Ban on OTT and Apps; ಅಶ್ಲೀಲ ಶೋಗಳ ಪ್ರದರ್ಶನ: ಉಲ್ಲು, ಆಲ್ಟ್ ಬಾಲಾಜಿ ಸೇರಿ 25 ಒಟಿಟಿಗಳ ನಿಷೇಧಿಸಿದ ಸರ್ಕಾರ
ಭಾರತದಲ್ಲಿ ನೂರಾರು ಒಟಿಟಿಗಳು ಮತ್ತು ಮನೊರಂಜನಾ ಅಪ್ಲಿಕೇಶನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಮೂಲಕ ಅಶ್ಲೀಲ ಕಂಟೆಂಟ್ ಅನ್ನು ಮಾತ್ರವೇ ಪ್ರಸಾರ, ಪ್ರಚಾರ ಮಾಡುವ ಹಲವಾರು ಒಟಿಟಿಗಳು ಅಪ್ಲಿಕೇಶನ್ಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಕೇಂದ್ರ ಸರ್ಕಾರ ಇಂಥಹಾ 25 ಅಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿದೆ. 'ಅಶ್ಲೀಲ' ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳ ಪ್ರಕಾರ, ಅಶ್ಲೀಲ ಮತ್ತು ಕೆಲವು ಸಂದರ್ಭಗಳಲ್ಲಿ ಅಶ್ಲೀಲ ವಿಷಯ ವನ್ನು ಹೋಸ್ಟ್ ಮಾಡಿದ ಆರೋಪದ ಮೇಲೆ 25 OTT ಪ್ಲಾಟ್‌ಫಾರ್ಮ್‌ಗಳಿಗೆ ಲಿಂಕ್ ಮಾಡಲಾದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಸರ್ಕಾರ ನಿರ್ದೇಶಿಸಿದೆ.

ವಿಶ್ವದೆಲ್ಲೆಡೆ ಒಟಿಟಿಗಳು, ಮನರಂಜನಾ ಅಪ್ಲಿಕೇಶನ್ಗಳ ದೊಡ್ಡ ಅಲೆಯೇ ಇದೆ. ಅಮೆಜಾನ್, ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಆಪಲ್ ಟಿವಿ, ಸನ್ ನೆಕ್ಸ್ಟ್, ಸೋನಿ, ಜೀ5, ಹೋಯಿಚೋಯಿ, ವೂಟ್, ಆಹಾ ಇನ್ನೂ ಹಲವಾರು ಒಟಿಟಿಗಳು ಭಾರತದಲ್ಲಿ ಸಕ್ರಿಯವಾಗಿವೆ. ಕೆಲವು ಮನೊರಂಜನೆಗೆ ಮಾತ್ರ ಸೀಮಿತವಾಗಿದ್ದರೆ ಇನ್ನು ಕೆಲವು ಒಟಿಟಿ ಮತ್ತು ಮನೊರಂಜನಾ ಅಪ್ಲಿಕೇಶನ್‌ಗಳು ಅಶ್ಲೀಲ ಕಂಟೆಂಟ್ ನೀಡಿ ಹಣ ಮಾಡುತ್ತಿವೆ. ಹೀಗಾಗಿ ಅಂಥಹಾ ಒಟಿಟಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡುವ ಮೂಲಕ ನಿಷೇಧಿಸಿದೆ.
ಭಾರತದಲ್ಲಿ ಅಶ್ಲೀಲ ಕಂಟೆಂಟ್ಗೆ ಬಹಳ ಜನಪ್ರಿಯವಾಗಿರುವ ಆಪ್ಗಳೆಂದರೆ ಉಲ್ಲು ಮತ್ತು ಆಲ್ಟ್ ಬಾಲಾಜಿ. ಈ ಎರಡೂ ಒಟಿಟಿಗಳು ಸೇರಿದಂತೆ ಬರೋಬ್ಬರಿ 25 ಒಟಿಟಿ ಮತ್ತು ಅಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆದೇಶ ಹೊರಡಿಸಿದೆ. ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಭಾರತದ ಟಾಪ್ 10 ಒಟಿಟಿಗಳಲ್ಲಿ ಸ್ಥಾನ ಪಡೆದಿದ್ದವು ಆದರೆ ಈಗ ಅವುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಈ ಒಟಿಟಿಗಳು ಭಾರತದ ಪ್ರಸಾರ ಕಾಯ್ದೆಯನ್ನು ಉಲ್ಲಂಘಿಸಿ ಅಶ್ಲೀಲ ಕಂಟೆಂಟ್ ಅನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿವೆ ಎಂಬ ಕಾರಣ ನೀಡಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು 25 ಒಟಿಟಿಗಳ ಮೇಲೆ ನಿಷೇಧ ಹೇರಿದೆ. ಈ ಅಪ್ಲಿಕೇಶನ್, ಒಟಿಟಿಗಳು ಪ್ರಸ್ತುತ ಭಾರತದಲ್ಲಿ ಮಾತ್ರವೇ ನಿಷೇಧಗೊಳ್ಳಲಿವೆ. ಭಾರತದ ಹೊರಗೆ ಈ ಒಟಿಟಿಗಳು ಕಾರ್ಯ ನಿರ್ವಹಿಸಲಿವೆ. ಈ ವೇದಿಕೆಗಳು ಪರಿಶೀಲನೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ, ಈ ವರ್ಷದ ಏಪ್ರಿಲ್‌ನಲ್ಲಿ, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಪ್ರಸಾರ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಪ್ರಮುಖ ಡಿಜಿಟಲ್ ವೇದಿಕೆಗಳಿಗೆ ನೋಟಿಸ್‌ಗಳನ್ನು ನೀಡಿತು.












Click it and Unblock the Notifications