OYO Rooms: ಓಯೋ ರೂಂಗೆ ಭೇಟಿ ನೀಡುವ ಜೋಡಿಗಳಿಗೆ ಭರ್ಜರಿ ಗುಡ್ ನ್ಯೂಸ್
OYO Rooms: ಭಾರತದಲ್ಲಿ ಆರಂಭವಾಗಿದ್ದ ಓಯೋ ಜಾಗತಿಕ ಮಟ್ಟದಲ್ಲೂ ಕೂಡ ಗುರುತಿಸಿಕೊಂಡಿದೆ. ಇದರ ಸೇವೆ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಇದು ಗ್ರಾಹಕರಿಗೆ ಅನುಕೂಲ ಆಗುವಂತೆ ಮತ್ತೊಂದು ಹೊಸ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಅದರಲ್ಲೂ ಜೋಡಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರೆ ತಪ್ಪಾಗಲಾರದು. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ ತುಂಬಾ ಜನ ಓಯೋ ಹೆಸರು ಕೇಳಿದರೆ ಸಾಕು ಇದು ಬರೀ ಪ್ರೇಮಿಗಳು ಎಂಟ್ರಿ ಕೊಡುವ ಜಾಗ ಅಂದುಕೊಂಡಿರುತ್ತಾರೆ. ಅಲ್ಲದೆ, ತಪ್ಪು ಕಲ್ಪನೆಯನ್ನು ಕೂಡ ಮಾಡಿಕೊಳ್ಳುವವರಿದ್ದಾರೆ. ಆದರೆ, ಇಲ್ಲಿ ಯಾರೂ ಬೇಕಾದರೂ ರೂಂ ಬಾಡಿಗೆ ಪಡೆಯಬಹುದಾಗಿದೆ. ಅದು ಲಾಡ್ಜ್‌ಗಳಿಗೆ ಹೋಲಿಕೆ ಮಾಡಿದರೆ, ಬೇರೆ ಊರುಗಳಿಂದ ಬಂದವರಿಗೆ ಕಡಿಮೆ ದರದಲ್ಲಿ ಉಳಿದುಕೊಳ್ಳಲು ರೂಂ ಸಿಗುವುದೇ ಇಲ್ಲಿ.

ಇದೀಗ ಓಯೋ ರೂಂನಲ್ಲಿ ಉಳಿದುಕೊಳ್ಳುವವರಿಗೆ ಹೊಸ ಸೇವೆ ನೀಡಲು ಮುಂದಾಗಿದೆ. ಓಯೋ ಕಂಪನಿಯು ಹೊಸದಾಗಿ ಫುಡ್ & ಬೆವರೇಜ್ ಸೇವೆಯನ್ನು ಪರಿಚಯಿಸುತ್ತಿದೆ. ತಮ್ಮ ಹೋಟೆಲ್‌ಗಳಲ್ಲಿ ಅಡುಗೆ ಮನೆ ಮತ್ತು ಕ್ವಿಕ್ ಸರ್ವಿಸ್ ರೆಸ್ಟೋರೆಂಟ್‌ಗಳನ್ನು ಆರಂಭಿಅಸಲಿದೆ. ಕಿಚನ್ ಸರ್ವೀಸಸ್ ಮೂಲಕ ಓಯೋ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಆಹಾರವನ್ನು ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ.
ಭಾರತ ಮೂಲದ ಓಯೋ ಕಂಪನಿಯು ಬರೀ ರೂಂ ಅಷ್ಟೇ ಅಲ್ಲದೆ, ತನ್ನ ಗ್ರಾಹಕರಿಗೆ ಆಹಾರ ಮತ್ತು ಪಾನೀಯಗಳ ಸರ್ವ್ ಮಾಡಲು ಮುಂದಾಗಿದೆ. ಕಂಪನಿಯು ತನ್ನದೇ ಆದ ಹೋಟೆಲ್‌ಗಳಲ್ಲಿ ಅಡುಗೆ ಮನೆಗಳು ಮತ್ತು ತ್ವರಿತ ಸೇವಾ ರೆಸ್ಟೋರೆಂಟ್ ಕಾರ್ಟ್‌ಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.
ಗ್ರಾಹಕರು ಓಯೋ ಅಪ್ಲಿಕೇಶನ್ ಹಾಗೂ ಕಿಚನ್ ಸರ್ವೀಸಸ್ ಎಂಬ ವೆಬ್‌ಸೈಟ್ ಮೂಲಕ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು. ಇವುಗಳನ್ನು ಹೋಟೆಲ್‌ವೊಳಗೆ ಸ್ಥಾಪಿಸಿ ಅಡುಗೆ ಮನೆಯ ಮೂಲಕ ಒದಗಿಸಲಾಗುತ್ತದೆ.
