ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ವಿಧಾನ ಸಭೆ ಚುನಾವಣೆ: ಒಂದಷ್ಟು ಚಿತ್ರಗಳು

|
Google Oneindia Kannada News

ಇಡೀ ದೇಶದ ಜನರನ್ನೂ ತನ್ನತ್ತ ಸೆಳೆದು, ತೀವ್ರ ಕುತೂಹಲಕೆರಳಿಸಿರುವ ಗುಜರಾತಿನ ವಿಧಾನಸಭೆ ಚುನಾವಣೆಗೆ ಇಂದು(ಡಿ. 9) ಮೊದಲ ಹಂತದ ಮತದಾನ ನಡೆಯುತ್ತಿದೆ. ಹಲವು ತಿಂಗಳುಗಳಿಂದ ನಿರಂತರ ಸುದ್ದಿಯಲ್ಲಿದ್ದ ಗುಜರಾತ್ ಚುನಾವಣೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರ ತವರು ಎಂಬ ಕಾರಣಕ್ಕೆ ಮತ್ತಷ್ಟು ಮಹತ್ವ ಪಡೆದಿದೆ.

ಇಂದು 89 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು 93 ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

LIVE: ಮತಯಂತ್ರದಲ್ಲಿ ದೋಷವಿದ್ದರೆ ಶೀಘ್ರ ಬಗೆಹರಿಸಿ: ಅಹ್ಮದ್ ಪಟೇಲ್LIVE: ಮತಯಂತ್ರದಲ್ಲಿ ದೋಷವಿದ್ದರೆ ಶೀಘ್ರ ಬಗೆಹರಿಸಿ: ಅಹ್ಮದ್ ಪಟೇಲ್

ಗುಜರಾತ್ ವಿಧಾನಸಭೆಗೆ ಒಟ್ಟು 2,12,31,652 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 1,11,05,933 ಕೋಟಿ ಪುರುಷ ಮತದಾರರು ಮತ್ತು 1,01,25,472 ಮಹಿಳಾ ಮತದಾರರು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಗುಜರಾತ್ ಚುನಾವಣೆಯ ಕೆಲವು ತಾಜಾ ಚಿತ್ರಗಳು ಇಲ್ಲಿವೆ.

ಜಾಮ್ನಗರದಲ್ಲಿ ಹುರುಪಿನ ಮತದಾನ

ಜಾಮ್ನಗರದಲ್ಲಿ ಹುರುಪಿನ ಮತದಾನ

ಜಾಮ್ನಗರ ಪಶ್ಚಿಮದಲ್ಲಿ ಮತದಾರರು ಮತಚಲಾಯಿಸಿದರು. ಜನರಲ್ಲಿ ಹಿಂದಿಗಿಂತಲೂ ಹೆಚ್ಚು ರಾಜಕೀಯ ಪ್ರಜ್ಞೆ ಮೂಡಿರುವ ಕಾರಣ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಹೆಚ್ಚಿನ ಜನ ಮತಚಲಾಯಿಸುವಂತೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಂಗ್ರೋಲ್ ಮತಗಟ್ಟೆ

ಮಾಂಗ್ರೋಲ್ ಮತಗಟ್ಟೆ

ಇಲ್ಲಿನ ಮಾಂಗ್ರೋಲ್ ಮತಗಟ್ಟೆಯಲ್ಲೂ ಜನ ಹುರುಪಿನಿಂದ ಮತಚಲಾಯಿಸಿದರು. ಗುಜರಾತಿನಾದ್ಯಂತ ಒಟ್ಟು 24,000 ಮತಗಟ್ಟೆಗಳಿದ್ದು, ಅವುಗಳಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟ ಕುರಿತು ವರದಿಯಾಗಿತ್ತು. ಇದೀಗ ಅವುಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದ್ದು, ಮತದಾನ ಮುಂದುವರಿದಿದೆ.

ಸೂರತ್ ನಲ್ಲಿ ಮಹಿಳೆಯರಿಂದ ಮತದಾನ

ಸೂರತ್ ನಲ್ಲಿ ಮಹಿಳೆಯರಿಂದ ಮತದಾನ

ಸೂರತ್ ನಲ್ಲಿ ಮಹಿಳೆಯರು ಆಸಕ್ತಿಯಿಂದ ಮತದಾನದಲ್ಲಿ ಪಾಲ್ಗೊಂಡರು. ಗುಜರಾತಿನ ಒಟ್ಟು 2,12,31,652 ಮತದಾರರಲ್ಲಿ 1,01,25,472 ಮಹಿಳಾ ಮತದಾರರಿದ್ದಾರೆ.

