Google Layoffs: 200ಕ್ಕೂ ಅಧಿಕ AI ಗುತ್ತಿಗೆದಾರರ ವಜಾಗೊಳಿಸಿದ ಗೂಗಲ್
ಬೆಂಗಳೂರು, ಸೆಪ್ಟಂಬರ್ 17: ಪ್ರಪಂಚದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿರುವ ಗೂಗಲ್ ತನ್ನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 200ಕ್ಕೂ ಹೆಚ್ಚು ಗುತ್ತಿಗೆದಾರರನ್ನು ವಜಾಗೊಳಿಸಿದೆ. ಕಳೆದ ತಿಂಗಳು ಕನಿಷ್ಠ ಎರಡು ಹಂತಗಳಲ್ಲಿ ಉದ್ಯೋಗ ಕಡಿತಗೊಳಿಸಲಾಗಿತ್ತು ಎಂದು ಈ ಬಗ್ಗೆ "WIRED' ವರದಿ ಮಾಡಿದೆ.
ಉದ್ಯೋಗ ಕಳೆದುಕೊಂಡ ಈ ಗುತ್ತಿಗೆದಾರರು ಗೂಗಲ್ ಸಸ್ಥೆ ಪ್ರಮುಖ AI ವಿಭಾಗಳಾದ ಜೆಮಿನಿ, AI ಅವಲೋಕನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ ಅನೇಕರು ಸ್ನಾತಕೋತ್ತರ (MB) ಮತ್ತು ಪಿಎಚ್‌ಡಿ (PHD) ಪದವಿಗಳನ್ನು ಪಡೆದವರು ಇದ್ದಾರೆ. ಇವರೆಲ್ಲಿ "ಸೂಪ್ ರೇಟರ್ಸ್" ಎಂದು ಕರೆಯಲ್ಪಡುವ ಗುಂಪಿನ ಭಾಗವಾಗಿದ್ದರು. ಗೂಗಲ್ AI ಮಾದರಿಗಳ ಗುಣಮಟ್ಟ, ನಿಖರತೆ ಮತ್ತು ಬಳಕೆದಾರ ಅನುಭವ ಸುಧಾರಿಸುವ ಕೆಲಸ ಮಾಡುತ್ತಿದ್ದರು. ಈ ಗುಂಪಿನಲ್ಲಿ ಇದೀಗ ಸುಮಾರು 200ಕ್ಕೂ ಅಧಿಕ ಮಂದಿ ಕೆಲಸ ಹೋಗಿದೆ.

ಗೂಗಲ್ ಹೇಳುತ್ತಿರುವುದೇನು?
ಈ ಉದ್ಯೋಗ ವಜಾ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಕಂಪನಿಯು, ನೇರ ಉದ್ಯೊಗ ಕಡಿತಕ್ಕೆ ತಾನು ಕಾರಣವಲ್ಲ ಎಂದು ಹೇಳಿಕೊಂಡಿದೆ. ಇವರೆಲ್ಲರನ್ನು ನೇರವಾಗಿ ಗೂಗಲ್ ನೇಮಕ ಮಾಡಲಿಲ್ಲ. ಬದಲಾಗಿ, ಅವರು ಗ್ಲೋಬಲ್‌ಲಾಜಿಕ್ ಅಥವಾ ಅದರ ಉಪಗುತ್ತಿಗೆ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದರು. ಈ ನೌಕರರು ಆಲ್ಫಾಬೆಟ್ ಕಂಪನಿಯ ನೇರ ಉದ್ಯೋಗಿಗಳು ಅಲ್ಲ ಎಂದು ಗೂಗಲ್ ವಕ್ತಾರ ಕೋರ್ಟ್ನಿ ಮೆನ್ಸಿನಿ (ಕೋರ್ಟ್ನಿ ಮ್ಯಾನ್ಸಿನಿ) ಹೇಳಿದರು.
AI ನಿಂದಾಗಿ ನೌಕರ ವಲಯಕ್ಕೆ ಸಾಕಷ್ಟು ಪೆಟ್ಟು ಬೀಳುತ್ತಿದೆ. ಹೂಡಿಕೆ ಮತ್ತು ಉದ್ಯೋಗ ಕಡಿತ ನಡುವಿನ ವೈಪರೀತ್ಯ ನೋಡುವುದಾದರೆ, ಗೂಗಲ್ ಸದ್ಯ AI ಕ್ಷೇತ್ರದಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿದೆ. OpenAI ಮತ್ತು Microsoft ಮುಂತಾದ ಪ್ರತಿಸ್ಪರ್ಧಿಗಳ ಜೊತೆ ಪೈಪೋಟಿ ನಡೆಸಲು ಗೂಗಲ್ ಮುಂದಾಗಿದೆ. ಅದಕ್ಕೆ ತಕ್ಕ ಹೊಸ AI ತಂತ್ರಜ್ಞಾನಗಳನ್ನು ಸ್ಥಾಪಿಸುತ್ತಿದೆ.
ಈ ಪರಿಸ್ಥಿತಿಯಲ್ಲಿ ಗೂಗಲ್ ಎಐ ಯೋಜನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಗುತ್ತಿಗೆದಾರರನ್ನು ವಜಾಗೊಳಿಸಿರುವುದು ತಂತ್ರಜ್ಞಾನ ಲೋಕದಲ್ಲಿ ಆಶ್ಚರ್ಯ ಹುಟ್ಟಿಸಿದೆ.
ಗೂಗಲ್ ಆಂತರಿಕ ವೆಚ್ಚ ಸರಿದೂಗಿಸಲು ಹೀಗೆ ನೌಕರರನ್ನು ವಜಾಗೊಸಿದೆ ಎನ್ನಲಾಗುತ್ತಿದೆ. ಆಂತರಿಕ ವೆಚ್ಚ ನಿಯಂತ್ರಿಸುವ ಕ್ರಮದ ಭಾಗವಾಗಿ ವಜಾಗೊಳಿಸಿದ್ದಾಗೆ ಕಂಪನಿ ಮೂಲಗಳು ಮಾಹಿತಿ ನೀಡಿವೆ. ಗುತ್ತಿಗೆದಾರರಿಗೆ ಗೇಟ್ ಪಾಸ್ ನೀಡಿದ ನಂತರ ಗುತ್ತಿಗೆದಾರರನ್ನು ವಜಾಗೊಳಿಸುವುದರಿಂದ ಗೂಗಲ್ ತನ್ನ AI ವಿಭಾಗದ ಕಾರ್ಯಪದ್ಧತಿಯಲ್ಲಿ ಹೆಚ್ಚಿನ ಸ್ವಯಂಚಾಲಿತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದೆ.
ಒಂದು ಕಡೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುವ ಗೂಗಲ್ ಕಂಪನಿಯು 200ಕ್ಕೂ ಹೆಚ್ಚು ಗುತ್ತಿಗೆದಾರನ್ನು ಮನೆಗೆ ಕಳುಹಿಸಿದೆ. ಕಂಪನಿಯ ಈ ನಡೆ ಹೆಚ್ಚು ಸದ್ದು ಮಾಡುತ್ತಿದೆ. ಹೊಸ ರೀತಿಯ ಚರ್ಚೆಗಳನ್ನು ಗೂಗಲ್ ಹುಟ್ಟು ಹಾಕಿದೆ.












Click it and Unblock the Notifications