ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ಬಾನೆಟ್ ಮೇಲೆ ಕುಳಿತು ಸಿಂಹಗಳನ್ನು ಬೆನ್ನಟ್ಟಿದ್ದಕ್ಕಾಗಿ 3 ಬಂಧನ

|
Google Oneindia Kannada News

ಅಹಮದಾಬಾದ್ ಜನರವರಿ 7: ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಮೂರು ಸಿಂಹಗಳನ್ನು ವಾಹನದ ಮೇಲೆ ಕುಳಿತು ಹಿಂಬಾಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಗುಜರಾತ್‌ನ ಜುನಾಗಢ್‌ನಲ್ಲಿ ಅರಣ್ಯ ಇಲಾಖೆ ಮೂವರನ್ನು ಬಂಧಿಸಿದೆ.

ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬ ಮೂರು ಸಿಂಹಗಳನ್ನು ಬೆನ್ನಟ್ಟಿದ್ದಾನೆ. ಜೊತೆಗೆ ಸಿಂಹಗಳನ್ನು ತಾನು ಬೆನ್ನಟ್ಟುತ್ತಿರುವ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋದಲ್ಲಿ ಬಾನೆಟ್ ಮೇಲೆ ಕುಳಿತ ವ್ಯಕ್ತಿಯ ಕಾಲು ಕಾಣಿಸುತ್ತದೆ. ಮುಂಭಾಗದಲ್ಲಿ ಸಿಂಹಗಳು ನಡೆದುಕೊಂಡು ಹೋಗುವುದು ಕೂಡ ಕಾಣಿಸುತ್ತದೆ. ವಾಹನದ ಲೈಟ್ ಸಿಂಹದ ಮೇಲೆ ಬೀಳುತ್ತಿದ್ದಂತೆ ಸಿಂಹಗಳು ಮನೆಗಳಿರುವ ಕಡೆಗೆ ನಡೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಯುವಕನ ಮೇಲೆ ಕಾಡುಕೋಣ ದಾಳಿ: ಅರಣ್ಯ ಇಲಾಖೆ ಮೇಲೆ ಜನರ ಆಕ್ರೋಶಯುವಕನ ಮೇಲೆ ಕಾಡುಕೋಣ ದಾಳಿ: ಅರಣ್ಯ ಇಲಾಖೆ ಮೇಲೆ ಜನರ ಆಕ್ರೋಶ

ವರದಿಯ ಪ್ರಕಾರ, ಐದರಿಂದ ಆರು ಜನರ ಗುಂಪಿನಿಂದ ಸಿಂಹಗಳು ತೊಂದರೆಗೊಳಗಾಗಿವೆ. ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸಿಂಹಗಳು ಮುಂದೆ ಸಾಗುತ್ತಿರುವಾಗ ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಸಿಂಹಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.

Gujarat: 3 arrested for chasing lions sitting on bonnets

ವಿಡಿಯೋ ವೈರಲ್ ಆದ ಕೂಡಲೇ ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದು ವೈರಲ್ ವಿಡಿಯೋದಲ್ಲಿ ಕಂಡ ವ್ಯಕ್ತಿಯನ್ನು ಗುರುತಿಸಿದೆ. ಪ್ರಕರಣ ದಾಖಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಈ ಮೂವರು ರಾಜಸ್ಥಾನದಿಂದ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದರು ಎನ್ನಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರಾಧನಾ ಶಾಹು ಮಾತನಾಡಿ, 'ವಿಡಿಯೋ ಬಯಲಿಗೆ ಬಂದ ನಂತರ 6 ಜನರ ವಿರುದ್ಧ ಪ್ರಕರಣ ದಾಖಲಿಸಿ 3 ಮಂದಿಯನ್ನು ಬಂಧಿಸಲಾಗಿದೆ. ರಾತ್ರಿ ವೇಳೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪದ ಮೇಲೆ ಎರಡು ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಒಂದನ್ನು ಸಿಂಹಕ್ಕೆ ಕಿರುಕುಳ ನೀಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ' ಎಂದಿದ್ದಾರೆ.

English summary
3 arrested for chasing lions sitting on bonnets by forest department officials in Junagadh, Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X