
Gujarat Election Results 2022 : ಗುಜರಾತ್ ವಿಧಾನಸಭಾ ಚುನಾವಣೆ :ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಕ್ಷೇತ್ರಗಳ ಕಥೆ ಏನು
ಅಹಮದಾಬಾದ್, ಡಿಸೆಂಬರ್ 8: ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ನ 2022ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಪ್ರಮುಖ ಸಂಗತಿ ಗಮನಿಸಬೇಕಾಗಿದೆ. ಗುಜರಾತ್‌ನ ಮೂವರು ಯುವ ನಾಯಕರ ಕ್ಷೇತ್ರಗಳಲ್ಲಿ 2017ರಲ್ಲಿ ಶೇಕಡಾ 69ಕ್ಕೆ ಮತದಾನವಾದರೆ ಈ ಬಾರಿ ಶೇಕಡಾ 63.5ರಷ್ಟು ಮತದಾನ ನಡೆದಿದೆ.
ಎಕ್ಸಿಟ್ ಪೋಲ್‌ಗಳು 22 ವರ್ಷಗಳ ಕಾಲ ರಾಜ್ಯವನ್ನು ಆಳಿದ ಬಿಜೆಪಿಗೆ ಮತ್ತೊಂದು ಪ್ರಚಂಡ ಗೆಲುವಿನ ಮುನ್ಸೂಚನೆ ನೀಡುತ್ತಿರುವಾಗ, ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೋರ್ ಸ್ಪರ್ಧಿಸಿರುವ ಕ್ಷೇತ್ರಗಳನ್ನು ನೋಡುವುದಾದರೆ 2017ರಲ್ಲಿ ಈ ಮೂವರು ಆಡಳಿತಾರೂಢ ಬಿಜೆಪಿಗೆ ಸವಾಲು ಹಾಕಿದ್ದರು ಮತ್ತು ಬಿಜೆಪಿಯ "ರಾಮ್" (ರೂಪಾನಿ-ಅಮಿತ್-ಮೋದಿ) ವಿರುದ್ಧ ಕಾಂಗ್ರೆಸ್‌ನ "ಎಚ್‌ಎಜೆ" (ಹಾರ್ದಿಕ್-ಅಲ್ಪೇಶ್-ಜಿಗ್ನೇಶ್‌ಗಾಗಿ) ಎಂದು ಕರೆಯಲ್ಪಟ್ಟರು.
Recommended Video
Gujarat Election Results 2022: ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಆದಾಗ್ಯೂ ಅಲ್ಪೇಶ್ 2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡರು, ರೂಪಾನಿ ಅವರನ್ನು ಸೆಪ್ಟೆಂಬರ್ 2021 ರಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ನೇಮಿಸಲಾಯಿತು. 2022ರ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಹಾರ್ದಿಕ್ ಬಿಜೆಪಿಗೆ ಪಕ್ಷಾಂತರವಾಗಿ ಕಾಂಗ್ರೆಸ್ ತೊರೆದರು. ಜಿಗ್ನೇಶ್ ಕಾಂಗ್ರೆಸ್ ಸೇರಿದರು ಅಲ್ಲಿಗೆ "ಎಚ್‌ಎಜೆ" ಕೊನೆಗೊಂಡಿತು.
ಪಾಟಿದಾರ್ ಸಮುದಾಯದ ಆಂದೋಲನದ ಮುಖವಾಗಿರುವ ಹಾರ್ದಿಕ್ ಪಟೇಲ್ ಅವರು ವಿರಾಮಗಾಮ್ ಕ್ಷೇತ್ರದಿಂದ ಎಎಪಿಯ ಅಮರಸಿಂಹ ಅನಾದಾಜಿ ಠಾಕೋರ್ ಮತ್ತು ಕಾಂಗ್ರೆಸ್‌ನ ಭರ್ವದ್ ಲಖಾಭಾಯಿ ಭಿಖಾಭಾಯಿ ವಿರುದ್ಧ ಸ್ಪರ್ಧಿಸಿದ್ದಾರೆ. ಮೇವಾನಿ ವಡ್ಗಾಮ್‌ನಿಂದ ಎಎಪಿಯ ದಲ್ಪತ್‌ಭಾಯ್ ದಹ್ಯಾಭಾಯಿ ಭಾಟಿಯಾ ಮತ್ತು ಬಿಜೆಪಿಯ ಮಣಿಭಾಯ್ ಜೇತಾಭಾಯಿ ವಘೇಲಾ ವಿರುದ್ಧ ಸ್ಪರ್ಧಿಸಿದ್ದಾರೆ.
