ಜಿ.ಎಸ್.ಟಿ ಜಾರಿಯಿಂದ ಔಷಧಗಳ ಲಭ್ಯತೆಗೆ ಆತಂಕ ಬೇಡ

ಬೆಂಗಳೂರು, ಜುಲೈ 12: ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಜಾರಿಯಿಂದ ಔಷಧಗಳ ಕೊರತೆ ಉಂಟಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ರೋಗಿಗಳು ಆತಂಕ ಪಡುವ ಅಗತ್ಯವಿಲ್ಲ. ಜಿ.ಎಸ್.ಟಿ. ಜಾರಿಯಿಂದ ಔಷಧಗಳ ಲಭ್ಯತೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದು ಔಷಧಿ ವಿತರಕರ ಸಂಘ ಸ್ಪಷ್ಟಪಡಿಸಿದೆ.

"ಔಷಧ ವಿತರಕರು ಔಷಧಿಗಳನ್ನು ಎಂದಿನಂತರ ಸಾರ್ವಜನಿಕರಿಗೆ ಲಭಿಸುವಂತೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಜಿ.ಎಸ್.ಟಿ. ಜಾರಿಯಿಂದ ಔಷಧ ಲಭ್ಯತೆಯ ಬಗ್ಗೆ ಯಾವುದೇ ಆತಂಕಪಡುವ ಅವಶ್ಯಕತೆ ಇರುವುದಿಲ್ಲ," ಎಂದು ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಚೇರಿ ಪ್ರಕಟಣೆ ತಿಳಿಸಿದೆ.

GST: Do not be afraid of the availability of drugs

ಇದರ ಜತೆಗೆ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರಿಗೆ ಔಷಧ ಲಭ್ಯತೆಯ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಎಲ್ಲಾ ಜಿಲ್ಲಾ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರ ದೂರವಾಣಿ ಸಂಖ್ಯೆ ಮತ್ತು ಇತರ ವಿವರಗಳು ಇಲಾಖೆಯ ಅಂತರ್ಜಾಲ ತಾಣ http://drugs.kar.nic.inನಲ್ಲಿ ಲಭ್ಯವಿದ್ದು, ಯಾವುದೇ ಸಂಶಯಗಳಿದ್ದರೆ ಸಾರ್ವಜನಿಕರು ಕರೆ ಮಾಡಿ ತಮ್ಮ ಅನುಮಾಗಳನ್ನು ಬಗೆಹರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+