Ration Card: ಹೊಸವರ್ಷದಿಂದಲೇ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್
Ration Card: ಈಗಾಗಲೇ ನಕಲಿ ದಾಖಲ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವಂತಹ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿತ್ತು. ಅಲ್ಲದೆ, ಅಂತಹವನ್ನು ಎಪಿಎಲ್‌ಗೆ ವಾರ್ಗಾಯಿಸುವ ಕೆಲಸವನ್ನು ಮುಂದುವರೆಸಿದೆ. ಇನ್ನು ಇದೀಗ ಎಲ್ಲಾ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್‌ವೊಂದನ್ನು ನೀಡಲಾಗಿದೆ. ಇದು 2025ರ ಹೊಸವರ್ಷದಿಂದಲೇ ಕಾರ್ಯರೂಪಕ್ಕೆ ಬರಲಿದೆ. ಇಲ್ಲಿದೆ ನೋಡಿ ಮಾಹಿತಿ.
ಭಾರತ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಜನರಿಗೆ ಕಡಿಮೆ ಬೆಲೆಯಲ್ಲಿ ಸರ್ಕಾರಿ ಪಡಿತರವನ್ನು ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರವು ಜನರಿಗೆ ಪಡಿತರ ಚೀಟಿಗಳನ್ನು ನೀಡುತ್ತದೆ. ಇದನ್ನು ತೋರಿಸಿದರೆ ಮಾತ್ರ ಪಡಿತರ ಡಿಪೋದಲ್ಲಿ ಉಚಿತವಾಗಿ ಮತ್ತು ಕಡಿಮೆ ದರದಲ್ಲಿ ಪಡಿತರ ದೊರೆಯುತ್ತದೆ.

ಭಾರತದಲ್ಲಿ 20 ಕೋಟಿಗೂ ಹೆಚ್ಚು ಪಡಿತರ ಚೀಟಿಗಳು ಲಭ್ಯವಿವೆ. ಇವುಗಳ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡಲಾಗುತ್ತದೆ. ಪ್ರತಿ ರಾಜ್ಯದ ನಿರ್ಗತಿಕರು ಈ ಸೌಲಭ್ಯದ ಪ್ರಯೋಜನ ಪಡೆಯುತ್ತಾರೆ. ಆದರೆ ಈಗ ನಿಯಮಗಳನ್ನು ಬದಲಾಯಿಸಲಾಗಿದೆ. ಹೊಸ ವರ್ಷದಿಂದ ಪಡಿತರ ಚೀಟಿದಾರರ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಪಡಿತರ ಚೀಟಿದಾರರಿಗೆ ಪಡಿತರ ಪಡೆಯಲು ಪಡಿತರ ಚೀಟಿ ಅಗತ್ಯವಿಲ್ಲ. ಇದಕ್ಕಾಗಿ ಮೇರಾ ರೇಷನ್ 2.0 ಆಪ್ ಬಳಸಬಹುದಾಗಿದೆ.
ಈಗ ನೀವು ಪಡಿತರ ಅಂಗಡಿಗೆ ಹೋಗಿ ನಿಮ್ಮ ಪಡಿತರ ಚೀಟಿ ತೋರಿಸುವ ಅಗತ್ಯವಿಲ್ಲ. ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಮಾತ್ರ ನೀವು ಪಡಿತರ ಚೀಟಿಯನ್ನು ಪಡೆಯಲು ಸಾಧ್ಯ ಆಗುತ್ತದೆ. ನೀವು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಡಿಜಿಟಲ್ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.
ಫೋನ್‌ನಲ್ಲಿ ಮೇರಾ ರೇಷನ್ 2.0 ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ ನೀವು ಅದನ್ನು ತೆರೆಯಬೇಕು. ಇದರ ನಂತರ ನೀವು ನಿಮ್ಮ ಆಧಾರ್ ನಂಬರ್ ಮತ್ತು ಫೋನ್ ನಂಬರ್ ಅನ್ನು ನಮೂದಿಸಬೇಕಾಗುತ್ತದೆ. ಪರಿಶೀಲನೆಯ ನಂತರ ನೀವು ಪಡಿತರ ಚೀಟಿಯನ್ನು ಮೇರಾ ರೇಷನ್ 2.0 ನಲ್ಲಿ ನೋಡಬಹುದಾಗಿದೆ.
ಸರ್ಕಾರದ ಈ ಉಪಕ್ರಮವು ತಮ್ಮ ನಗರದಿಂದ ದೂರ ವಾಸಿಸುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಪಡಿತರ ಚೀಟಿ ಇಲ್ಲದ ಕಾರಣ ಪಡಿತರ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಫೋನ್‌ನಲ್ಲಿಯೇ ಪಡಿತರ ಚೀಟಿ ತೋರಿಸಿ ಪಡಿತರ ಸೌಲಭ್ಯ ಪಡೆಯಬಹುದಾಗಿದೆ. ಇದು ಜನರಿಗೆ ತುಂಬಾ ಅನೂಕೂಲ ಆದಂತಾಗಲಿದೆ.












Click it and Unblock the Notifications