ಜುನಾಗಢದಲ್ಲಿ ಪ್ರತಿಭಟನೆ

ಜುನಾಗಢದಲ್ಲಿ ಪ್ರತಿಭಟನೆ

ಜುನಾಗಢದಲ್ಲಿ ಬಿಜೆಪಿಯ ರೇಷ್ಮಾ ಪಟೇಲ್ ಮತದಾನಕ್ಕೆ ಆಗಮಿಸುತ್ತದಿದ್ದಂತೆಯೇ ಪಾಟಿದಾರ್ ಸಮುದಾಯದ ಗುಂಪೊಂದು ಪ್ರತಿಭಟನೆ ಆರಂಭ ಇಸಿದ ಕಾರಣ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ತಲೆದೋರಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.(ಚಿತ್ರಕೃಪೆ: ಎಎನ್ ಐ)

ಭಾರೂಚ್ ನಲ್ಲಿ ಮತದಾನ ಮಾಡಿದ ವಧು-ವರರು

ಭಾರೂಚ್ ನಲ್ಲಿ ಮತದಾನ ಮಾಡಿದ ವಧು-ವರರು

ಭಾರೂಚ್ ನಲ್ಲಿಹಸೆಮಣೆ ಏರುವುದಕ್ಕೆ ಸಿದ್ಧರಾಗಿದ್ದ ವಧು-ವರರು, ಮತಗಟ್ಟೆಯತ್ತ ಸಾಗಿ, ಮತದಾನ ಮಾಡಿ, ನಂತಗರ ಸಪ್ತಪದಿ ತುಳಿದು, ಮತದಾನದ ಮಹತ್ವವನ್ನು ಸಾಬೀತುಪಡಿಸಿದರು.

ಮತ ಚಲಾಯಿಸಿದ ವಜುಭಾಯ್ ವಾಲಾ

ಗುಜರಾತ್ ನ ರಾಜ್ ಕೋಟ್ ನವರಾದ ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲಾ ಅವರು ಇಂದು ಗುಜರಾತ್ ವಿಧಾನಸಭೆ ಚುನಾವಣೆಗೆ ರಾಜ್‌ಕೋಟ್ ನಲ್ಲಿ ಮತಚಲಾಯಿಸಿದರು.

ಹಕ್ಕು ಚಲಾಯಿಸಿದ ಕ್ರಿಕೆಟಿಗ

ಹಕ್ಕು ಚಲಾಯಿಸಿದ ಕ್ರಿಕೆಟಿಗ

ಕ್ರಿಕೆಟ್ ಪಟು ಚೆತೇಶ್ವರ್ ಪುಜಾರಾ ಅವರು ಗುಜರಾತ್ ವಿಧಾನಸಭೆ ಚುನಾವಣೆಗೆ ರಾಜ್‌ಕೋಟ್ ನಲ್ಲಿ ಮತ ಚಲಾಯಿಸಿದರು. ಇವರಷ್ಟೆ ಅಲ್ಲದೆ ಸಾಕಷ್ಟು ಸಿನಿಮಾ ನಟರು, ಕ್ರೀಡಾಪಟುಗಳು ಮತ್ತಿತರ ಸೆಲೆಬ್ರಿಟಿಗಳು ಇಂದು ತಮ್ಮ ಬ್ಯುಸಿ ವೃತ್ತಿ ಬದುಕಿನಿಂದ ಅಲ್ಪ ವಿರಾಮ ಪಡೆದು ಬಂದು ಮತ ಚಲಾಯಿಸಿ ಕರ್ತವ್ಯ ಮೆರೆದರು.

ಧನ್ಯವಾದ ಅರ್ಪಿಸಿದ ಅರುಣ್ ಜೇಟ್ಲಿ

ಧನ್ಯವಾದ ಅರ್ಪಿಸಿದ ಅರುಣ್ ಜೇಟ್ಲಿ

ಮೊದಲ ಹಂತದ ಚುನಾವಣೆ ಮುಗಿದಿದ್ದು, ಶಾಂತಿಯುತವಾಗಿ ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಸಿದ್ದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರತು ಕೆಂದ್ರ ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷದ ಮೂಲಕ ಬಂದಿರುವ ವರದಿಯನ್ನು ಗಮನಿಸಿದರೆ ಬಿಜೆಪಿ ಅತ್ಯದ್ಬುತ ಜಯ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.

English summary
Gujarat assembly elections-2017 First Phase voting begins today(December 09) at the poll stations to elect 89 members to Gujarat legislative assembly. 2nd phase will be taking place on Dece 14th. Results will be announced on December 18. Here are few pictures of the eleactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X