DA Hike Good News: ಸರ್ಕಾರಿ ನೌಕರರಿಗೆ ಬಂಪರ್: ಭರ್ಜರಿ ಡಿಎ ಹೆಚ್ಚಳ ಶೀಘ್ರ!
DA revision in 2025: ಸರ್ಕಾರಿ ನೌಕರರಿಗೆ 2025ನೇ ವರ್ಷ ಅತ್ಯಂತ ಸಂತೋಷದ ವರ್ಷವಾಗಿರಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವರ್ಷ ಭರ್ಜರಿ ಗುಡ್‌ನ್ಯೂಸ್ ಕಾದಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (DA) ಪರಿಷ್ಕರಣೆಯು 2025ನೇ ಸಾಲಿನ ಜನವರಿಯಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರಿ ನೌಕರರು ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಬಂದಿದೆ. ಆದರೆ, ಇದರ ನಡುವೆ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (All-India Consumer Price Index) ವರದಿಯ ನಿರೀಕ್ಷೆ ಸಹ ಮುಂದುವರಿದಿದೆ ಎಂದು ಹೇಳಲಾಗಿದೆ. ಈ ವರದಿಗಾಗಿ ಕಾಯುತ್ತಿರುವ ಹಿನ್ನೆಲೆಯಲ್ಲಿ ಡಿಎ ಪರಿಷ್ಕರಣೆ ಪ್ರಕ್ರಿಯೆ ಅಲ್ಪ ಪ್ರಮಾಣದಲ್ಲಿ ಹಿನ್ನಡೆ ಆಗುವ ಸಾಧ್ಯತೆಯೂ ಇದೆ. AICPI ಪ್ರಕಾರ ಡಿಎ ಶೇ.56ರಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಡಿಎ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಎಐಸಿಪಿಐ ವರದಿಯನ್ನು ಆಧರಿಸಿ ಡಿಎ ಹೆಚ್ಚಳ ಮಾಡುತ್ತದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು (ಡಿಎ) ಹೆಚ್ಚಳ ಮಾಡುತ್ತದೆ. ಪರಿಷ್ಕರಣೆ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಜನವರಿಯಿಂದ ಜೂನ್ ಅವಧಿಯಲ್ಲಿ ಹಾಗೂ ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಡಿಎ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತದೆ.

ಕೇಂದ್ರ ಸರ್ಕಾರವು 2024ನೇ ಸಾಲಿನ ಅಕ್ಟೋಬರ್ 16ಕ್ಕೆ ಹಾಗೂ ದೀಪಾವಳಿ ಹಬ್ಬದ ಸಮಯದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಯಲ್ಲಿ ಶೇ 3% ಹೆಚ್ಚಳ ಮಾಡಿತ್ತು. ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ಕೊಟ್ಟಿತ್ತು. ಇದರಿಂದ ಡಿಎ ಪ್ರಮಾಣವು 50% ರಿಂದ 53% ಕ್ಕೆ ಹೆಚ್ಚಳವಾಗಿತ್ತು. ಇದರಿಂದ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಆದಾಯ ಬಂದಿತ್ತು. ಇನ್ನು ಅದಕ್ಕೂ ಮೊದಲು ಡಿಎ ಪ್ರಮಾಣವನ್ನು 4% ರಷ್ಟು ಹೆಚ್ಚಿಸಲಾಗಿತ್ತು. ಇದರಿಂದ ಮೊಟ್ಟ ಮೊದಲ ಬಾರಿ ವೇತನದ 50% ಕ್ಕೆ ಏರಿಕೆ ಕಂಡಿತ್ತು.
ಡಿಎ 2025ರಲ್ಲಿ ಎಷ್ಟು ಹೆಚ್ಚಳವಾಗಲಿದೆ
ಎಐಸಿಪಿಐಎನ್ ವರದಿಯನ್ನು ಆಧಾರಿಸಿ ಡಿಎ ಹೆಚ್ಚಳ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅಕ್ಟೋಬರ್ 2024ರಲ್ಲಿ ಎಐಸಿಪಿಐಎನ್ ಸೂಚ್ಯಂಕವು 144.5 ಕ್ಕೆ ತಲುಪಿದೆ. ಹೀಗಾಗಿ 55.05% ಪ್ರತಿಶತಕ್ಕೆ ಡಿಎ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ. AICPIN ಸೂಚ್ಯಂಕವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ 145.3 ಕ್ಕೆ ಹೆಚ್ಚಳವಾದರೆ, 2025ರ ಜನವರಿಯಲ್ಲಿ ಡಿಎ ಪ್ರಮಾಣವು 56%ಕ್ಕೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಈಗ ಬಂದಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರವು 2025ರ ಜನವರಿಯಲ್ಲಿ ಡಿಎ ಪ್ರಮಾಣವನ್ನು ಶೇ3% ರಷ್ಟು ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದು ಕನಿಷ್ಠ ವೇತನ 18,000 ರೂ. ಪಡೆಯುತ್ತಿರುವವರಿಗೆ ಕನಿಷ್ಠ ವೇತನವು 540 ರೂ. ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಸರ್ಕಾರಿ ನೌಕರರಿಗೆ 10,000 ಸಾವಿರಕ್ಕೂ ಹೆಚ್ಚು ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನು ಪಿಂಚಣಿದಾರರಿಗೆ 3,750 ಹೆಚ್ಚಳವಾಗುವ ಸಾಧ್ಯತೆ ಇದೆ.












Click it and Unblock the Notifications