ಚಿಪ್ಕೋ ಚಳವಳಿಗೆ ಗೂಗಲ್ ಡೂಡಲ್ ನಮನ
ನವದೆಹಲಿ, ಮಾರ್ಚ್ 26: ಸರ್ಚ್ ಇಂಜಿನ್ ಗೂಗಲ್, ಚಿಪ್ಕೋ ಚಳವಳಿಯ 45 ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಡೂಡಲ್ ಮೂಲಕ ನಮನ ಸಲ್ಲಿಸಿದೆ.
ದೇಶದ ಇತಿಹಾಸದಲ್ಲಿ ಅಚ್ಚೊತ್ತಿರುವ ಒಂದಿಲ್ಲೊಂದು ಮಹತ್ವದ ಘಟನೆಗಳನ್ನು ಡೂಡಲ್ ಮೂಲಕ ಪರಿಚಯಿಸುವ ಪರಿಪಾಠ ಇಟ್ಟುಕೊಂಡಿರುವ ಗೂಗಲ್ ಕ್ರಮ ಶ್ಲಾಘನೀಯವೇ. ಇದೀಗ ಭಾರತೀಯರು ಎಂದಿಗೂ ಮರೆಯಲಾರದ ಚಿಪ್ಕೋ ಚಳವಳಿಯನ್ನು ಈ ಮೂಲಕ ನೆನಪಿಸಿಕೊಂದಿರುವುದು ಗೂಗಲ್ ಹೆಗ್ಗಳಿಕೆ.
1973 ರಲ್ಲಿ ಉತ್ತರಖಾಂಡದಲ್ಲಿ ಪರಿಸರವಾದಿ ಸುಂದರ್ ಲಾಲ್ ಬಹುಗುಣ ನೇತೃತ್ವದಲ್ಲಿ ಆರಂಭವಾದ ಚಳವಳಿ ಇದು. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಮರಗಳನ್ನು ಕಡಿಯಲು ಬಂದ ಅಧಿಕಾರಿಗಳಿಗೆ ಅಡ್ಡ ನಿಂತು, ಮರವನ್ನು ತಬ್ಬಿಕೊಂಡು, ಮೊದಲು ನಮ್ಮನ್ನು ಕೊಲ್ಲಿ, ನಂತರ ಮರವನ್ನು ಎಂದು ಜನರೆಲ್ಲ ಧೈರ್ಯವಾಗಿ ನಿಂತು ಚಳವಳಿ ಮಾಡದಿದ ಘಳಿಗೆ ಅದು. ಮನುಷ್ಯನ ಭವಿಷ್ಯಕ್ಕೆ ಅತ್ಯಗತ್ಯವಾದ ಮರಗಳ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾದ ಜನರ ನಡೆಯನ್ನು ಶ್ಲಾಘಿಸುವುದಕ್ಕೆ ಚಿಪ್ಕೋ ಚಳವಳಿಯನ್ನು ದೇಶ ಸದಾ ಕೊಂಡಾಡುತ್ತದೆ.

18 ನೇ ಶತಮಾನದ ಆದಿಯಲ್ಲೇ ರಾಜಸ್ಥಾನದ ರಾಜನೊಬ್ಬನ ಆದೇಶದ ಮೇರೆಗೆ ಮರಕಡಿಯುವುದಕ್ಕೆಂದು ಬಂದವರನ್ನು 363 ಜನ ಚಿಪ್ಕೋ ಚಳವಳಿ ನಡೆಸಿ ತಡೆಯುವುದಕ್ಕೆಂದು ಹೊರಟಿದ್ದರು. ಆದರೆ ಮರದ ಉಳಿವಿಗಾಗಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು ಎಂಬುದು ಇತಿಹಾಸದಲ್ಲಿದೆ. ಅದರ ಪ್ರೇರಣೆಯಿಂದಲೇ ನಂತರ ಉತ್ತರಖಾಂಡದಲ್ಲೂ ಚಿಪ್ಕೋ ಚಳವಳಿ ನಡೆದಿತ್ತು.












Click it and Unblock the Notifications