ಷ ಬಯಸುವುದಿಲ್ಲ'' ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಜೆಡಿಯು, ಲೋಕ ಜನಶಕ್ತಿಯ ಪರಸ್ಪರ ಕೆಸರೆರಚಾಟ!
2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ, ಜೆಡಿಯುನ ಅಧಿಕ ಅಭ್ಯರ್ಥಿಗಳು ಸ್ಥಾನ ಕಳೆದುಕೊಳ್ಳಲು ಕಾರಣ ಇಂತಹ ಬಂಡಾಯಗಾರರು ಎಂದು ದೂಷಿಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮಿತ್ರಪಕ್ಷಗಳಾಗಿ ಹೋರಾಡಿದ್ದವು. ಆದರೆ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದಿಂದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ನಂತರ ಹಾಲಿ ಶಾಸಕ ಸೇರಿದಂತೆ 9 ಬಿಜೆಪಿ ನಾಯಕರನ್ನು ಪಕ್ಷದಿಂದ ಹೊರಹಾಕಲಾಯಿತು.
ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚಿಸಿದರೂ, 50 ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಲ್ಲಿ ತನ್ನ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಜೆಡಿಯು ಚಿರಾಗ್ ಪಾಸ್ವಾನ್ ಅವರ ಪಕ್ಷವನ್ನು ದೂಷಿಸಿಸಲಾಗಿತ್ತು.

ಸುಮಾರು 25% ಹಾಲಿ ಅಭ್ಯರ್ಥಿಗಳನ್ನು ಕೈಬಿಡಲಿರುವ ವದಂತಿ!
2021 ರಲ್ಲಿ, ಒಂದು ಅಚ್ಚರಿಯ ನಡೆಯಲ್ಲಿ, ಕೇಂದ್ರ ನಾಯಕತ್ವವು ಗುಜರಾತ್‌ನಲ್ಲಿ ರಾಜ್ಯ ಸರ್ಕಾರವನ್ನು ಸಂಪೂರ್ಣ ಕೂಲಂಕಷವಾಗಿ ಬದಲಾಯಿಸುವುದಾಗಿ ಘೋಷಿಸಿತು. ವಿಜಯ್ ರೂಪಾನಿ ಅವರ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ, ಸಂಪೂರ್ಣ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧದ ಸಾರ್ವಜನಿಕ ಕೋಪವನ್ನು ಕಡಿಮೆ ಮಾಡಲು ಮತ್ತು ಆಡಳಿತ ವಿರೋಧಿ ಅಲೆಯನ್ನು ಕಡಿಮೆಗೊಳಿಸುವ ಮುನ್ನೆಚ್ಚರಿಕೆ ಎಂದು ಈ ಕ್ರಮವನ್ನು ಗ್ರಹಿಸಲಾಗಿದೆ.
"ಈ ಬಾರಿ ಪಕ್ಷವು ಸುಮಾರು 25% ಹಾಲಿ ಅಭ್ಯರ್ಥಿಗಳನ್ನು ಕೈಬಿಡಲಿದೆ ಎಂಬ ಗುಸುಗುಸು ಇದೆ. ಆದರೆ ಆಯ್ಕೆ ಪ್ರಕ್ರಿಯೆ ಒಂದು ದೊಡ್ಡ ಸಮೀಕ್ಷೆಯಾಗಿದೆ. ಇದು ಜಾತಿ ಸಮೀಕರಣಗಳು, ಕೇಡರ್ ಪ್ರತಿಕ್ರಿಯೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗೆಲುವಿನಂತಹ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಅವಶ್ಯಕತೆಗಳಿಗೆ ಬದ್ಧವಾಗಿ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ" ಎಂದು ಮುಖಂಡರು ಹೇಳಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಜೊತೆಗೆ ಸೂಕ್ಷ್ಮ ಅಂಶಗಳ ಬಗ್ಗೆಯೂ ಗಮನ
ಇತರ ಪಕ್ಷಗಳ ಬಂಡಾಯಗಾರರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷವು ಹೆಚ್ಚು ಜಾಗೃತವಾಗಿರುತ್ತದೆ ಎಂದು ಕಾರ್ಯಾಧ್ಯಕ್ಷರು ಹೇಳಿದ್ದಾರೆ. 2017 ರಲ್ಲಿ 99 ಸ್ಥಾನಗಳನ್ನು ಹೊಂದಿರುವ ಪಕ್ಷವು ಸರ್ಕಾರ ರಚಿಸಿದಾಗ ಸ್ಪರ್ಧಿಸಿದ್ದ ಏಳು ಮಾಜಿ ಕಾಂಗ್ರೆಸ್ ಶಾಸಕರ ಪೈಕಿ ಇಬ್ಬರು ಮಾತ್ರ ಗೆದ್ದಿದ್ದರು.
ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಹೊರತಾಗಿ, ಪಕ್ಷದ ಮುಖ್ಯ ಕಾರ್ಯತಂತ್ರಗಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಕ್ಷದ ಚುನಾವಣಾ ಪ್ರಚಾರದ ಸೂಕ್ಷ್ಮ ಅಂಶಗಳನ್ನು ಗುರುತಿಸುವತ್ತಲೂ ಗಮನ ಹರಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಮಿತ್ ಶಾ, ಗುಜರಾತ್ ಸಿಎಂ, ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ರಾಜ್ಯದ ಹಿರಿಯ ನಾಯಕರೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಇತ್ತ, ಆಮ್ ಆದ್ಮಿ ಪಕ್ಷ ಕೂಡ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರಲು ಭಾರೀ ಪ್ರಯತ್ನ ನಡೆಸುತ್ತಿದೆ. ಉಚಿತ ಭರವಸೆಗಳನ್ನು ನೀಡುತ್ತಿದೆ, ಪ್ರಮುಖ ಮತ ಬ್ಯಾಂಕ್ ಆದ ಪಟೇಲರನ್ನು ಓಲೈಸುತ್ತಿದೆ. ಇನ್ನು ಆಪ್ ನೀಡಿರುವ 300 ಯೂನಿಟ್‌ಗಳ ಉಚಿತ ವಿದ್ಯುತ್, ಪಿಂಚಣಿ ಮತ್ತು ಒಂದು ಮಿಲಿಯನ್ ಹೊಸ ಉದ್ಯೋಗಗಳ ಭರವಸೆಗಳನ್ನು ಗುಜರಾತ್‌ನ ಜನರು ಬೀಳುವುದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.












Click it and Unblock the Notifications