• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಭೂಪಟ ಗೂಗಲ್ ಸರ್ಚ್ ಪ್ರಮಾದ

By Mahesh
|

ಬೆಂಗಳೂರು, ನ.20: ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಮತ್ತೊಮ್ಮೆ ಭಾರತದ ಭೂಪಟವನ್ನು ತಪ್ಪಾಗಿ ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಪಾಕಿಸ್ತಾನದ ಭೂ ಭಾಗ ಎಂದು ಗೂಗಲ್ ಇನ್ ಸೈಟ್ಸ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ರೀತಿ ಗುರುತರ ಪ್ರಮಾದ ಎಸಗಿರುವ ಗೂಗಲ್ ಸಂಸ್ಥೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೋರಿದೆ ಎಂದು ಟೆಲಿಕಾಂ ಹಾಗೂ ಐಟಿ ಸಚಿವ ಸಚಿನ್ ಪೈಲಟ್ ಹೇಳಿದ್ದಾರೆ.

ಭಾರತದ ಭೂಪಟವನ್ನು ತಿದ್ದುವುದು, ಗಡಿ ಭಾಗವನ್ನು ತಿರುಚಿ ಪ್ರಕಟಿಸುವುದು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ ಅಪರಾಧವಾಗುತ್ತದೆ. ಗೂಗಲ್ ಸಂಸ್ಥೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ರೀತಿ ಪ್ರಮಾದ ಎಸಗಿರುವುದು ತಪ್ಪು. ಕೂಡಲೇ ತಪ್ಪು ಸರಿ ಪಡಿಸುವಂತೆ ಸಚಿವಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವ ಪೈಲಟ್ ಹೇಳಿದ್ದಾರೆ.

ಇದರ ಬೆನ್ನಲ್ಲೇ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಸೂಚನೆ ನೀಡಿರುವ ಸಚಿನ್ ಪೈಲಟ್,' ಒಂದು ಸಮೀಕ್ಷೆ ನಡೆಸಿ ಈ ರೀತಿ ಭಾರತದ ಭೂಪಟ, ಲಾಂಛನ, ಪ್ರಾಣಿ, ಪಕ್ಷಿ ಹಾಗೂ ದೇಶದ ಪ್ರಮುಖ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಪ್ರಕಟಣೆ ಹೊರಡಿಸುವವರ ನೀಡುವಂತೆ ಹೇಳಿದ್ದಾರೆ. ಗೂಗಲ್ ನಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಐಬಿಎನ್ ಲೈವ್ ವೆಬ್ ಸೈಟ್ ನಲ್ಲಿ ಈ ಬಗ್ಗೆ ವಿಸ್ತೃತ ವರದಿ ಪ್ರಕಟವಾಗಿದ್ದು, 'ಗೂಗಲ್ ಇನ್ ಸೈಟ್ ಸರ್ಚ್' ನಲ್ಲಿ ಈ ರೀತಿ ಪ್ರಮಾದವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಗೂಗಲ್ ತನ್ನ ತಪ್ಪನ್ನು ತಿದ್ದುಕೊಂಡರೂ ಮತ್ತೆ ಮತ್ತೆ ಇದೇ ರೀತಿ ತಪ್ಪುಗಳಾಗುತ್ತಿದ್ದು, ಈ ಬಗ್ಗೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ವರದಿ ಹೇಳಿದೆ.

ಈ ಹಿಂದೆ ಗೂಗಲ್ ಉಪಗ್ರಹದ ಮ್ಯಾಪ್ ನೀಡಿದ ಚಿತ್ರದಲ್ಲಿ ಅರುಣಾಚಲ ಪ್ರದೇಶದ ಭೂ ಭಾಗಗಳನ್ನು ಚೀನಾಕ್ಕೆ ಸೇರಿದ್ದು ಎಂದು ತೋರಿಸಲಾಗಿತ್ತು.

English summary
Earlier in 2005 and now, Google seems to goof up the political map of India everytime. This time again, the Google Insights of Search shows the Pakistan-occupied-Kashmir as a part of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X