ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಜೆಗಳಿಗೆ ಹೊಸ ಪ್ರಯಾಣ ಮಾರ್ಗಸೂಚಿ ಹಿಂಪಡೆದ ಭಾರತ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಬ್ರಿಟನ್ ಪ್ರಜೆಗಳಿಗೆ ವಿಧಿಸಲಾಗಿದ್ದ ನೂತನ ಪ್ರಯಾಣ ಮಾರ್ಗಸೂಚಿಯನ್ನು ಭಾರತ ಹಿಂಪಡೆದಿದೆ.

ಲಂಡನ್‌ನಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ವಿಧಿಸಿದ್ದ 10 ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ತೆಗೆದುಹಾಕಿದ್ದು, ಪ್ರಯಾಣ ಸಲಹೆಯನ್ನು ಮರುಸ್ಥಾಪಿಸಿದೆ.

ಭಾರತದ ಕೊರೊನಾ ಲಸಿಕೆ ಪ್ರಮಾಣಪತ್ರದ ಕುರಿತು ಬ್ರಿಟನ್ ಹೇಳಿದ್ದೇನು?ಭಾರತದ ಕೊರೊನಾ ಲಸಿಕೆ ಪ್ರಮಾಣಪತ್ರದ ಕುರಿತು ಬ್ರಿಟನ್ ಹೇಳಿದ್ದೇನು?

ಸೆಪ್ಟೆಂಬರ್‌ನಲ್ಲಿ, ಬ್ರಿಟನ್ ಗೆ ಪ್ರಯಾಣಿಸುವ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಭಾರತೀಯರಿಗೂ 10 ದಿನಗಳ ಕ್ವಾರಂಟೈನ್ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವುದನ್ನು ಯುಕೆ ಕಡ್ಡಾಯಗೊಳಿಸಿತು.

Govt Withdraws Travel Advisory That Added Covid Checks, Restrictions On Those Arriving From UK

ಅಕ್ಟೋಬರ್ 1 ರಂದು ದೇಶಕ್ಕೆ ಆಗಮಿಸುವ ಯುಕೆ ಪ್ರಜೆಗಳಿಗೆ ಹೆಚ್ಚುವರಿ ಪರೀಕ್ಷೆಗಳನ್ನು ವಿಧಿಸುವ ಮೂಲಕ ಭಾರತವೂ ಸಹ ನಿರ್ಬಂಧಗಳನ್ನು ವಿಧಿಸಿ, ದೇಶಕ್ಕೆ ಬಂದ ನಂತರ ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಗೆ ಒಳಪಡಿಸಿತ್ತು.

"2021 ಅಕ್ಟೋಬರ್ 1 ರಂದು ಭಾರತಕ್ಕೆ ಆಗಮಿಸಿದ ಬ್ರಿಟನ್ ಪ್ರಜೆಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ ಮತ್ತು 2021 ಫೆಬ್ರವರಿ 17 ರ ಅಂತರರಾಷ್ಟ್ರೀಯ ಆಗಮನದ ಹಿಂದಿನ ಮಾರ್ಗಸೂಚಿಗಳು ಯುಕೆಯಿಂದ ಭಾರತಕ್ಕೆ ಬರುವವರಿಗೆ ಅನ್ವಯವಾಗುತ್ತವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಬ್ರಿಟನ್ ಸರ್ಕಾರವು ಭಾರತವನ್ನು ತನ್ನ ಲಸಿಕೆ-ಅರ್ಹ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದರರ್ಥ ಲಸಿಕೆ ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಹೆಚ್ಚಿನ ಸಮಯ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿರುವುದಿಲ್ಲ ಎಂದು ಹೇಳಿತ್ತು.

ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಸುಮಾರು 37 ಹೊಸ ರಾಷ್ಟ್ರಗಳ ಲಸಿಕೆ ಪಡೆದ ಅರ್ಹ ಪ್ರಯಾಣಿಕರನ್ನು ಸಂಪೂರ್ಣ ಲಸಿಕೆ ಪಡೆದು ಹಿಂತಿರುಗಿದ ಯುಕೆ ನಿವಾಸಿಗಳಂತೆ ಪರಿಗಣಿಸಲಾಗುವುದು, ಆದ್ದರಿಂದ ಅವರು ಇಂಗ್ಲೆಂಡ್ ಗೆ ಬರುವ ಮುನ್ನ 10 ದಿನಗಳ ಕಾಲ ಕ್ವಾರೈಂಟೈನ್ ಅಗತ್ಯವಿಲ್ಲ ಎಂದು ಡಿಪಾರ್ಟ್ ಮೆಂಟ್ ಫಾರ್ ಟ್ರಾನ್ಸ್ ಪೋರ್ಟ್ ಹೇಳಿದೆ.

