• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ

|

ನವದೆಹಲಿ, ಅಕ್ಟೋಬರ್ 22: ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ ವಿಚಾರದಲ್ಲಿ ಟ್ವಿಟ್ಟರ್ ಸಿಇಒ ಜಾಕ್ ಡೋರ್ಸಿ ಅವರಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಗೌರವ ತೋರಿಸುವ ಟ್ವಿಟ್ಟರ್‌ನ ಯಾವುದೇ ರೀತಿಯ ಪ್ರಯತ್ನಗಳನ್ನು ಭಾರತ ಒಪ್ಪುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಭಾರತದ ಪ್ರಜೆಗಳ ಭಾವನೆಯನ್ನು ಟ್ವಿಟ್ಟರ್ ಗೌರವಿಸಬೇಕು ಎಂದು ಸಲಹೆ ನೀಡಿರುವ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾವ್ನಿ, 'ನಕ್ಷೆಗಳ ಮೂಲಕವೂ ಪ್ರತಿಬಿಂಬಿಸುವ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಟ್ವಿಟ್ಟರ್‌ನ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಒಪ್ಪುವಂತಹದ್ದಲ್ಲ. ಇದು ಕಾನೂನುಬಾಹಿರ ಕೂಡ' ಎಂದಿದ್ದಾರೆ.

ಜಮ್ಮು & ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್ ವಿರುದ್ಧ ಆಕ್ರೋಶ

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಲೇಹ್ ಪ್ರದೇಶವು ರಿಪಬ್ಲಿಕ್ ಆಫ್ ಚೀನಾಕ್ಕೆ ಸೇರಿದ್ದು ಎಂದು ಟ್ವಿಟ್ಟರ್ ತನ್ನ ಸ್ಥಳ ಸೂಚಕದಲ್ಲಿ ತೋರಿಸಿರುವುದು ಟ್ವಿಟ್ಟರಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಮುಖ್ಯ ಕಚೇರಿ ಲೇಹ್ ಆಗಿದ್ದು, ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರಗಳು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ. ಇಲ್ಲಿ ಭಾರತದ ಸಂವಿಧಾನ ಆಡಳಿತ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್‌ಗೆ 'ಕಪ್ಪು ವರ್ಣೀಯ'ರ ಬೆಂಬಲ: ನಕಲಿ ಟ್ವಿಟ್ಟರ್ ಖಾತೆಗಳ ರದ್ದು

ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ಅಂತಹ ಪ್ರಯತ್ನಗಳು ಟ್ವಿಟ್ಟರ್‌ ಗೌರವಕ್ಕೆ ಹಾನಿ ಮಾಡುವುದರ ಜತೆಗೆ ಅದರ ತಟಸ್ಥತೆ ಹಾಗೂ ಮಧ್ಯಸ್ಥಿಕೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದಿರುವ ಅವರು, ಈ ರೀತಿ ತಪ್ಪು ಮರುಕಳಿಸದಂತೆ ಎಚ್ಚರವಹಿಸಲು ಕಠಿಣ ಎಚ್ಚರಿಕೆ ನೀಡಿದ್ದಾರೆ.

English summary
India government in a stern letter to Twitter CEO Jack Dorsey warned over map misrepresentation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X