ಸರ್ಕಾರದಿಂದ ಓಪನ್ ಏರ್ ಬಾರ್ ಏಪ್ರಿಲ್ 1ರಿಂದ ಬಂದ್!
ರಾಜ್ಯದಲ್ಲಿರುವ ಎಲ್ಲಾ ಓಪನ್ ಏರ್ ಬಾರ್‌ಗಳನ್ನು ಸರ್ಕಾರ ಮುಚ್ಚಲಿದೆ. ಮದ್ಯ ಸೇವಿಸುವವರು ಮನೆಗೆ ತೆಗೆದುಕೊಂಡು ಹೋಗಬೇಕು
ಭೋಪಾಲ್, ಮಾರ್ಚ್ 13; ರಾಜ್ಯದಲ್ಲಿರುವ ಎಲ್ಲಾ ಓಪನ್ ಏರ್ ಬಾರ್‌ಗಳನ್ನು ಸರ್ಕಾರ ಮುಚ್ಚಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಸಹ ಕೈಗೊಳ್ಳಲಾಗಿದೆ. ಮದ್ಯ ಸೇವಿಸುವವರು ಮನೆಗೆ ತೆಗೆದುಕೊಂಡು ಹೋಗಬೇಕು. ಏಪ್ರಿಲ್ 1ರಿಂದ ಈ ನಿಯಮ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಮಾಹಿತಿ ನೀಡಿದ್ದಾರೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯದ ಎಲ್ಲಾ ಓಪನ್ ಏರ್ ಬಾರ್‌ಗಳನ್ನು ಮುಚ್ಚಲಾಗುತ್ತದೆ, ಈ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ. ಮದ್ಯ ಸೇವಿಸುವವರ ಸಂಖ್ಯೆಯನ್ನು ಕಡಿಮೆ ಮಾಡಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲು ಮುಂದಾಗಿದೆ, ಈ ಕುರಿತು ಚರ್ಚೆಗಳು ಸಹ ಆರಂಭವಾಗಿದೆ.

ಫೆಬ್ರವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ಇದಕ್ಕೆ ಒಪ್ಪಿಗೆ ಸಿಕ್ಕಿತ್ತು. ಏಪ್ರಿಲ್ 1ರಿಂದ ಈ ನಿಯಮವನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಜಾರಿಗೆ ತರಲು ಸರ್ಕಾರವೇ ಮುಂದಾಗಿದೆ. 2010ರ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಮದ್ಯ ಕುಡಿಯಲು ಬಯಸುವವರು ಅದನ್ನು ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.
ಬಾರ್‌ಗಳನ್ನು ಮುಚ್ಚುವ ಜೊತೆಗೆ ಮದ್ಯವನ್ನು ಅಂಗಡಿಯ ಕೌಂಟರ್‌ಗಳಲ್ಲಿ ಮಾತ್ರ ಖರೀದಿ ಮಾಡುವ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಡಿಎಲ್ ರದ್ದುಗೊಳಿಸುವ ನಿಯಮವನ್ನು ಸಹ ಏಪ್ರಿಲ್‌ನಿಂದ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ರಾಜ್ಯದ ಗೃಹ ಸಚಿವರ ನತೋತ್ತಮ್ ಮಿಶ್ರಾ ಹೇಳಿದ್ದಾರೆ. ಮಧ್ಯ ಪ್ರದೇಶ ಸರ್ಕಾರದ ಈ ನೀತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ.
ಈ ವರ್ಷ ನಾವು ರಾಜ್ಯದಲ್ಲಿ ಹೊಸ ಮದ್ಯ ನೀತಿ ಜಾರಿಗೆ ತಂದಿದ್ದೇವೆ. ಮದ್ಯ ಸೇವಿಸುವವರ ಸಂಖ್ಯೆ ಕಡಿಮೆ ಮಾಡುವುದು ನೀತಿಯ ಪ್ರಮುಖ ಉದ್ದೇಶವಾಗಿದೆ. 2010ರ ಬಳಿಕ ರಾಜ್ಯದಲ್ಲಿ ಯಾವುದೇ ಮದ್ಯದ ಅಂಗಡಿಗಳನ್ನು ಮುಚ್ಚಿಲ್ಲ. ಮದ್ಯ ಸೇವನೆ ಕಡಿಮೆ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗಿತ್ತು. ಇದಕ್ಕೆ ಸಂಪೂರ್ಣ ಸಮ್ಮತಿಯೂ ದೊರಕಿದೆ ಎಂದು ಗೃಹ ಸಚಿವರು ವಿವರಣೆ ನೀಡಿದರು.

ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ನೀವು ಮದ್ಯಪಾನ ಮಾಡಿ ಅದು ದೇಹದ ಒಳ ಸೇರಿದಾಗ ಪರಿಣಾಮ ಬೀರಲು ಆರಂಭವಾಗುತ್ತದೆ. ಮೊದಲು ಹೊಟ್ಟೆಗೆ ಸೇರುವ ಮದ್ಯ ಗ್ಯಾಸ್ಟ್ರಿಕ್ ಅಂಶವನ್ನು ಸೃಷ್ಟಿಸುತ್ತದೆ. ಬಳಿಕ ಕರುಳು ಮದ್ಯವನ್ನು ಹೀರಿಕೊಳ್ಳುತ್ತದೆ. ಆ ಮೂಲಕ ಲಿವರ್ ಸೇರುತ್ತದೆ. ಮದ್ಯಪಾನ ಮಾಡುವ ಬಹುತೇಕ ಜನರಿಗೆ ಲಿವರ್ ಸಮಸ್ಯೆ ಕಾಡುತ್ತದೆ. ಹೆಚ್ಚು ಕುಡಿತದ ಅಭ್ಯಾಸ ಇರುವವರು ಲಿವರ್ ಸಮಸ್ಯೆ ಎದುರಿಸುತ್ತಾರೆ" ಎಂದರು.
"ಲಿವರ್ ಬಹುತೇಕ ಮದ್ಯದ ಅಂಶವನ್ನು ಹೀರಿಕೊಳ್ಳುತ್ತದೆ. ಲಿವರ್ ನಾಶ ಮಾಡಲು ಸಾಧ್ಯವಾಗದ ಮದ್ಯದ ಅಂಶಗಳು ಮೆದುಳನ್ನು ತಲುಪುತ್ತದೆ. ಈ ವೇಳೆಗೆ ಮದ್ಯ ದೇಹದ ಮೇಲೆ ಪರಿಣಾಮ ಬೀರಲು ಆರಂಭ ಮಾಡುತ್ತದೆ. ಮೆದುಳು ಸೇರುವ ಮದ್ಯದ ಅಂಶ ನಗರಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ವ್ಯಕ್ತಿ ದೇಹದ ಹಿಡಿತವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುದು ವರದಿಗಳಿಂದ ಸಾಬೀತಾಗಿದೆ" ಎಂದು ಮುಖ್ಯಮಂತ್ರಿಗಳು ಮದ್ಯದ ಪರಿಣಾಮ ವಿವರಿಸಿದರು.
ನೂತನ ಅಬಕಾರಿ ನೀತಿ; ಮಧ್ಯ ಪ್ರದೇಶದ ಬಿಜೆಪಿ ಸರ್ಕಾರ ಹೊಸ ಅಬಕಾರಿ ನೀತಿ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಸುತ್ತಿತ್ತು. ಶಾಲೆ ಹಾಗೂ ಇತರ ಸಂಸ್ಥೆಗಳ ಸುತ್ತಲಿನ 1 ಕಿ. ಮೀ. ದೂರದ ಮದ್ಯದಂಗಡಿ ಮುಚ್ಚುವುದು, ಅಹತಾ (ಮದ್ಯ ಮಾರಾಟ & ಸೇವನೆಗೆ ಅವಕಾಶ ಇರುವ ಸ್ಥಳ) ಮುಚ್ಚುವುದು ಸೇರಿದಂತೆ ಹಲವು ಅಂಶಗಳು ಈ ಹೊಸ ನೀತಿಯಲ್ಲಿ ಸೇರಿದ್ದವು. ಹೊಸ ಅಬಕಾರಿ ನೀತಿಗೆ ಶಿಫಾರಸುಗಳನ್ನು ಮಾಡಲು ಸರ್ಕಾರ ಸಮಿತಿಯೊಂದನ್ನು ಸಹ ರಚನೆ ಮಾಡಿತ್ತು, ಸಂಪುಟ ಸಮಿತಿಯಲ್ಲಿ ಅಬಕಾರಿ, ಅರಣ್ಯ, ಹಣಕಾಸು ಸಚಿವರು ಸದಸ್ಯರಾಗಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಸಹ ಸಮಿತಿ ಒಳಗೊಂಡಿತ್ತು. ಈ ಸಮಿತಿಯ ಶಿಫಾರಸು ಆಧರಿಸಿ ಹೊಸ ಅಬಕಾರಿ ನೀತಿ ಜಾರಿಗೊಳಿಸಲಾಗಿತ್ತು.












Click it and Unblock the Notifications