ಅಲ್ಪೇಶ್ ಠಾಕೂರ್ ಅವರು ಗಾಂಧಿನಗರ ದಕ್ಷಿಣದಿಂದ ಎಎಪಿಯ ದೇವೇಂದ್ರಭಾಯ್ ಪ್ರವೀಣ್‌ಚಂದ್ರ ಪಟೇಲ್ ಮತ್ತು ಕಾಂಗ್ರೆಸ್‌ನ ಹಿಮಾಂಶು ಪಟೇಲ್ ವಿರುದ್ಧ ಸ್ಪರ್ಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯವಾರು ಕಡಿಮೆಯಾದ ಮತದಾನದ ಪ್ರಮಾಣಕ್ಕೆ ಅನುಗುಣವಾಗಿ ಮೂರು ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಶೇಕಡಾವಾರು ಪ್ರಮಾಣದಲ್ಲಿ ಕುಸಿತ ಕಂಡಿದೆ. ವಿರಾಮಗಮ್ 2017 ರ ಶೇಕಡ 68.10 ರಿಂದ 2022 ರಲ್ಲಿ 63.95 ಕ್ಕೆ ಶೇಕಡಾ 4.15 ರಷ್ಟು ಮತದಾನವನ್ನು ಕಂಡರೆ, ವಡ್ಗಮ್ 2017ರಲ್ಲಿ ಶೇಕಡಾ 72ರಷ್ಟು ಮತದಾನದಿಂದ 2022 ರಲ್ಲಿ ಶೇಕಡಾ 66.21ಕ್ಕೆ ಸುಮಾರು ಶೇಕಡಾ 6ರಷ್ಟು ಕುಸಿತವನ್ನು ಕಂಡಿದೆ. ಮೂರು ಸ್ಥಾನಗಳು, 2017 ರಲ್ಲಿ ಶೇಕಡಾ 70.77 ರಿಂದ 2022 ರಲ್ಲಿ ಶೇಕಡಾ 62.2 ಕ್ಕೆ, ಶೇಕಡಾ 8.57ರಷ್ಟು ಮತದಾನ ಕುಸಿತವಾಗಿದೆ.
ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಡಿಸೆಂಬರ್ 1 ಹಾಗೂ 5ರಂದು ಕ್ರಮವಾಗಿ ಮೊದಲ ಹಾಗೂ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 59.11 ಹಾಗೂ ಎರಡನೇ ಹಂತದಲ್ಲಿ 63.14ರಷ್ಟು ಮತದಾನವಾಗಿತ್ತು. ಶುಕ್ರವಾರ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ.

1,621 ಅಭ್ಯರ್ಥಿಗಳು ಕಣದಲ್ಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಗೆ ಭಾರೀ ಭದ್ರತೆ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಬಿಜೆಪಿ ಈ ಭಾರಿಯೂ ಗೆಲ್ಲುವ ವಿಶ್ವಾಸದಲ್ಲಿ ಇದೆ. ಚುನಾವಣಾ ಎಕ್ಸಿಟ್ ಪೋಲ್‌ಗಳು ಕೂಡ ಬಿಜೆಪಿಗೆ ಪೂರಕವಾಗಿ ಇವೆ. ಗುಜರಾತ್‌ನಲ್ಲಿ 182 ವಿಧಾನಸಭಾ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ.64.33ರಷ್ಟು ಮತದಾನವಾಗಿದೆ. ಆದರೆ, ಇದು 2017ರ ಚುನಾವಣೆಯಲ್ಲಿ ದಾಖಲಾದ ಮತದಾನಕ್ಕೆ ಹೋಲಿಸಿದರೆ ಶೇ.4ಕ್ಕಿಂತ ಕಡಿಮೆಯಾಗಿದೆ.
2017ರಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದ್ದಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಆಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.
ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಕಠಿಣ ಸ್ಫರ್ಧೆವನ್ನು ನೀಡಿತು. ಆದಾಗ್ಯೂ, ಆಮ್ ಆದ್ಮಿ ಪಾರ್ಟಿ ಮತ ಪಡೆಯುವ ಮೂಲಕ ಕಾಂಗ್ರೆಸ್‌ಗೆ ಪ್ರಬಲ ಹೊಡೆತ ನೀಡಬಹುದು. 2017 ರಲ್ಲಿ ಪಾಟಿದಾರ್ ಸಮುದಾಯದ ಪ್ರತಿಭಟನೆಯೊಂದಿಗೆ ಬಿಜೆಪಿ ಕೂಡ ಒತ್ತಡದಲ್ಲಿ ಸಿಲುಕಿತ್ತು. ಆದರೆ ಈ ಬಾರಿ ಪರಿಸ್ಥಿತಿಯು ಬಿಜೆಪಿಯ ಪರವಾಗಿದ್ದು, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು ಎನ್ನಲಾಗಿದೆ.