ಗೂಗಲ್ ಹೆಗಲಿಗೆ ಮತದಾರರ ನೋಂದಣಿ ಜವಾಬ್ದಾರಿ

Election Commission of India ಈ ನಿಟ್ಟಿನಲ್ಲಿ, ಅಮೆರಿಕದ Google ನೆರವನ್ನು ಕೋರಿದೆ. Rather, Google ಸಂಸ್ಥೆಯೇ ತನ್ನ ಸಾಮಾಜಿಕ ಜವಾಬ್ದಾರಿ ನಿಭಾಯಿಸಲು (corporate social responsibility -CSR) ಚುನಾವಣಾ ಆಯೋಗದ ಜತೆ ಕೈಜೋಡಿಸಿದೆ. ಅಂದಹಾಗೆ, Google ಉಚಿತವಾಗಿ ಈ ಸೇವೆಯನ್ನು ಕಲ್ಪಿಸಿಕೊಡುತ್ತಿದೆ.
ಇತ್ತೀಚೆಗೆ ಚುನಾವಣಾ ಆಯೋಗವು ತನ್ನ ಅಭೂತಪೂರ್ವ ಪ್ರಯತ್ನಗಳಿಂದ ಮತದಾರರನ್ನು ಜಾಗೃತಗೊಳಿಸಿ, ದಾಖಲೆಯ ಮತದಾನವಾಗುವಂತೆ ನೋಡಿಕೊಳ್ಳುತ್ತಿದೆ. ಸದ್ಯದಲ್ಲೇ ನಡೆಯುವ ಸಾರ್ವತ್ರಿಕ ಚುನಾವಣೆಗೆ ಹೆಚ್ಚು ಮಹತ್ವವಿದ್ದು, ಹೆಚ್ಚು ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಲು ಆಯೋಗ ಸಿದ್ಧತೆ ಆರಂಭಿಸಿದೆ. (ದಿಲ್ಲಿ ದಾಖಲೆ ಮತದಾನ: ಚು. ಆಯೋಗಕ್ಕೆ ತಲೆ ಬಿಸಿ)
ಈ ನಿಟ್ಟಿನಲ್ಲಿ Google ನೆರವಿನೊಂದಿಗೆ online voter registrationಗೆ ಒತ್ತುನೀಡಿದೆ. ಈಗಾಗಲೇ Google ಜತೆಗೆ ಒಪ್ಪಂದವೇರ್ಪಟ್ಟಿದ್ದು, ಜನವರಿ 2ನೇ ವಾರದಿಂದ ಗೂಗಲ್ ಸೇವೆ ಆರಂಭವಾಗಲಿದೆ. ಮುಂದಿನ 6 ತಿಂಗಳಲ್ಲಿ ಅಂದರೆ ಜೂನ್ ವರೆಗೂ ಅಂದರೆ ಹೊಸ ಸರಕಾರ ಸ್ಥಾಪನೆಯಾಗುವವರೆಗೂ Google ಚುನಾವಣಾ ಸೇವೆ ಅಬಾಧಿತವಾಗಿ ಮುನ್ನಡೆಯಲಿದೆ. ಈ ನಿಟ್ಟಿನಲ್ಲಿ Google Maps ಚುನಾವಣಾ ಆಯೋಗಕ್ಕೆ ಸಕಾಲಿಕ ನೆರವು ನೀಡಲಿದೆ. (ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವರೇ ನಿರ್ಣಾಯಕರು!)
ಗೂಗಲ್ ಈಗಾಗಲೇ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇಂತಹ ಸೇವೆಯನ್ನು ಒದಗಿಸುತ್ತಿದೆ. ಏನೇ ಆದರೂ ಭಾರತದಲ್ಲಿ ಚುನಾವಣಾ ಆಯೋಗದ ವೆಬ್ ಸೈಟ್ ಸೇವೆ ನಿಜಕ್ಕೂ ತೃಪ್ತದಾಯಕವಾಗಿಲ್ಲ. ಆಯೋಗ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಹೇಳುವಂತೆ ಖಂಡಿತ ಅದರ ವೆಬ್ ಸೈಟ್ ವರ್ಕ್ ಆಗುವುದಿಲ್ಲ. ಮುಂದಾದರೂ Google ಈ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮತದಾರರಿಗೆ ಸಕಾಲದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಅವರನ್ನು ಮತಗಟ್ಟೆವರೆಗೂ ಕರೆದೊಯ್ಯುವಂತೆ ಮಾಡಲಿ ಎಂಬುದೇ ಎಲ್ಲರ ಸದಾಶಯ.












Click it and Unblock the Notifications