ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಏಪ್ರಿಲ್ 21: ಕೋವಿಡ್-19 ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಕಡ್ಡಾಯ ಲೇಬಲ್ ಮತ್ತು ಕಲರ್ ಕೋಡ್ ಹೊಂದಿರುವ ಡಬಲ್ ಲೇಯರ್ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ನೀಡಿದೆ.

2016 ರ BMW ನಿರ್ವಹಣೆ ನಿಯಮಗಳ ಜೊತೆಗೆ ಐಸೊಲೇಷನ್ ವಾರ್ಡ್, ಕ್ವಾರಂಟೈನ್ ಸೆಂಟರ್, ಸ್ಯಾಂಪಲ್ ಕಲೆಕ್ಷನ್ ಸೆಂಟರ್, ಲ್ಯಾಬೊರೇಟರಿ, ಯು.ಎಲ್.ಬಿಗಳಲ್ಲಿ ಉತ್ತತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಎಲ್ಲರೂ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾರ್ಗಸೂಚಿಗಳು ಕೋವಿಡ್-19 ನಲ್ಲಿನ ಪ್ರಸ್ತುತ ಜ್ಞಾನ ಮತ್ತು ಎಚ್.ಐ.ವಿ, ಎಚ್1ಎನ್1 ನಂತಹ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿನ ತ್ಯಾಜ್ಯ ನಿರ್ವಹಣೆ ಮೇಲೆ ಆಧರಿಸಿದೆ.

ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!

ಹಾಗಾದ್ರೆ, ಕೋವಿಡ್-19 ತ್ಯಾಜ್ಯ ವಿಲೇವಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾರ್ಗಸೂಚಿಗಳೇನು.? ನೀವೇ ಓದಿರಿ...

ಕಡ್ಡಾಯವಾಗಿ ಲೇಬಲ್ ಹೊಂದಿರಬೇಕು

ಕಡ್ಡಾಯವಾಗಿ ಲೇಬಲ್ ಹೊಂದಿರಬೇಕು

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾರ್ಗಸೂಚಿಗಳ ಅನುಸಾರ, ಕೋವಿಡ್-19 ರೋಗಿಗಳಿರುವ ಐಸೊಲೇಷನ್ ವಾರ್ಡ್ ಹೊಂದಿರುವ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕಲರ್ ಕೋಡ್ ಹೊಂದಿರುವ 'ಕೋವಿಡ್-19 ತ್ಯಾಜ್ಯ' ಎಂಬ ಲೇಬಲ್ ಹಾಕಿರುವ ಕಸದ ಬುಟ್ಟಿ/ಬ್ಯಾಗ್/ಕಂಟೇನರ್ ಗಳನ್ನು ಕಡ್ಡಾಯವಾಗಿ ಇಡಬೇಕು. ಜೊತೆಗೆ 2016 ರ BMW ನಿರ್ವಹಣೆ ನಿಯಮಗಳ ಅನುಸಾರ ತ್ಯಾಜ್ಯಗಳನ್ನು ಬೇರ್ಪಡಿಸಬೇಕು.

ಲೀಕ್ ಆಗದಂತೆ ತಡೆಯಲು ಎರಡು ಬ್ಯಾಗ್ ಬಳಸಿ

ಲೀಕ್ ಆಗದಂತೆ ತಡೆಯಲು ಎರಡು ಬ್ಯಾಗ್ ಬಳಸಿ

ಕೋವಿಡ್-19 ಐಸೊಲೇಷನ್ ವಾರ್ಡ್ ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಡಬಲ್ ಲೇಯರ್ ಅಥವಾ ಎರಡು ಬ್ಯಾಗ್ ಗಳನ್ನು ಬಳಸಬೇಕು.

ಪ್ರತ್ಯೇಕವಾಗಿ ಸಂಗ್ರಹಿಸಿ

ಪ್ರತ್ಯೇಕವಾಗಿ ಸಂಗ್ರಹಿಸಿ

ಬಯೋ ಮೆಡಿಕಲ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಕೋವಿಡ್-19 ರೋಗಿಗಳಿಗಾಗಿ ಪ್ರತ್ಯೇಕ ಬಿನ್ ಇರಿಸಬೇಕು. ಎರಡನ್ನೂ ಪ್ರತ್ಯೇಕವಾಗಿ ಕಲೆಕ್ಷನ್ ವ್ಯಾನ್ ಗೆ ಹಾಕತಕ್ಕದ್ದು.

