Government Bus: ಸ್ವಾತಂತ್ರ್ಯ ಸಿಕ್ಕ 79 ವರ್ಷಗಳ ನಂತರ ಗ್ರಾಮಕ್ಕೆ ಮೊದಲ ಸಾರಿಗೆ ಬಸ್ ಎಂಟ್ರಿ: ಕಾಲ್ನಡಿಗೆಗೆ ಗುಡ್‌ಬೈ ಎಂದ ಜನ

Government Bus: ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ಈಗಲೂ ಸಹ ಸಾರಿಗೆ ಸಂಪರ್ಕವಿಲ್ಲದೆ ಜನರು ಪರದಾಡುತ್ತಿರುವ ಘಟನೆಗಳ ಬಗ್ಗೆ ಕೇಳಿಯೇ ಇರುತ್ತವೆ. ಈ ನಡುವೆಯೇ ಇದೀಗ ಹಳ್ಳಿಯೊಂದಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 7 ದಶಕ ಅಂದರೆ 79 ವರ್ಷಗಳ ಬಳಿಕ ಸಾರಿಗೆ ಬಸ್‌ ಎಂಟ್ರಿ ಕೊಟ್ಟಿದ್ದು, ಇದನ್ನ ಕಂಡ ಮಂದಿ ದೊಡ್ಡ ಹಬ್ಬದಂತೆ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದಿದ್ದರೂ ಸಾರಿಗೆ ಸಂಪರ್ಕದಿಂದ ವಂಚಿತವಾಗಿದ್ದ ಹಳ್ಳಿಗೆ ಕೊನೆಗೂ ಮೊದಲ ಬಾರಿಗೆ ಸರ್ಕಾರಿ ಬಸ್‌ ಆಗಮಿಸಿದೆ. ಇದನ್ನ ಕಂಡ ಗ್ರಾಮಸ್ಥರು ದೊಡ್ಡ ಹಬ್ಬದಂತೆ ದೊಳ್ಳುಗಳ ಬಾರಿಸುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Government Bus Village Gets First Govt Bus After 79 Years Celebration Video Goes Huge Viral

ಬಸ್‌ಗೆ ಅದ್ಧೂರಿ ಸ್ವಾಗತ..

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ತಮ್ಮ ಗ್ರಾಮಕ್ಕೆ ಸಾರಿಗೆ ಬಸ್‌ ಎಂಟ್ರಿ ಕೊಟ್ಟ ಕ್ಷಣವನ್ನು ಗ್ರಾಮಸ್ಥರು ಸಾಂಪ್ರದಾಯಿಕ ಶೈಲಿಯಲ್ಲಿ ಹಬ್ಬದಂತೆ ಸಂಭ್ರಮಿಸಿದರು. ಬಸ್‌ಗೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಚಾಲಕ ಹಾಗೂ ನಿರ್ವಾಹಕರಿಗೆ ಶಾಲು ಹೊದಿಸಿ, ಸಿಹಿ ಹಂಚಿ ಅದ್ಧೂರಿಯಾಗಿ ಸ್ವಾಗತಿಸಿದ ಘಟನೆ ನಡೆದಿದೆ.

ಗ್ರಾಮಸ್ಥರು ಹೇಳೋದೇನು?

ಈ ಕುರಿತು ಗ್ರಾಮದ ಹಿರಿಯ ಮುಖಂಡರೊಬ್ಬರು ಮಾತನಾಡಿದ್ದು, 'ನಮ್ಮ ಜೀವಮಾನದಲ್ಲಿ ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತದೆ ಎಂದು ಊಹಿಸಿರಲಿಲ್ಲ. ಕಾಲ್ನಡಿಗೆಯಲ್ಲೇ ಜೀವನ ಕಳೆದ ನಮಗೆ ಈ ಬಸ್ ಬಂದಿರುವುದು ತುಂಬಾ ಸಂತಸವಾಗುತ್ತಿದೆ,' ಎಂದು ಹೇಳಿದ್ದಾರೆ.

