ಜಿಎಸ್ಟಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆ : ಬ್ರಿಕ್ಸ್ ನಲ್ಲಿ ಮೋದಿ
ಕ್ಸಿಯಾಮೆನ್, ಆಗಸ್ಟ್ 4: "'ಸರಕು ಮತ್ತು ಸೇವಾ ತೆರಿಗೆ'ಯ ಜಾರಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆ," ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಚೀನಾದ ಕ್ಸಿಯಾಮೆನ್ ನಲ್ಲಿ ಬ್ರಿಕ್ಸ್ ವಾಣಿಜ್ಯ ಸಮ್ಮೇಳನ ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳು ಭಾರತದ ಆರ್ಥಿಕತೆಯನ್ನು ವಿಸ್ತಾರಿಸಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಕೌಶಲ್ಯಯುಕ್ತ, ಜ್ಞಾನಾಧಾರಿತ, ತಾಂತ್ರಿಕ ಜ್ಞಾನ ಇರುವ ಸಮಾಜ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications