ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಪರಿವೀಕ್ಷಣೆ ಉಪಗ್ರಹ EOS-03 ಉಡಾವಣೆ ಯಶಸ್ವಿ, ಆದರೆ..

|
Google Oneindia Kannada News

ಶ್ರೀಹರಿಕೋಟ, ಆಗಸ್ಟ್ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್‌-3(EOS-3)ಯನ್ನು ಗುರುವಾರ ಬೆಳಗ್ಗೆ 5.43ಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ)ದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿದೆ.

ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ, ಆದರೆ ಕ್ರಯೋಜೆನಿಕ್‌ನಲ್ಲಿ ದೋಷಕಂಡುಬಂದ ಹಿನ್ನೆಲೆಯಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ.

 ಇಸ್ರೋದಿಂದ ಮತ್ತೊಂದು ಉಪಗ್ರಹ EOS-03 ಉಡಾವಣೆಗೆ ಕ್ಷಣಗಣನೆ ಇಸ್ರೋದಿಂದ ಮತ್ತೊಂದು ಉಪಗ್ರಹ EOS-03 ಉಡಾವಣೆಗೆ ಕ್ಷಣಗಣನೆ

ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಮಿಷನ್ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಉಡಾವಣೆ ಬಳಿಕ ಇಸ್ರೋ ಹೇಳಿದೆ

ರಾಷ್ಟ್ರವು ಸ್ವಾತಂತ್ರ್ಯ ದಿನಾಚರಣೆಯನ್ನು ಇಸ್ರೋದ ಸಾಧನೆಯೊಂದಿಗೆ ಆಚರಿಸಲು ಎದುರು ನೋಡುತ್ತಿದೆ. ಈ ನಡುವೆ ಉಡ್ಡಯನ ಸಂದರ್ಭದ ಹವಾಮಾನ ಪರಿಸ್ಥಿತಿ ಕುರಿತು ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿ ಎಚ್ಚರಿಕೆ ನೀಡಿತ್ತು. ಸದ್ಯ 'ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಎಸ್ಎಚ್‌ಎಆರ್‌ನಿಂದ ಜಿಎಸ್‌ಎಲ್‌ವಿ-ಎಫ್‌10/ಇಒಎಸ್‌-03 ಉಪಗ್ರಹ ಯಶಸ್ವಿಯಾಗಿ ಹಾರಿದೆ. ಈ ಬಗ್ಗೆ ಇಸ್ರೊ ಟ್ವೀಟ್‌ ಮಾಡಿದೆ.

GSLV-F10 Mission Not Fully Accomplished Due To Technical Anomaly: ISRO

EOS-3 ಉಪಗ್ರಹ ಭೂಚಲನೆಯ ಗತಿ ಅವಲೋಕಿಸಲಿದೆ. ಇದರಿಂದ ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಅನುಕೂಲವಾಗಲಿದೆ. 2020ರ ಮಾರ್ಚ್​​ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ತಾಂತ್ರಿಕ ದೋಷ ಹಿನ್ನೆಲೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.

ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಮತ್ತು ಕೆಲವು ದೇಸಿ ಉಪಗ್ರಹಗಳನ್ನು ಹೊಂದಿದೆ.

ಇಒಎಸ್-03 ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್-10ನ್ನು ಹೊತ್ತೊಯ್ಯಲಿದೆ ಎಂದು ಇಸ್ರೊ ತಿಳಿಸಿದೆ. EOS-3 ಉಪಗ್ರಹವನ್ನು ಈ ಹಿಂದೆ GISAT-1 ಎಂದೂ ಕರೆಯಲ್ಪಡುತ್ತಿತ್ತು. ಇದು ಎರಡು ಜೋಡಿಯಾಗಿರುವ ಉಪಗ್ರಹಗಳಲ್ಲಿ ಒಂದಾಗಿದೆ, ಇನ್ನೊಂದು GISAT-2 ಅಥವಾ EOS-5. ಪ್ರತಿ 30 ನಿಮಿಷಗಳಿಗೊಮ್ಮೆ ಭಾರತೀಯ ಭೂಪ್ರದೇಶದ ಚಿತ್ರವನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ.

2 ಸಾವಿರದ 268 ಕೆಜಿ ತೂಕದ ಜಿಎಸ್ ಎಲ್ ವಿ-ಎಫ್ 10 ಸಂಕೇತನಾಮ ಇಒಎಸ್ -3, ಜಿಯೋ-ಉಪಗ್ರಹಗಳ ಹೊಸ ಸರಣಿಯ ಭಾಗವಾಗಿದೆ, ಇದು ನಾಗರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇಸ್ರೋದ ಜಿಎಸ್‌ಎಲ್‌ವಿ-ಎಫ್ 10 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಿದೆ. ಭಾರತ ನಿರ್ಮಿತ ಪ್ರಮುಖ ಉಪಗ್ರಹದ ಈ ವರ್ಷದ ಮೊದಲ ಉಡಾವಣೆ ಇದಾಗಿದೆ.

ಬಾಹ್ಯಾಕಾಶವಾಹನದ ಪೇಲೋಡ್ ಫೇರಿಂಗ್, ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ ತುದಿ 4 ಮೀ ಓಜಿವ್ (ಬುಲೆಟ್ ತರಹದ ಆಕಾರ) ಆಗಿರುವುದು ಇದೇ ಮೊದಲು. ಈ ಬದಲಾವಣೆಗಳು ವಾಹನವನ್ನು ಹೆಚ್ಚು ವಾಯುಬಲ ಹೊಂದುವಂತೆ ಮಾಡುತ್ತದೆ ಮತ್ತು ಅದೇ ಪೇಲೋಡ್ ಫೈರಿಂಗ್ ದೇಶದ ಮಾನವ ಅಂತರಿಕ್ಷಯಾನಕ್ಕೆ ಬಳಸುವ ಸಾಧ್ಯತೆ ಇದೆ.

ಇದು ಚಂದ್ರಯಾನ -2 ಕಾರ್ಯಾಚರಣೆಯ ನಂತರ ಜಿಎಸ್‌ಎಲ್‌ವಿ ಎಂಕೆ III ನ ಎರಡನೇ ಕಾರ್ಯಾಚರಣೆಯ ಹಾರಾಟವಾಗಿದ್ದು, ಉಡಾವಣಾ ವಾಹನವು "ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ" ಬಾಹ್ಯಾಕಾಶ ನೌಕೆಯನ್ನು ಹೆಚ್ಚಿನ ಕಕ್ಷೆಯಲ್ಲಿ ಇರಿಸಿದಾಗ ಮತ್ತು ಮುಂಬರುವ ಕುಶಲತೆಗೆ ಇಂಧನವನ್ನು ಉಳಿಸುತ್ತದೆ ಎಂದು ಇಸ್ರೊ ಹೇಳಿದೆ.

ಬಾಹ್ಯಾಕಾಶವಾಹನದ ಪೇಲೋಡ್ ಫೇರಿಂಗ್, ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ ತುದಿ 4 ಮೀ ಓಜಿವ್ ಆಗಿರುವುದು ಇದೇ ಮೊದಲು. ಈ ಬದಲಾವಣೆಗಳು ವಾಹನವನ್ನು ಹೆಚ್ಚು ವಾಯುಬಲ ಹೊಂದುವಂತೆ ಮಾಡುತ್ತದೆ ಮತ್ತು ಅದೇ ಪೇಲೋಡ್ ಫೈರಿಂಗ್ ದೇಶದ ಮಾನವ ಅಂತರಿಕ್ಷಯಾನಕ್ಕೆ ಬಳಸುವ ಸಾಧ್ಯತೆ ಇದೆ.

ಬಾಹ್ಯಾಕಾಶ ಸಂಸ್ಥೆ ಮುಂದಿನ ಐದು ತಿಂಗಳಲ್ಲಿ ನಾಲ್ಕು ಉಡಾವಣೆಗಳನ್ನು ನಡೆಸಲಿದ್ದು ಇವು ಎಲ್ಲಾ ಭೂಮಿಯ ವೀಕ್ಷಣೆ ಉಪಗ್ರಹಗಳು. ನಾಲ್ಕರಲ್ಲಿ ಒಂದು ಸಣ್ಣ ಉಪಗ್ರಹವನ್ನು ಉಡಾವಣಾ ವಾಹನವು ತನ್ನ ಮೊದಲ ಹಾರಾಟದಲ್ಲಿ ಕೊಂಡೊಯ್ಯುತ್ತದೆ.

ಸಾಂಕ್ರಾಮಿಕ ರೋಗದಿಂದಾಗಿ ಗಗನಯಾನ್ ಮಿಷನ್, ಚಂದ್ರಯಾನ -3 ಮಿಷನ್, ಮತ್ತು ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಕಾರ್ಯಾಚರಣೆಗಳು ವಿಳಂಬವಾಗಿವೆ.

English summary
Indian Space Research Organisation launched Earth Observation Satellite, EOS-03 from Satish Dhawan Space Centre, Sriharikota at 5.43 am today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X