ಭೂತಾನ್ ಯುವರಾಜನಿಗೆ ಮನಸೋತ ಪ್ರಧಾನಿ ಮೋದಿ

ನವದೆಹಲಿ, ನವೆಂಬರ್ 02: ಭೂತಾನ್ ದೇಶ ದೊರೆ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಅವರ ಪುತ್ರ ಪುಟ್ಟ ರಾಜಕುಮಾರನ ಜತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿರುವ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಪ್ರವಾಸದಲ್ಲಿರುವ ಭೂತಾನ್ ನ ಅರಸು ಕುಟುಂಬದ ಜತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿರುವ ಚಿತ್ರ ಸದ್ದು ಮಾಡಿತ್ತು. ಭೂತಾನ್ ನ ಯುವರಾಜನಿಗೆ ಸುಷ್ಮ ಸ್ವರಾಜ್, ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮನ ಸೋತಿದ್ದಾರೆ.

ರಾಜ ಜಗ್ಮೆ ಐದು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಬುಧವಾರದಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಜಿಗ್ಮೆ ಅವರು ಮೋದಿ ಜೊತೆ ಮಾತುಕತೆ ನಡೆಸಿದರು. ಅತಿಥಿಗಳ ಸತ್ಕಾರ ಹಾಗೂ ಉಡುಗೊರೆ ನೀಡುವುದರಲ್ಲಿ ಪ್ರತಿ ಬಾರಿ ಎಲ್ಲರನ್ನು ಅಚ್ಚರಿಗೆ ದೂಡುವ ಪ್ರಧಾನಿ ಅವರು ಈ ಬಾರಿ ಕೂಡಾ ಹಾಗೆ ಮಾಡಿದ್ದಾರೆ. ಬಾಲಕ ಜಿಗ್ಮೆಗೆ ಚನ್ನಪಟ್ಟಣದ ಗೊಂಬೆಯ ಜೊತೆ ಪ್ರೀತಿಯ ಉಡುಗೊರೆಯನ್ನು ನೀಡಿದ್ದಾರೆ.

ಫುಟ್ಬಾಲ್- ಉಡುಗೊರೆ

ಫುಟ್ಬಾಲ್- ಉಡುಗೊರೆ

ಪುಟ್ಟ ರಾಜಕುಮಾರನ ಕೈ ಕುಲುಕಿದ ಮೋದಿ ನಂತರ ಫುಟ್ಬಾಲ್ ಆಟವಾಡಿದ್ದಾರೆ. ಪುಟ್ಟ ಬಾಲಕನಿಗೆ ಫಿಫಾ ಅಂಡರ್ 17 ಫುಟ್ಬಾಲ್ ಹಾಗೂ ಚೆಸ್ ಬೋರ್ಡನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪರಸ್ಪರ ನಮಸ್ಕಾರ ಮಾಡುವ ಭಂಗಿ

ಪರಸ್ಪರ ನಮಸ್ಕಾರ ಮಾಡುವ ಭಂಗಿ

ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಅವರು ಭೇಟಿ ವೇಳೆ ಭಾರತ-ಭೂತಾನ್ ಭದ್ರತೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು. ಚಿತ್ರದಲ್ಲಿ ಬಾಲಕ ಜಿಗ್ಮೆ ಹಾಗೂ ಪ್ರಧಾನಿ ಮೋದಿ ಪರಸ್ಪರ ನಮಸ್ಕಾರ ವಿನಿಮಯ ಮಾಡಿಕೊಂಡರು.

ಭಾರತ ಪ್ರವಾಸದಲ್ಲಿರುವ ಭೂತಾನ್ ಅರಸ

ಭಾರತ ಪ್ರವಾಸದಲ್ಲಿರುವ ಭೂತಾನ್ ಅರಸ

ಭಾರತ ಪ್ರವಾಸದಲ್ಲಿರುವ ಭೂತಾನ್ ನ ಅರಸು ಕುಟುಂಬವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮೊದಲಿಗೆ ಸ್ವಾಗತಿಸಿದರು. ಬಾಲಕ ಜಿಗ್ಮೆ ಜತೆ ಸುಷ್ಮಾ ಸ್ವರಾಜ್ ಅವರು ನಡೆದಾಡುವ ಚಿತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

Array

ನಿರ್ಮಲಾ ಸೀತಾರಾಮನ್ ಟ್ವೀಟ್

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂತಾನ್ ರಾಜ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು, ಕರ್ನಾಟಕದ ಚನ್ನಪಟ್ಟಣದ ಬೊಂಬೆಗಳಂತೆ ಭೂತಾನ್ ಅರಸು ದಂಪತಿ ಕಾಣುತ್ತಿದ್ದಾರೆ ಎಂದಿದ್ದಾರೆ. ಚನ್ನಪಟ್ಟಣದ ಗೊಂಬೆ ನೋಡಿ ರಾಜಕುವರ ನಲಿದಾಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+