ಸೋಂಕು ರಹಿತ ಮಾಡಬೇಕು

ಸೋಂಕು ರಹಿತ ಮಾಡಬೇಕು

ಸೋಂಕಿಲ್ಲದ ಘನ ತ್ಯಾಜ್ಯ ವಸ್ತುಗಳನ್ನು 2016 ರ ಘನ ತ್ಯಾಜ್ಯ ವಿಲೇವಾರಿ ನಿಯಮಗಳ ಅನುಸಾರ ವಿಲೇವಾರಿ ಮಾಡಬೇಕು. ಹಾಗೇ, ಐಸೊಲೇಷನ್ ವಾರ್ಡ್ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಕುರಿತು ಪ್ರತ್ಯೇಕ ದಾಖಲೆಯನ್ನು ನಿರ್ವಹಿಸಬೇಕು. ಕೋವಿಡ್-19 ತ್ಯಾಜ್ಯಗಳನ್ನು ಸಂಗ್ರಹಿಸಲು ಬಳಸುವ ಕಂಟೇನರ್/ಬಿನ್/ಟ್ರಾಲಿಗಳನ್ನು ಪ್ರತಿದಿನ 1% ಸೋಡಿಯಮ್ ಹೈಪೋಕ್ಲೋರೈಟ್ ಸಲೂಷನ್ ನಿಂದ ಸೋಂಕು ರಹಿತಗೊಳಿಸಬೇಕು.

ಮಲ-ಮೂತ್ರ ವಿಸರ್ಜನೆ

ಮಲ-ಮೂತ್ರ ವಿಸರ್ಜನೆ

ಶೌಚಾಲಯಗಳನ್ನು ಬಳಸಲು ಸಾಧ್ಯವಾಗದ ಕೋವಿಡ್-19 ರೋಗಿಗಳ ಮಲ ಮತ್ತು ಮೂತ್ರ ವಿಸರ್ಜನೆಗಾಗಿ ಡೈಪರ್ ಗಳನ್ನು ಬಳಸಬೇಕು. ಅವುಗಳನ್ನು ಬಯೋ ಮೆಡಿಕಲ್ ವೇಸ್ಟ್ ಎಂದು ಪರಿಗಣಿಸಿ ಹಳದಿ ಬ್ಯಾಗ್/ಕಂಟೇನರ್ ಗಳಲ್ಲಿ ಸಂಗ್ರಹಿಸಬೇಕು. ಒಂದು ವೇಳೆ ಬೆಡ್ ಪ್ಯಾನ್ ಗಳನ್ನು ಬಳಸಿದರೆ, ಮಲ ಮತ್ತು ಮೂತ್ರ ವಿಸರ್ಜನೆ ಬಳಿಕ 0.5 ಪಿಸಿ ಕ್ಲೋರೈನ್ ಸಲ್ಯೂಷನ್ ನಿಂದ ಬೆಡ್ ಪ್ಯಾನ್ ಗಳನ್ನು ಸೋಂಕು ರಹಿತಗೊಳಿಸಬೇಕು.

ಕೆಂಪು ಬಣ್ಣದ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕಾಗಿರುವುದು...

ಕೆಂಪು ಬಣ್ಣದ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕಾಗಿರುವುದು...

ಈಗಾಗಲೇ ಬಳಸಿರುವ ಮುಖ ಗವುಸು, ಪ್ಲಾಸ್ಟಿಕ್ ಕವರ್ ಆಲ್, ಹ್ಯಾಝ್ಮಟ್ ಸೂಟ್, ನೈಟ್ರೈಲ್ ಗ್ಲೌಸ್ ಗಳನ್ನು ಕೆಂಪು ಬಣ್ಣದ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕು. ಬಳಕೆಯಾದ ಟ್ರಿಪಲ್ ಲೇಯರ್ ಮಾಸ್ಕ್/N95 ಮಾಸ್ಕ್, ಹೆಡ್ ಕ್ಯಾಪ್, ಶೂ ಕವರ್, ಲಿನೆನ್ ಗೌನ್, ಸೆಮಿ-ಪ್ಲಾಸ್ಟಿಕ್ ಕವರ್ ಆಲ್ ಗಳನ್ನು ಹಳದಿ ಬಣ್ಣದ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕು.

ಮಾರ್ಗಸೂಚಿ ಅನ್ವಯ ವಿಲೇವಾರಿ

ಮಾರ್ಗಸೂಚಿ ಅನ್ವಯ ವಿಲೇವಾರಿ

ಕ್ವಾರಂಟೈನ್ ಸೆಂಟರ್ ಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳನ್ನು ಎಂದಿನಂತೆ ವಿಲೇವಾರಿ ಮಾಡತಕ್ಕದ್ದು. ಆದ್ರೆ, ಅಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯವನ್ನು ಮಾರ್ಗಸೂಚಿಗಳ ಅನ್ವಯ ವಿಲೇವಾರಿ ಮಾಡಬೇಕಾಗಿದೆ.

English summary
Guidelines issued for handling of waste generated during Coronavirus patient's treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X