ಗೂಗಲ್ ನಲ್ಲಿ ಸೌತ್ ಇಂಡಿಯನ್ ಮಸಾಲಾ ಎಂದು ಟೈಪಿಸಿ ನೋಡಿ
ಬೆಂಗಳೂರು, ಜುಲೈ 07 : ಯಾವುದೇ ಮಾಹಿತಿ, ಫೋಟೋ, ವಿಳಾಸ ಬೇಕಿದ್ದರೆ ಗೂಗಲ್ ಮಾಡಿ ಅನ್ನುವಂಥ ಕಾಲವಿದು. ಅಂಥದ್ದರಲ್ಲಿ, ಕೇಳುತ್ತಿರುವುದು ಒಂದು ಗೂಗಲ್ ತೋರಿಸುತ್ತಿರುವುದು ಇನ್ನೊಂದು ಆದರೆ ಗತಿಯೇನು? ಅಥವಾ ಗೂಗಲ್ 'ಅರ್ಥ' ಮಾಡಿಕೊಳ್ಳುವುದೇ ಹೀಗೆಯೆ?
ಹೀಗೊಂದು ಸ್ವಾರಸ್ಯಕರ ಜಿಜ್ಞಾಸೆ ಇಂಟರ್ನೆಟ್ಟಿನಲ್ಲಿ ಆರಂಭವಾಗಿದೆ. ನೀವು ಅಡುಗೆ ಮಾಡುವುದರಲ್ಲಿ ಭಾರೀ ಆಸಕ್ತಿಯಿದೆ ಎಂದು ತಿಳಿದುಕೊಳ್ಳಿ, ಅದರಲ್ಲೂ ದಕ್ಷಿಣ ಭಾರತದ ಸ್ವಾದಿಷ್ಟ ತಿನಿಸುಗಳ ಬಗ್ಗೆ, ಮಸಾಲಾಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಗೂಗಲ್ಲಿಗೆ ಬರುತ್ತೀರಾ.
ಗೂಗಲ್ ನಲ್ಲಿ ಆಂಗ್ಲ ಭಾಷೆಯಲ್ಲಿ ಸೌತ್ ಇಂಡಿಯನ್ ಮಸಾಲಾ ಎಂದು ಟೈಪ್ ಮಾಡಿದರೆ ಬೆಚ್ಚಿ ಬೀಳುವ ಸಂಗತಿ ನಿಮ್ಮದಾಗುತ್ತದೆ. ಅಥವಾ ನೀವು ಮಹಾನ್ ರಸಿಕರಾಗಿದ್ದರೆ ಥರಹೇವಾರಿ ತನಿಸಿನ ಬದಲಾಗಿ ಅಲ್ಲಿ ಕಾಣುವ ರಂಗ್ ಬಿರಂಗಿ ಸಿನೆಮಾ ತಾರೆಯರ ಚಿತ್ರಗಳನ್ನು ನೋಡಿ ಮನಸ್ಸು ನವಿಲಾಗುತ್ತದೆ.
ಮಸಾಲಾ ಪುಡಿ, ಮಸಾಲೆ ದೋಸೆ, ಚಿಕನ್, ಮಸಾಲಾ, ಗರಂ ಮಸಾಲಾ ಬದಲಿಗೆ, ಸೊಂಟ ಕುಣಿಸುತ್ತಿರುವ ಅನುಷ್ಕಾ ಶೆಟ್ಟಿ, ನೀರಲ್ಲಿ ಒದ್ದೆಮುದ್ದೆಯಾಗಿರುವ ಮೇಘನಾ ನಾಯ್ಡು, ಹೊಕ್ಕಳು ತೋರುತ್ತಿರುವ ತಮನ್ನಾ ಭಾಟಿಯಾ, ವೈಯಾರದಿಂದ ನುಲಿಯುತ್ತಿರುವ ತ್ರಿಷಾ ಕೃಷ್ಣನ್!

ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆ
ಸೌತ್ ಇಂಡಿಯನ್ ಮಸಾಲಾ ಎಂದು ಕುಟ್ಟಿಸಿದರೆ ನಿಮಗೆ ಸಿಗುವುದು ದಕ್ಷಿಣ ಭಾರತದ ಸಿನೆಮಾ ರಂಗದ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರು. ಮಾದಕತೆಯೇ ಮೈವೆತ್ತಂತಿರುವ ಅಪ್ಸರೆಯರು, ಕಾಮೋತ್ತೇಜಕ ರೂಪಸಿ ರಂಭೆಯರ ಚಿತ್ರಗಳು ಧಾರಾಳವಾಗಿ ಕಾಣಸಿಗುತ್ತವೆ.

ಅರ್ಥೈಸಿಕೊಳ್ಳುವಾಗ ಏನಾದರೂ ಅನರ್ಥ?
ಗೂಗಲ್, ಸೌತ್ ಇಂಡಿಯನ್ ಮಸಾಲಾ ಎಂದರೆ ಅರ್ಥೈಸಿಕೊಳ್ಳುವುದು ಈ ರೀತಿಯೆ? ಅಥವಾ ಸೌತ್ ಇಂಡಿಯನ್ ಮಸಾಲಾಗೆ ದಕ್ಷಿಣ ಭಾರತದ ಸಿನೆಮಾ ಸುಂದರಿಯರು ಅನ್ವರ್ಥಕ ರೂಪಕವಾಗಿದ್ದಾರಾ? ಅಥವಾ ಗೂಗಲ್ ಅರ್ಥೈಸಿಕೊಳ್ಳುವಾಗ ಏನಾದರೂ ಅನರ್ಥವಾಗಿದೆ? ಅಥವಾ ಇದೊಂದು ಕುಚೋದ್ಯವೆ?

ಬಾಯಲ್ಲಿ ನೀರೂರಿಸುವಂಥ ತಿನಿಸುಗಳು
ಆದರೆ, ನೀವು ನಾರ್ತ್ ಇಂಡಿಯನ್ ಮಸಾಲಾ ಎಂದು ಟೈಪಿಸಿದರೆ, ಉತ್ತರ ಭಾರತದ ರೂಪಸಿ ರಂಭೆಯರ ಚಿತ್ರಗಳ ಬದಲಾಗಿ ಬಾಯಲ್ಲಿ ನೀರೂರಿಸುವಂಥ ನಾನಾ ಬಗೆಯ ಅಡುಗೆಯ ಚಿತ್ರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ನಾರ್ತ್ ಇಂಡಿಯನ್ ಮಸಾಲಾ ಎಂದರೆ ಉತ್ತರ ಭಾರತದ ಬೆಡಗಿಯರ ಚಿತ್ರಗಳು ಬರಬಾರದೇಕೆ?

ಸಿನೆಮಾ ತಾರೆಯರೆಂದರೆ ಅಷ್ಟು ಕೀಳಾ?
ಗೂಗಲ್ಲಿಗೆ ದಕ್ಷಿಣ ಭಾರತದ ಸಿನೆಮಾ ತಾರೆಯರೆಂದರೆ ಅಷ್ಟು ಕೀಳಾಗಿ ಹೋದರೆ? ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂಬ ತಾರತಮ್ಯ ಏಕೆ? ಸೌತ್ ಇಂಡಿಯನ್ ಮಸಾಲಾ ಎಂದರೆ ಅಪ್ಪಿತಪ್ಪಿ ಕೂಡ ಒಂದೇ ಒಂದು ಮಸಾಲಾ ದೋಸೆಯ ಚಿತ್ರ ಕೂಡ ನಿಮಗೆ ಕಾಣಸಿಗುವುದಿಲ್ಲ. ಅಲ್ಲಿರುವವರು ಅಶ್ಲೀಲವಾಗಿ ಬಟ್ಟೆಯುಟ್ಟ ತ್ರಿಪುರ ಸುಂದರಿಯರೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications