ಜಿಎಸ್‌ಟಿ: ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್!
ಕೇಂದ್ರ ಸರ್ಕಾರವು ಜನರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಸಿದೆ. ಅಷ್ಟು ಮಾತ್ರವಲ್ಲ, ಜಿಎಸ್‌ಟಿ 2.0 ಪರಿಷ್ಕರಣೆಯು ಜನರಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಜಿಎಸ್‌ಟಿ ಪರಿಷ್ಕರಣೆಯನ್ನು ಕೇಂದ್ರ ಸರ್ಕಾರವು ದಸರಾ ಮತ್ತು ದೀಪಾವಳಿ ಗಿಫ್ಟ್ ಎಂದು ಬಣ್ಣಿಸಿದೆ. ಆದರೆ ಜಿಎಸ್‌ಟಿಯನ್ನು ವಿಮರ್ಶೆ ಮಾಡುವ ಬರದಲ್ಲಿ ಕಾಂಗ್ರೆಸ್ ಪಕ್ಷವು ಎಡವಟ್ಟೊಂದನ್ನು ಮಾಡಿಕೊಂಡಿದ್ದು. ಇದು ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ಅಲ್ಲದೇ ಬಿಹಾರ ವಿಧಾನಸಭೆ ಚುನಾವಣೆಯ ಸಮಯದಲ್ಲೇ ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್ ಕಾಂಗ್ರೆಸ್ ಪಾರ್ಟಿಗೆ ಹಿನ್ನಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಎಡವಟ್ಟೊಂದನ್ನು ಮಾಡಿಕೊಂಡಿದೆ. ಕೇರಳ ಕಾಂಗ್ರೆಸ್ ಮಾಡಿರುವ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾದಿಂದ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಿಎಸ್‌ಟಿ ವಿಮರ್ಶೆ ಮಾಡುವ ನೆಪದಲ್ಲಿ ವಿವಾದವನ್ನು ಕಾಂಗ್ರೆಸ್ ಪಕ್ಷವು ಮೈಮೇಲೆ ಎಳೆದುಕೊಂಡಿದೆ. ಬಿಹಾರವನ್ನು ಬೀಡಿಗೆ ಹೋಲಿಸಿ ಟ್ವೀಟ್ ಮಾಡಲಾಗಿದ್ದು ಇದು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಜಿಎಸ್‌ಟಿ ಸುಧಾರಣೆಗಳ ಮಾಡುವ ವಿಷಯದಲ್ಲಿ ಬಿಜೆಪಿಯನ್ನು ಟೀಕಿಸುವ ಚಾರ್ಟ್ ಒಂದನ್ನು ಕೇರಳ ಕಾಂಗ್ರೆಸ್ ಘಟಕ ಪೋಸ್ಟ್ ಇಂದು ಪೋಸ್ಟ್ ಮಾಡಿತ್ತು. ಆ ಪೋಸ್ಟ್‌ನಲ್ಲಿ ಬಿಡಿ ಮತ್ತು ಬಿಹಾರ ಎರಡೂ 'ಬಿ' ನಿಂದ ಪ್ರಾರಂಭವಾಗುತ್ತವೆ. ಈಗ ಅದನ್ನು ನಾವು ಪಾಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಕಾಂಗ್ರೆಸ್‌ನ ಕೇರಳ ಘಟಕ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿತ್ತು. ಕೇರಳ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ ಕೂಡಲೇ ಇದು ವಿವಾದ ಸ್ವರೂಪ ಪಡೆದುಕೊಂಡಿತ್ತು.
ಇದು ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಟ್ವೀಟ್ ಡಿಲೀಟ್ ಮಾಡಲಾಗಿದ್ದು, ಕೇರಳ ಕಾಂಗ್ರೆಸ್ ಕ್ಷಮೆ ಕೋರಿದೆ. ಆದರೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಇದನ್ನು ಬಿಹಾರ ಹಾಗೂ ಬಿಹಾರದ ಜನರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಪಕ್ಷವು ಬಿಹಾರ ಮತ್ತು ಬಿಹಾರಿಗಳನ್ನು ಇಷ್ಟೊಂದು ತಿರಸ್ಕಾರದಿಂದ ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಿಹಾರದಲ್ಲಿ ಯಾವುದೇ ನೆಲೆ ಇಲ್ಲದಿರುವುದು ಒಂದು ವಿಷಯ - ಆದರೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುವ ಶ್ರಮಶೀಲ, ಉದ್ಯಮಶೀಲ ಜನರನ್ನು ತಿರಸ್ಕಾರ ಭಾವದಿಂದ ನೋಡುವುದು ಕಾಂಗ್ರೆಸ್ಸಿನ ದುರಹಂಕಾರ ಮತ್ತು ತಿರಸ್ಕಾರವನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿ ಹೇಳಿದೆ.
ಮುಂದುವರಿದು ಇದು ಹೊಸದೇನು ಅಲ್ಲ. ಮೊದಲನೆಯದಾಗಿ, ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಬಿಹಾರಿಗಳ ಡಿಎನ್‌ಎಯನ್ನು "ಕೀಳು" ಎಂದು ಕರೆದು ಅವಮಾನಿಸಿದ್ದಾರೆ. ಈಗ, ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ತಮ್ಮ "ಮತ ಅಧಿಕಾರ ಯಾತ್ರೆ" ಎಂದು ಕರೆಯಲ್ಪಡುವ ಮೂಲಕ, ತಮಿಳುನಾಡು, ಕರ್ನಾಟಕ ಮತ್ತು ದೇಶದ ವಿವಿಧ ರಾಜ್ಯಗಳಿಂದ ಇಂಡಿಯಾ ಮೈತ್ರಿಕೂಟದ ರಾಜಕಾರಣಿಗಳನ್ನು ಆಹ್ವಾನಿಸಿ, ತಮ್ಮ ರಾಜ್ಯಗಳಲ್ಲಿ ಪ್ರಾಮಾಣಿಕ ಜೀವನ ನಡೆಸುತ್ತಿರುವ ಬಿಹಾರಿಗಳನ್ನು ನಿಂದಿಸಿದ್ದಾರೆ.
It is shameful that the Congress continues to stereotype Bihar and Biharis with such contempt. Having no base in Bihar is one thing — but to belittle the hardworking, enterprising people who contribute to every sphere of national life exposes Congress’ arrogance and disdain.… pic.twitter.com/IppjauImYl
— BJP (@BJP4India) September 5, 2025
ಕಾಂಗ್ರೆಸ್ ಬಿಹಾರಿಗರ ಕ್ಷಮೆಯಾಚಿಸಬೇಕು. ಆದರೆ, ಅದಕ್ಕಿಂತ ಮುಖ್ಯವಾಗಿ, ಜನರು ನಿಜವಾದ ತೀರ್ಪನ್ನು ಮತಪೆಟ್ಟಿಗೆಯಲ್ಲಿ ಕೊಡುತ್ತಾರೆ. ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವನ್ನು ಒಮ್ಮೆಗೇ ನಿರ್ನಾಮ ಮಾಡುತ್ತಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications