• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್ಥಿಕ ಉತ್ತೇಜನಕ್ಕಾಗಿ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಣಯಗಳು

|

ನವದೆಹಲಿ, ಆಗಸ್ಟ್ 28: ವಿದೇಶಿ ನೇರ ಬಂಡವಾಳ (ಎಫ್ ಡಿಐ) ನಿಯಮಾವಳಿ ಸಡಿಲ ಸೇರಿದಂತೆ, ದೇಶದ ಆರ್ಥಿಕತೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ. ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ(ಸಿಸಿಇಎ) ಸಭೆಯಲ್ಲಿ ಬುಧವಾರ (ಆಗಸ್ಟ್ 28) ಹಲವು ಮಹತ್ವದ ನಿರ್ಧಾರಗಳಲ್ಲಿ ಪ್ರಮುಖವಾಗಿ ಗುತ್ತಿಗೆ ಆಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಶೇ100ರಷ್ಟು ಎಫ್ ಡಿಐಗೆ ಅನುಮತಿ ನೀಡಲಾಗಿದೆ" ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಹೆಳಿದರು

ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ನಿರ್ಣಯಗಳು:

* 75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ. 15,700 ಎಂಬಿಬಿಎಸ್ ಸೀಟು ಹೆಚ್ಚಳ.

* 2021-22ರ ಅವಧಿಯಲ್ಲಿ ಪೂರ್ಣಗೊಳ್ಳಲಿರುವ ವೈದ್ಯಕೀಯ ಕಾಲೇಜುಗಳ ನಿರ್ಮಾಣ ವೆಚ್ಚ 24,375 ಕೋಟಿ ರು.

* 2019-20 ಮಾರ್ಕೆಟಿಂಗ್ ವರ್ಷಕ್ಕೆ ಅನುಗುಣವಾಗಿ 6 ಮಿಲಿಟನ್ ಟನ್ ಸಕ್ಕರೆ ರಫ್ತು ಮಾಡಲು 6,268 ಕೋಟಿ ರು ಸಬ್ಸಿಡಿ ಮೊತ್ತ ಬಿಡುಗಡೆ. ಈ ಮೂಲಕ ಸಕ್ಕರೆ ಕಾರ್ಖಾನೆಗಳಿಂದ ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿಯಾಗಲಿದೆ.

* ಸಕ್ಕರೆ ಕಾರ್ಖಾನೆಗಳಿಗೆ ರಫ್ತು ಸಬ್ಸಿಡಿ ರೂಪದಲ್ಲಿ 10,448 ರು ಪ್ರತಿ ಟನ್ ನಂತೆ ನೀಡಲಾಗುವುದು ಇದರಿಂದ ಸರ್ಕಾರದ ಬೊಕ್ಕಸಕ್ಕೆ 6,268 ಕೋಟಿರು ವೆಚ್ಚವಾಗಲಿದೆ.

FDI (ವಿದೇಶಿ ನೇರ ಬಂಡವಾಳ) ನಿಯಮ ಸಡಿಲಿಸಿದ ಕೇಂದ್ರ ಸರಕಾರ

* ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡ ಕ್ರಮದ ಫಲವು ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಬ್ಬು ಬೆಳೆಯುವ ರಾಜ್ಯಗಳಿಗೆ ತಲುಪಲಿದೆ. ಭಾರತ ಸುಮಾರು 162 ಲಕ್ಷ ಟನ್ ಕಬ್ಬು ಹೊಂದಿದ್ದು, 60 ಲಕ್ಷ ಟನ್ ರಫ್ತು ಮಾಡಲಿದೆ.

* ಮೂಲ ಸೌಕರ್ಯ ನಿರ್ವಹಣೆ, ಅಭಿವೃದ್ಧಿಗಾಗಿ International Coalition for Disaster Resilient Infrastructure(CDRI) ಸ್ಥಾಪನೆ. ಯುಎನ್ ಹವಾಮಾನ ಶೃಂಗಸಭೆಯಲ್ಲಿ ಸೆ.23ರಂದು ಅಧಿಕೃತ ಘೋಷಣೆ.

* ಕಲ್ಲಿದ್ದಲು ಗಣಿಗಾರಿಕೆ, ಗುತ್ತಿಗೆ ಆಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಶೇ100ರಷ್ಟು ಎಫ್ ಡಿಐಗೆ ಅನುಮತಿ.

75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾದ ಮೋದಿ ಸರ್ಕಾರ

* ಡಿಜಿಟಲ್ ಮಾಧ್ಯಮದಲ್ಲಿ ಶೇ26ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಒಪ್ಪಿಗೆ. ಇದರಿಂದಾಗಿ ವಯಾಕಾಂ ಮೀಡಿಯಾ18 ಪ್ರೈ ನೆಟ್ವರ್ಕ್ ಅಥವಾ ಜೀ ಎಂಟರ್ ಟೈನ್ಮೆಂಟ್ ಎಂಟರ್ ಪ್ರೈಸರ್ ಸ್ವಾಮ್ಯ ವೂಟ್ ಅಥವಾ ಜೀ5 ಆಪ್ ಗಳನ್ನು ಪ್ರತ್ಯೇಕ ಸಂಸ್ಥೆಯಂತೆ ಪರಿಗಣಿಸಲಾಗುತ್ತದೆ. ಅಂಥ ಸಂಸ್ಥೆ ಪ್ರತ್ಯೇಕವಾಗಿ ಬಂಡವಾಳ ಹೂಡಿಕೆ ಪಡೆದುಕೊಳ್ಳಬಹುದು. ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಶೇ49ರಷ್ಟು ಎಫ್ ಡಿಐಗೆ ಅನುಮತಿಯಿದೆ.

* ಸಿಂಗಲ್ ಬ್ರ್ಯಾಂಡ್ ರಿಟೇಲ್ ವಲಯಕ್ಕೆ ಸ್ಥಳೀಯವಾದ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದಿರುವ ನಿಯಮದಲ್ಲಿ ಬದಲಾವಣೆ. ಯಾವ ಕಂಪೆನಿಯು ಶೇ50ಕ್ಕಿಂತ ಹೆಚ್ಚು ವಿದೇಶಿ ನೇರ ಬಂಡವಾಳ ಹೊಂದಿದೆಯೋ ಅಂಥದ್ದು ದೇಶಿ ಮಾರುಕಟ್ಟೆಯಿಂದ ಶೇ 30ರಷ್ಟು ಖರೀದಿ ಮಾಡಬೇಕು ಎಂಬ ನಿಯಮ ತೆಗೆದು ಹಾಕಲಾಗಿದೆ. ಈ ಮೂಲಕ ಆನ್ ಲೈನ್ ಸ್ಟೋರ್, ವಹಿವಾಟಿಗೆ ಉತ್ತೇಜನ.

English summary
In order to boost a sluggish economy, the Centre on Wednesday notified 100% Foreign Direct Investment (FDI) in contract manufacturing under the automatic route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X