PM Modi: ನವರಾತ್ರಿ ಮೊದಲ ದಿನದಿಂದಲೇ ದೇಶದ ಜನರಿಗೆ ಬಂಪರ್ ಧಮಾಕ: ಪ್ರಧಾನಿ ಮೋದಿ ಮಹತ್ವದ ಭಾಷಣದಲ್ಲಿ ಹೇಳಿದ್ದೇನು?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 21) ಮಹತ್ವದ ಭಾಷಣ ಮಾಡಿದರು. ಈ ವೇಳೆ ದೇಶದ ಜನತೆಗೆ ನಾಳೆಯಿಂದ ಅಂದರೆ ಸೆಪ್ಟೆಂಬರ್ 22ರಿಂದ ಏನೆಲ್ಲಾ ಧಮಾಕ ಹೊಡೆಯಲಿದೆ ಎನ್ನುವ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಕುತೂಹಲ ಬಹುತೇಕರಲ್ಲಿ ಇರುತ್ತದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 21ರ ಭಾನುವಾರ ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಆರಂಭಿಸಿದರು. ಈ ವೇಳೆ ಅವರು ಮೊದಲಿಗೆ ದೇಶದ ಜನರಿಗೆ ನವರಾತ್ರಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ನಾಳೆ ನವರಾತ್ರಿ ಹಬ್ಬದ ಮೊದಲ ದಿನ ಆರಂಭ ಆಗಲಿದೆ. ನವರಾತ್ರಿ ಮೊದಲ ದಿನ ಅಂದರೆ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ಜಾರಿಯಾಲಿದೆ. ಇದರಿಂದ ಎಲ್ಲಾ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭ ಆಗಲಿದೆ ಎಂದು ಹೇಳಿದರು.

ಹೊಸ ಜಿಎಸ್ಟಿಯಿಂದ ತುಂಬಾ ಜನರಿಗೆ ತೆರಿಗೆ ಕಡಿಮೆಯಾಗಿದ್ದು, ಅದರಲ್ಲೂ ಇದರಿಂದ ಮಧ್ಯಮ ವರ್ಗದ ಜನರಿಗೆ ತುಂಬಾ ಹಣ ಉಳಿತಾಯ ಆಗಲಿದೆ. ನಾಳೆಯಿಂದ ಈ ಹೊಸ ಜಿಎಸ್‌ಟಿ ದರಗಳು ಜಾರಿಯಾಗಲಿದ್ದು, ಇದು ದೇಶದ ಜನರಿಗೆ ದೊಡ್ಡ ಉಳಿತಾಯ ಉತ್ಸವದ ಹಬ್ಬವಾಗಲಿದೆ. ಇದು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಆಗಿದೆ. ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಗೆ ಡಬಲ್ ಧಮಾಕ ಹೊಡೆಯಲಿದೆ ಎಂದು ಹೇಳಿದರು.
ಹೊಸ ಜಿಎಸ್‌ಟಿ ದರಗಳು ದೇಶದ ಬೆಳವಣಿಗೆಯನ್ನು ವೇಗಗೊಳಿಸಲಿದೆ. ಅಲ್ಲದೆ, ವ್ಯವಹಾರವನ್ನು ಸರಳ ಮಾಡುತ್ತವೆ. ಹೂಡಿಕೆಯನ್ನು ಹೆಚ್ಚು ಆಕರ್ಷಕ ಆಗಿಸುತ್ತವೆ. ಈ ಅಭಿವೃದ್ಧಿಯ ರೇಸ್‌ನಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಎಂದು ಹೇಳಿದರು.
ಭಾರತವು 2017ರಲ್ಲಿ ಜಿಎಸ್‌ಟಿ ಸುಧಾರಣೆಯನ್ನು ಪ್ರಾರಂಭ ಮಾಡಿದಾಗ, ಅದು ಹಳೆಯ ಇತಿಹಾಸವನ್ನು ಬದಲಾಯಿಸುವ ಮತ್ತು ಹೊಸ ಯುಗ ಆರಂಭ ಆಗಿತ್ತು. ತುಂಬಾ ವರ್ಷಗಳಿಂದ ನಮ್ಮ ದೇಶದ ಜನರು ಮತ್ತು ವ್ಯಾಪಾರಿಗಳು ವಿವಿಧ ತೆರಿಗೆಗಳ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಪ್ರತ್ಯೇಕ ತೆರಿಗೆ, ಪರೋಕ್ಷ ತೆರಿಗೆ, ನೇರ ತೆರಿಗೆಗಳು ಸೇರಿದಂತೆ ತುಂಬಾ ತೆರಿಗೆಗಳು ಇದ್ದವು.
ಇದರಿಂದ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸರಕುಗಳನ್ನು ಸಗಾಣೆ ಮಾಡಬೇಕೆಂದರೆ, ತುಂಬಾ ಚೆಕ್ ಪೋಸ್ಟ್‌ಗಳನ್ನು ದಾಟಿಕೊಂಡು ಹೋಗಬೇಕಿತ್ತು ಎಂದು ಪ್ರಧಾನಿ ನರೆಂದ್ರ ಮೋದಿ ಅವರು ಭಾಷಣದ ವೇಳೆ ಜನರು ಹಾಗೂ ವ್ಯಾಪರಿಗಳ ಕಷ್ಟಗಳನ್ನ ತೆರೆದಿಟ್ಟರು.
ಇನ್ನು ಸೆಪ್ಟೆಂಬರ್ 22ರಿಂದ ಹೊರ ಜಿಎಸ್‌ಟಿ ದರಗಳು ಜಾರಿಯಾಗಲಿದ್ದು, ಇದು ದೇಶದ ಜನರಲ್ಲಿ ಸಂತೋಷ ತರಲಿದೆ. ಒಂದು ರಾಷ್ಟ್ರ ಒಂದು ತೆರಿಗೆ ಆಶಯವು ಜಿಎಸ್ಟಿಯಿಂದ ಸಾಕಾರಗೊಂಡಿದೆ. ಪ್ರತೀ ಕುಟುಂಬಗಳಿಗೂ ಈ ಜಿಎಸ್‌ಟಿ ಸುಧಾರಣೆ ತುಂಬಾ ಸಹಾಯಕ ಆಗಲಿದೆ. ಈ ಮೂಲಕ ದೇಶದ ಪ್ರಗತಿಯನ್ನು ಹೆಚ್ಚಿಸಲಿದೆ ಎಂದು ಹೇಳಿದರು. ಹೀಗೆ ಸತತ 20 ನಿಮಿಷಕ್ಕೂ ಅಧಿಕ ಭಾಷಣ ಮಾಡುವ ಮೂಲಕ ಈ ಭರ್ಜರಿ ಧಮಾಕದ ಬಗ್ಗೆ ವಿವರಿಸಿದರು.












Click it and Unblock the Notifications