ಜಿಎಸ್ ಟಿಯಿಂದ ಸಣ್ಣ, ಮಧ್ಯಮ ವ್ಯಾಪಾರಿಗಳಿಗೆ ಬೃಹತ್ ನಷ್ಟ: ಚಿದಂಬರಂ
ಶಿವಗಂಗಾ(ತಮಿಳುನಾಡು), ಜುಲೈ 1: ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಯಿಂದ ಅತೀ ಸಣ್ಣ, ಸಣ್ಣ, ಮಧ್ಯಮ ವ್ಯಾಪಾರಿಗಳು ಹೆಚ್ಚಿನ ನಷ್ಟ ಅನುಭವಿಸಲಿವೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನ ಶಿಗಂಗಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ, ಜಿಎಸ್ ಟಿ ಕುರಿತ ತಮ್ಮ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಿದ್ದರು.

ಈಗಾಗಲೇ ಕೇಂದ್ರ ಎನ್ ಡಿಎ ಸರ್ಕಾರ ಜಾರಿಗೊಳಿಸಿರುವ ಜಿಎಸ್ ಟಿಯು ಮೂಲ ಕರಡಿನಲ್ಲಿ ತಜ್ಞರು ಪರಿಚಯಿಸಿದಂತೆ ಇಲ್ಲ. ಈ ಹೊಸ ನೀತಿಯು ಖಂಡಿತವಾಗಿಯೂ ಅತೀ ಸಣ್ಣ, ಸಣ್ಣ, ಮಧ್ಯಮ ವ್ಯಾಪಾರಿಗಳಿಗೆ ಭಾರೀ ಪೆಟ್ಟು ನೀಡಲಿದೆ ಎಂದು ಅವರು ತಿಳಿಸಿದರು.
ಜೂನ್ 30 ರ ಮಧ್ಯರಾತ್ರಿ ಜಿಎಸ್ ಟಿ ಜಾರಿಗಾಗಿ ಏರ್ಪಡಿಸಿದ್ದ ವಿಶೇಷ ಸಂಸತ್ ಅಧಿವೇಶನವನ್ನು ಬಹಿಷ್ಕರಿಸಿದ್ದ ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಇನ್ನಿತರ ಪಕ್ಷಗಳು ಜಿಎಸ್ ಟಿ ಕುರಿತು ಋಣಾತ್ಮಕ ಅಭಿಪ್ರಾಯ ಹೊಂದಿವೆ.











Click it and Unblock the Notifications