ದೇಶದಾದ್ಯಂತ ನೂರು ಯೋಗ ಪಾರ್ಕ್ ನಿರ್ಮಿಸಲು ಕೇಂದ್ರ ನಿರ್ಧಾರ
ನವದೆಹಲಿ, ಮೇ 26 : ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದಂದು ದೇಶದಾದ್ಯಂತ 100 ಯೋಗ ಪಾರ್ಕ್ ಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಿರ್ಮಣಗೊಳ್ಳಲಿರುವ ಈ 100 ಉದ್ಯಾನವನಗಳನ್ನು ವಿಶೇಷವಾಗಿ ಯೋಗ ಚಟುವಟಿಕೆಗಳಿಗಾಗಿ ಮೀಸಲಿಡಲಾಗುತ್ತದೆ. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಲಖನೌದಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸುಮಾರು 150 ದೇಶಗಳ ಯೋಗಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ಯಾರಿಸ್, ಲಂಡನ್ ಮತ್ತು ನ್ಯೂಯಾರ್ಕ್ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಯೋಗ ದಿನ ಆಚರಿಸಲಾಗುತ್ತದೆ.












Click it and Unblock the Notifications