ಸಾರ್ವಜನಿಕ ಆರೋಗ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಮ್ಮ ಸಚಿವಾಲಯಗಳ ನಡುವಿನ ನಿಕಟ ತಾಂತ್ರಿಕ ಸಹಕಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತದ ಬ್ರಿಟಿಷ್ ಹೈ ಕಮಿಷನ್‌ನ ವಕ್ತಾರರು ತಿಳಿಸಿದ್ದಾರೆ.

ಲಸಿಕೆ ಪ್ರಮಾಣೀಕರಣದ ವಿಸ್ತರಣೆಯು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮೂಲಕ ಸುರಕ್ಷತೆ ಮತ್ತು ಸುಸ್ಥಿರ ರೀತಿಯಲ್ಲಿ ಜನರು ಮತ್ತೊಮ್ಮೆ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಒಂದು ಮುಂದಿನ ಹೆಜ್ಜೆಯಾಗಿದೆ" ಎಂದು ವಕ್ತಾರರು ಹೇಳಿದರು.

ಅಕ್ಟೋಬರ್ 11 ರಿಂದ ಎರಡು ಡೋಸ್ ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರು ಯುಕೆಗೆ ಬರುವ 14 ದಿನಗಳ ಮೊದಲು ಕ್ವಾರಂಟೈನ್ ಮಾಡದೇ ಪ್ರಯಾಣಿಸಬಹುದು, ಪೂರ್ವ-ನಿರ್ಗಮನ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಅಥವಾ ಅವರ ಆಗಮನದ ನಂತರ 8 ನೇ ದಿನದ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ಭಾರತವು ಕೂಡ ಬ್ರಿಟನ್ ಪ್ರಜೆಗಳಿಗೆ ವಿಧಿಸಿದ್ದ ಮಾರ್ಗಸೂಚಿಯನ್ನು ಹಿಂಪಡೆದಿದೆ.

ಭಾರತದ ಕೋವಿಶೀಲ್ಡ್‌ ಲಸಿಕೆ ಮತ್ತು ಲಸಿಕೆ ಪಡೆದವರಿಗೆ ನೀಡುವ ಪ್ರಮಾಣದ ಪತ್ರದ ಬಗ್ಗೆ ಕ್ಯಾತೆ ತೆಗೆದಿದ್ದ ಬ್ರಿಟನ್‌ಗೆ ಇದೀಗ ಭಾರತವೂ ಸಡ್ಡು ಹೊಡೆದಿದೆ. ಲಸಿಕೆಪಡೆದ ಹೊರತಾಗಿಯೂ ತನ್ನ ದೇಶಕ್ಕೆ ಆಗಮಿಸುವ ಭಾರತೀಯರಿಗೆ ಬ್ರಿಟನ್‌ ಸರ್ಕಾರ ಯಾವ್ಯಾವ ನಿರ್ಬಂಧಗಳನ್ನು ಹೇರಿತ್ತೋ, ಅದೇ ನಿರ್ಬಂಧಗಳನ್ನು ಇದೀಗ ಭಾರತವೂ ಬ್ರಿಟನ್‌ ನಾಗರಿಕರ ಮೇಲೆ ಹೇರಿತ್ತು.

ಹೀಗಾಗಿ ಅ.4ರಿಂದ ಬ್ರಿಟನ್‌ನಿಂದ ಭಾರತಕ್ಕೆ ಬರುವ ಯಾವುದೇ ವ್ಯಕ್ತಿಗಳು, ಯಾವುದೇ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದರೂ, 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು. ಜೊತೆಗೆ ಭಾರತಕ್ಕೆ ಆಗಮಿಸುವ 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ಅದರಲ್ಲಿ ನೆಗೆಟಿವ್‌ ವರದಿ ಪಡೆದಿರಬೇಕು. ಅಲ್ಲದೇ ಭಾರತಕ್ಕೆ ಬಂದ ತಕ್ಷಣ ಮತ್ತು ಬಂದ 8 ದಿನದ ಬಳಿಕ ಮತ್ತೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

English summary
The government has withdrawn a travel advisory that added COVID-19 related additional checks and restrictions on those arriving from the UK after the British government ordered the discontinuation of mandatory testing and quarantine norms for those vaccinated with Covishield travelling from India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X