​ಗ್ರಾಮಸ್ಥರ ಸುದೀರ್ಘ ಹೋರಾಟ ಹಾಗೂ ಮನವಿಗೆ ಸ್ಪಂದಿಸಿರುವ ಸಾರಿಗೆ ಇಲಾಖೆಯೂ ಇನ್ಮುಂದೆ ಪ್ರತಿದಿನ ನಿಯಮಿತವಾಗಿ ಈ ಮಾರ್ಗದಲ್ಲಿ ಬಸ್‌ ಸಂಚರಿಸಲಿದೆ ಎಂದು ತಿಳಿಸಿದೆ. ಗ್ರಾಮಕ್ಕೆ ಮೂಲಸೌಕರ್ಯ ತಲುಪಿರುವ ಈ ಅಪರೂಪದ ಕ್ಷಣದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಮೊದಲ ಬಸ್‌ ನೋಡಲು ಜಮಾಯಿಸಿದ ಜನ

ರಾಜಸ್ಥಾನದ ಅಜ್ಮೀರ ಜಿಲ್ಲೆಗೆ ಸೇರಿದ ಕುರ್ತಾಲ್ ಗ್ರಾಮಕ್ಕೆ ಈವರೆಗೆ ಯಾವುದೇ ಸರ್ಕಾರಿ ಸಾರಿಗೆ ಸಂಪರ್ಕ ಇರಲಿಲ್ಲ. ಆದರೆ ಇದೀಗ ಕೊನೆಗೂ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಆರಂಭಗೊಂಡಿದೆ. ತಮ್ಮ ಊರಿಗೆ ಆಗಮಿಸಿದ ಮೊದಲ ಬಸ್ ಕಂಡ ಗ್ರಾಮಸ್ಥರು ಹಬ್ಬದ ವಾತಾವರಣ ಸೃಷ್ಟಿಸಿ ಗಮನ ಸೆಳೆದಿದ್ದಾರೆ.

ಬಸ್ ಬರುವುದನ್ನು ಕಣ್ತುಂಬಿಕೊಳ್ಳಲು ಇಡೀ ಗ್ರಾಮದ ಜನರು ಜಮಾಯಿಸಿದ್ದರು. ಮಂಗಳವಾದ್ಯ, ಡೋಲುಗಳ ಸದ್ದಿಗೆ ಯುವಕರು ಮತ್ತು ಹಿರಿಯರು ಕುಣಿದು ಕುಪ್ಪಳಿಸಿದರು. ಸಾಂಪ್ರದಾಯಿಕವಾಗಿ ಬಸ್‌ಗೆ ಪೂಜೆ ಸಲ್ಲಿಸಿ, ಗ್ರಾಮಸ್ಥರೆಲ್ಲರಿಗೂ ಸಿಹಿ ಹಂಚಿ ತಮ್ಮ ಸಂತಸವನ್ನು ಹಂಚಿಕೊಂಡರು. ಹಲವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದಿ ಈ ಬಸ್

ಇಷ್ಟು ದಿನ ಸಾರಿಗೆ ಸಂಪರ್ಕ ಇಲ್ಲದೆ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ನೌಕರರು ಹಾಗೂ ವೃದ್ಧರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಬೇರೆ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೋಗುವ ಪರಿಸ್ಥಿತಿ ಇತ್ತು. ಇದೀಗ ಬಸ್ ಸೇವೆ ಆರಂಭ ಆಗಿರುವುದರಿಂದ ಗ್ರಾಮಸ್ಥರ ದಿನನಿತ್ಯದ ಪ್ರಯಾಣ ಸುಲಭ ಆಗಲಿದ್ದು, ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 'ಗ್ರಾಮಸ್ಥರ ಮುಗ್ಧತೆ ಮತ್ತು ಅವರ ಸಂಭ್ರಮ ನೋಡಿ ತುಂಬಾ ಸಂತಸವಾಯಿತು. ಆದರೆ ಸಾರಿಗೆಯಂತಹ ಮೂಲಭೂತ ಹಕ್ಕಿಗಾಗಿ ಸ್ವಾತಂತ್ರ್ಯ ಸಿಕ್ಕ ಇಷ್ಟೊಂದು ದಶಕಗಳ ಕಾಲ ಕಾಯಬೇಕಾಗಿ ಬಂದದ್ದು ಬೇಸರದ ಸಂಗತಿ,' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ಈ ಬಸ್ ಸೇವೆ ಆರಂಭದೊಂದಿಗೆ ಗ್ರಾಮವು ಇನ್ಮುಂದೆ ವೇಗವಾಗಿ ಅಭಿವೃದ್ಧಿ ಹೊಂದಲಿ,' ಎಂದು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+