ಭರ್ಜರಿ ಗುಡ್ ನ್ಯೂಸ್: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ; ಯಾವಾಗಿನಿಂದ ಜಾರಿ?
Government Employees Salary Hike: ಕೆಂದ್ರ ಸರ್ಕಾರಿ ನೌಕರರ ವೇತನ ಕುರಿತು ಆಗಾಗ ಮಹತ್ವದ ಮಾಹಿತಿಗಳು ಹೊರಬೀಳುತ್ತಲೇ ಇರುತ್ತವೆ. ಹಾಗೆಯೇ ಇದೀಗ ಕೇಂದ್ರ ಸರ್ಕಾರಿ ನೌಕರರ ಮಾಸಿಕ ವೇತನದಲ್ಲಿ ಹೆಚ್ಚಳ ಮಾಡಲಾಗುತ್ತದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದ್ರೆ ಇದು ಯಾವಾಗಿನಿಂದ ಹಾಗೂ ಎಷ್ಟು ಹೆಚ್ಚಳ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನಿರ್ಣಾಯಕ ಆಗುತ್ತವೆ. ಇದೇ ವರ್ಷದ ಅಂದರೆ 2025ರ ಜನವರಿಯಲ್ಲಿ 8ನೇ ವೇತನ ಆಯೋಗಕ್ಕೆ ಅನುಮೋದನೆ ದೊರೆತಿತ್ತು. ಈ ಹಿನ್ನೆಲೆ ಈ ತಿಂಗಳು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ನಿರೀಕ್ಷೆ ಇದೆ.

ಇನ್ನು 8ನೇ ಆಯೋಗದಲ್ಲಿ ವೇತನ ಹೆಚ್ಚಳ ಮತ್ತು ಪಿಂಚಣಿ ಹೆಚ್ಚಳದ ಬಗ್ಗೆ ತಿಳಿಯಲು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುದಿಗಾಲಲ್ಲಿ ನಿಂತಿದ್ದಾರೆ. ಹಣದುಬ್ಬರವು ಜೀವನ ಕಷ್ಟಕರ ಆಗಿಸುತ್ತಿರುವ ವೇಳೆ 8ನೇ ವೇತನ ಆಯೋಗವು 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಭರವಸೆ ಕೊಟ್ಟಿದೆ. ದುಬಾರಿ ದನಿಯಾ ನಡುವೆಯೂ ಇದು ಜಾರಿಯಾದರೆ, ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ವರದಾನ ಆದಂತಾಗಲಿದೆ.
ಇತ್ತೀಚೆಗಷ್ಟೇ 7ನೇ ವೇತನ ಆಯೋಗದ ಅಡಿಯಲ್ಲಿ ಸರ್ಕಾರವು ಶೇಕಡ 2ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಇದರ ಬಳಿಕ ಕೇಂದ್ರ ಸರ್ಕಾರಿ ನೌಕರರ ಒಟ್ಟು ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವು ಶೇಕಡ 55ಕ್ಕೆ ಏರಿಕೆ ಆಯಿತು. ಮೂಲ ವೇತನ ಸಹ ಹೆಚ್ಚಾಗುತ್ತವೆ. ಇನ್ನೂ 8ನೆ ವೇತನ ಆಯೋಗ ಜಾರಿಯಾದ್ರೆ, ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ ಎನ್ನುವ ಕುತೂಹಲ ಸರ್ಕಾರಿ ನೌಕರರದ್ದಾಗಿದೆ.
ಸರ್ಕಾರವು ಜನವರಿ 2025ರಲ್ಲಿ 8ನೇ ವೇತನ ಆಯೋಗದ ರಚನೆಯನ್ನು ಘೋಷಣೆ ಮಾಡಿದೆ, ಆದರೂ ಆಯೋಗದ ಸದಸ್ಯರನ್ನು ಇನ್ನೂ ಅಧಿಕೃತವಾಗಿ ನೇಮಕ ಮಾಡಿಲ್ಲ. ಈ ತಿಂಗಳು ಸಮಿತಿ ರಚನೆ ಆಗಲಿದ್ದು, ಆಯೋಗವು 2026ರ ದ್ವಿತೀಯಾರ್ಧದಲ್ಲಿ ತನ್ನ ಶಿಫಾರಸುಗಳನ್ನು ಮಂಡಿಸುವ ನಿರೀಕ್ಷೆಯಿದೆ. ಜನವರಿ 1, 2027ರಿಂದ ಸಂಪೂರ್ಣ ಅನುಷ್ಠಾನ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ತುಟ್ಟಿಭತ್ಯ ಹೆಚ್ಚಳ: ಕರ್ನಾಟಕದಲ್ಲಿನ ಸರ್ಕಾರಿ ನೌಕಕರಿಗೆ ತುಟ್ಟಿಭತ್ಯ ಹೆಚ್ಚಳವು ಜಾರಿಯಾಗಲಿದೆ ಎನ್ನುವ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ತುಟ್ಟಿಭತ್ಯೆ (ಡಿಎ) ಹೆಚ್ಚಳ ಜೀವನ ವೆಚ್ಚದ ಏರಿಕೆಗೆ ತಕ್ಕಂತೆ ಆರ್ಥಿಕ ಸ್ಥಿರತೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.
ಈ ಹೆಚ್ಚಳವು ಕೇಂದ್ರ ಸರ್ಕಾರದ ಡಿಎ ಪರಿಷ್ಕರಣೆಯನ್ನು ಆಧರಿಸಿದ್ದು, ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ನಿರ್ಧರಿತವಾಗುತ್ತದೆ. 2025ರ ಮಾರ್ಚ್ 29ರ ಪ್ರಕಾರ, ರಾಜ್ಯ ಸರ್ಕಾರವು 2024ರಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಿದೆ.
ಮೊದಲನೆಯದಾಗಿ ಮಾರ್ಚ್ 12, 2024ರಂದು ಶೇಕಡ 3.75ರಷ್ಟು ಹೆಚ್ಚಳದೊಂದಿಗೆ ಡಿಎ ಶೇಕಡ 38.75ರಿಂದ ಶೇಕಡ 42.5ಕ್ಕೆ ಏರಿದ್ದು, ಇದು ಜನವರಿ 1, 2024ರಿಂದ ಜಾರಿ ಆಯಿತು. ಎರಡನೇಯದಾಗಿ ನವೆಂಬರ್ 27, 2024ರಂದು ಶೇಕಡ 2.25ರಷ್ಟು ಏರಿಕೆಯಾಗಿ ಡಿಎ ಶೇಕಡ 8.50ರಿಂದ ಶೇಕಡ 10.75ಕ್ಕೆ ಪರಿಷ್ಕರಿಸಲಾಗಿದ್ದು, ಇದು ಆಗಸ್ಟ್ 1, 2024ರಿಂದ ಜಾರಿ ಆಯಿತು.
ಡಿಎ ಹೆಚ್ಚಳವು ಸುಮಾರು 5.2 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ-ಮಂಡಳಿ ಸಿಬ್ಬಂದಿ ಮತ್ತು 4.5 ಲಕ್ಷ ನಿವೃತ್ತರಿಗೆ ಲಾಭ ತರಲಿದೆ. 2024ರಲ್ಲಿ ಘೋಷಿತ ಈ ಎರಡು ಹೆಚ್ಚಳಗಳು ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು 2,792 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆಯನ್ನು ಉಂಟು ಮಾಡಿದೆ. ಈ ಪರಿಷ್ಕರಣೆಯು 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ನಡೆಯುತ್ತದೆ ಮತ್ತು ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.












Click it and Unblock the Notifications