Breaking: ಅನ್‌ಲಾಕ್‌2 ಮಾರ್ಗಸೂಚಿ ಪ್ರಕಟ: ಶಾಲೆ, ಜಿಮ್, ಚಿತ್ರಮಂದಿರಕ್ಕೆ ಸಿಕ್ಕಿಲ್ಲ ಅನುಮತಿ

ದೆಹಲಿ, ಜೂನ್ 29: ಅನ್‌ಲಾಕ್‌1 ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರ ಅನ್‌ಲಾಕ್‌2 ಘೋಷಣೆ ಮಾಡಿದೆ. ಸೋಮವಾರ ರಾತ್ರಿ ಅನ್‌ಲಾಕ್‌2 ಕುರಿತು ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿದೆ.

Recommended Video

      Congress Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada

      ಜುಲೈ 31ರವರೆಗೂ ಅನ್‌ಲಾಕ್‌2 ಜಾರಿಯಲ್ಲಿರಲಿದ್ದು, ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ತೆರೆಯವಂತಿಲ್ಲ ಎಂದು ಸೂಚಿಸಿದೆ. ಆನ್‌ಲೈನ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದೆ.

      ಪ್ರಸ್ತುತ ದೇಶದಲ್ಲಿ ಪ್ರಾದೇಶಿಕ ವಿಮಾನ ಹಾಗು ರೈಲು ಸಂಚಾರ ಮಾಡುತ್ತಿದೆ. ಆದರೆ ವಿದೇಶಿ ವಿಮಾನ ಸಂಚಾರ ಆರಂಭವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಂತರರಾಷ್ಟ್ರೀಯ ವಿಮಾನ ಸಂಚಾರ ಹಾಗೂ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿಲ್ಲ.

      ಅನ್‌ಲಾಕ್‌2ರಲ್ಲಿಯಲ್ಲಾದರೂ ಚಿತ್ರಮಂದಿರಗಳು, ಜಿಮ್‌ಗಳು, ಪೂಲ್‌ಗಳಿಗೆ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಚಿತ್ರಮಂದಿರಗಳು, ಜಿಮ್‌ಗಳು, ಪೂಲ್‌ಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.

      Govt Of India Announces Guidelines For Unlock 2.0 To Be In Force Till July 31st

      ಅನ್‌ಲಾಕ್‌2 ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು:-

      * ಜುಲೈ 31ರವರೆಗೂ ಶಾಲೆಗಳು, ಕಾಲೇಜುಗಳು ತೆರೆಯುವಂತಿಲ್ಲ

      * ಚಿತ್ರಮಂದಿರಗಳು, ಜಿಮ್‌ಗಳಿಗೂ ಅವಕಾಶ ಸಿಕ್ಕಿಲ್ಲ

      * ಅಂತರರಾಷ್ಟ್ರೀಯ ವಿಮಾನಗಳು, ಮೆಟ್ರೋ ರೈಲು ಬಂದ್

      * ರಾತ್ರಿ 10:00 ರಿಂದ ಬೆಳಿಗ್ಗೆ 5:00 ರವರೆಗೆ ರಾತ್ರಿ ಕರ್ಫ್ಯೂ ಜಾರಿ

      * ಧಾರ್ಮಿಕ ಕೂಟಗಳ ಚಟುವಟಿಕೆಗಳು ನಿಷೇಧಿತವಾಗಿವೆ

      * ಕಂಟೈನ್‌ಮೆಂಟ್‌ ಜೋನ್‌ನಲ್ಲಿದ್ದ ನಿಯಮಗಳು ಮುಂದುವರಿಕೆ

      * ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಮತ್ತು ಇತರ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.

      * ಆರೋಗ್ಯ ಸೇತು ಆಪ್ ಬಳಕೆ ಮಾಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+