ಓಯೋ ಟೌನ್‌ಹೌಸ್ ಹೋಟೆಲ್‌ಗಳು ಟೌನ್‌ಹೌಸ್ ಕೆಫೆ ಎಂಬ ಮೀಸಲಾದ QSR ಕಿಯೋಸ್ಕ್‌ಗಳನ್ನು ಹೊಂದಿರುತ್ತವೆ. ಆರಂಭದಲ್ಲಿ, 2025-26 ರಲ್ಲಿ 1,500 ಹೋಟೆಲ್‌ಗಳಲ್ಲಿ ಈ ಹೊಸ ಸೇವೆಗಳನ್ನು ತರಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಈ ಸೇವೆಗಳು ಹೆಚ್ಚುವರಿ ಶೇಕಡ 5-10 ಆದಾಯವನ್ನು ಗಳಿಸಬಹುದು ಎಂದು ಓಯೋ ಅಂದಾಜು ಮಾಡಿದೆ. 1ಈ ಯೋಜನೆಯನ್ನು ಮೊದಲು ನವದೆಹಲಿ, ಗುರುಗ್ರಾಮ್, ಹೈದರಾಬಾದ್ ಮತ್ತು ಬೆಂಗಳೂರಿನಂತಹ ನಗರಗಳ 100 ಹೋಟೆಲ್‌ಗಳಲ್ಲಿ ಪ್ರಾಯೋಗಿಕ ಕಾರ್ಯಕ್ರಮವಾಗಿ ಪ್ರಾರಂಭಿಸಲಾಯಿತು. ಅದು ಯಶಸ್ವಿ ಆದ ಬಳಿಕ ದೇಶಾದ್ಯಂತ ಜಾರಿಗೆ ತರಲು ನಿರ್ಧಾರ ಮಾಡಿದೆ.
ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ಪ್ರಕಾರ, ಕಂಪನಿಯು 1,100 ಕೋಟಿ ರೂಪಾಯಿಗಳ ಪಿಎಟಿ ಲಾಭ ಗಳಿಸಲಿದೆ ಎಂದು ಅಂದಾಜಿಸಲಾಗಿದೆ. 2025ರಲ್ಲಿ ಓಯೋದ ಆದಾಯ 2,100 ಕೋಟಿ ರೂಪಾಯಿ ಇದು ಕಳೆದ ವರ್ಷಕ್ಕಿಂತ ಶೇಕಡ 60ರಷ್ಟು ಹೆಚ್ಚಾಗಿದೆ. G6 ಹಾಸ್ಪಿಟಾಲಿಟಿ ಒಪ್ಪಂದದಿಂದ 275 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುವ ಸಾಧ್ಯತೆಯಿದೆ. G6 ಇಲ್ಲದಿದ್ದರೆ, ಓಯೋದ ಆದಾಯವು 1,886 ಕೋಟಿ ರೂಪಾಯಿಗಳಾಗಿರುತ್ತಿತ್ತು. ಇದು ಶೇಕಡ 42ರಷ್ಟು ಬೆಳವಣಿಗೆ ಆಗಿದೆ ಎಂದು ತಿಳಿದುಬಂದಿದೆ.
ಸದ್ಯ ಈಗ ಓಯೋ ನವದೆಹಲಿ, ಮುಂಬೈ, ಹೈದರಾಬಾದ್, ಪುಣೆ, ಇಂದೋರ್, ಕೋಲ್ಕತ್ತಾ, ಜೈಪುರ ಮತ್ತು ಲಕ್ನೋದಂತಹ ಪ್ರಮುಖ ನಗರಗಳಲ್ಲಿ ತಜ್ಞರನ್ನು ನಿಯೋಜಿಸುತ್ತಿದೆ. ಆದ್ದರಿಂದ ಅದು ತನ್ನ ಹೊಸ ಆಹಾರ ಮತ್ತು ಪಾನೀಯ ಸೇವೆಗಳ ಜಾಲವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹೀಗೆ ಓಯೋ ಮೊದಲಿನಿಂದಲೂ ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ತನ್ನ ಸೇವೆಯನ್ನು ವಿಸ್ತರಣೆ ಮಾಡುತ್ತಲೇ ಇದೆ.












Click it and Unblock the Notifications