Gold: ಯಾವ ಕ್ಯಾರೆಟ್ ಚಿನ್ನ ಎಷ್ಟು ಪರಿಶುದ್ಧ? ಖರೀದಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳಿವು
ಚಿನ್ನವು ಭಾರತೀಯರ ಜೀವನದಲ್ಲಿ ಹೂಡಿಕೆ, ಸಂಪ್ರದಾಯ ಹಾಗೂ ಆರ್ಥಿಕ ಭದ್ರತೆಯ ಪ್ರತೀಕವಾಗಿದೆ. ಮದುವೆ, ಹಬ್ಬ, ಉಳಿತಾಯ ಅಥವಾ ಭವಿಷ್ಯದ ಭದ್ರತೆಗಾಗಿ ಚಿನ್ನ ಖರೀದಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಚಿನ್ನ ಖರೀದಿಸುವಾಗ 18K, 22K, 24K, 14K ಮತ್ತು 916 ಚಿನ್ನ ಎಂಬ ಪದಗಳು ಸಾಮಾನ್ಯ ಗ್ರಾಹಕರಿಗೆ ಗೊಂದಲ ಉಂಟುಮಾಡುತ್ತವೆ. ಈ ಕ್ಯಾರೆಟ್ ಸಂಖ್ಯೆಗಳು ಚಿನ್ನದ ಶುದ್ಧತೆಯನ್ನು ಸೂಚಿಸುತ್ತವೆ ಮತ್ತು ಪ್ರತಿ ಕ್ಯಾರೆಟ್ ಚಿನ್ನದ ಬಳಕೆ, ಬೆಲೆ ಹಾಗೂ ಮೌಲ್ಯ ಭಿನ್ನವಾಗಿರುತ್ತದೆ.
ಸಾಮಾನ್ಯವಾಗಿ 24 ಕ್ಯಾರೆಟ್ ಚಿನ್ನವನ್ನು ಅತ್ಯಂತ ಶುದ್ಧ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಶೇ.99.9ರಷ್ಟು ಶುದ್ಧ ಚಿನ್ನವಿದ್ದು, ಯಾವುದೇ ಮಿಶ್ರ ಲೋಹಗಳು ಸೇರಿರುವುದಿಲ್ಲ. ಈ ಕಾರಣದಿಂದಾಗಿ 24 ಕ್ಯಾರೆಟ್ ಚಿನ್ನವು ಮೃದು ಸ್ವಭಾವದ್ದಾಗಿದ್ದು, ಆಭರಣ ತಯಾರಿಕೆಗೆ ಸೂಕ್ತವಲ್ಲ. ಆದರೆ ಹೂಡಿಕೆ ಉದ್ದೇಶಕ್ಕಾಗಿ ಚಿನ್ನದ ನಾಣ್ಯಗಳು, ಬಾರ್‌ಗಳು, ಡಿಜಿಟಲ್ ಗೋಲ್ಡ್ ಹಾಗೂ ಗೋಲ್ಡ್ ಇಟಿಎಫ್‌ಗಳಲ್ಲಿ ಈ ಚಿನ್ನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರ ಮೌಲ್ಯ ಹೆಚ್ಚು ಇರುವುದರಿಂದ ಮರುಮಾರಾಟದ ಮೌಲ್ಯ ಕೂಡ ಉತ್ತಮವಾಗಿರುತ್ತದೆ.

ಭಾರತದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಚಿನ್ನವೆಂದರೆ 22 ಕ್ಯಾರೆಟ್ ಚಿನ್ನ. ಇದರಲ್ಲಿ ಶೇ.91.6ರಷ್ಟು ಶುದ್ಧ ಚಿನ್ನವಿದ್ದು, ಉಳಿದ ಭಾಗದಲ್ಲಿ ತಾಮ್ರ ಅಥವಾ ಬೆಳ್ಳಿ ಹೋಲುವ ಮಿಶ್ರ ಲೋಹಗಳು ಸೇರಿರುತ್ತವೆ. ಇದೇ ಶುದ್ಧತೆಯನ್ನು ಸೂಚಿಸುವುದೇ 916 ಚಿನ್ನ. ಅಂದರೆ 22 ಕ್ಯಾರೆಟ್ ಮತ್ತು 916 ಚಿನ್ನ ಎರಡೂ ಒಂದೇ ಆಗಿವೆ. ಈ ಚಿನ್ನವು ಶುದ್ಧತೆ ಮತ್ತು ಬಲದ ನಡುವೆ ಸಮತೋಲನ ಹೊಂದಿರುವುದರಿಂದ ಮದುವೆ ಹಾಗೂ ಸಂಪ್ರದಾಯಿಕ ಆಭರಣಗಳಿಗೆ ಅತ್ಯಂತ ಸೂಕ್ತವಾಗಿದೆ. ಬಿಐಎಸ್ ಹಾಲ್‌ಮಾರ್ಕ್ ಹೊಂದಿರುವ 916 ಚಿನ್ನವೇ ಸುರಕ್ಷಿತ ಎಂಬುದು ತಜ್ಞರ ಸಲಹೆ.
ಡೈಮಂಡ್-ಸ್ಟೋನ್ ಜ್ಯುವೆಲ್ಲರಿಗಳಿಗೆ ಯಾವುದು ಬೆಸ್ಟ್?
ಇನ್ನು 18 ಕ್ಯಾರೆಟ್ ಚಿನ್ನದಲ್ಲಿ ಶೇ.75ರಷ್ಟು ಮಾತ್ರ ಶುದ್ಧ ಚಿನ್ನವಿದ್ದು, ಉಳಿದ ಭಾಗದಲ್ಲಿ ವಿವಿಧ ಲೋಹಗಳು ಮಿಶ್ರಣವಾಗಿರುತ್ತವೆ. ಇದರಿಂದಾಗಿ ಈ ಚಿನ್ನವು ಹೆಚ್ಚು ಬಲಿಷ್ಠವಾಗಿದ್ದು, ಡೈಮಂಡ್ ಮತ್ತು ಸ್ಟೋನ್ ಜ್ಯುವೆಲ್ಲರಿಗಳಿಗೆ ಸೂಕ್ತವಾಗುತ್ತದೆ. ಆಧುನಿಕ ಹಾಗೂ ಡಿಸೈನರ್ ಆಭರಣಗಳಲ್ಲಿ 18 ಕ್ಯಾರೆಟ್ ಚಿನ್ನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ 22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನದ ಹೋಲಿಕೆಯಲ್ಲಿ ಇದರ ಶುದ್ಧತೆ ಮತ್ತು ಮರುಮಾರಾಟ ಮೌಲ್ಯ ಸ್ವಲ್ಪ ಕಡಿಮೆ ಆಗಿರುತ್ತದೆ.
14 ಕ್ಯಾರೆಟ್ ಚಿನ್ನದಲ್ಲಿ ಶೇ.58.5ರಷ್ಟು ಮಾತ್ರ ಶುದ್ಧ ಚಿನ್ನವಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಲೋಹಗಳು ಸೇರಿರುತ್ತವೆ. ಇದು ಅತ್ಯಂತ ಬಲಿಷ್ಠವಾಗಿರುವುದರಿಂದ ವಿದೇಶಗಳಲ್ಲಿ ದೈನಂದಿನ ಬಳಕೆಯ ಆಭರಣಗಳಿಗೆ ಜನಪ್ರಿಯವಾಗಿದೆ. ಆದರೆ ಭಾರತದಲ್ಲಿ 14 ಕ್ಯಾರೆಟ್ ಚಿನ್ನದ ಮೌಲ್ಯ ಮತ್ತು ಮರುಮಾರಾಟದ ಬೇಡಿಕೆ ಕಡಿಮೆ ಇರುವುದರಿಂದ ಸಂಪ್ರದಾಯಿಕ ಬಳಕೆಗೆ ಹೆಚ್ಚು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ.

ಗ್ರಾಹಕರು ಏನೆಲ್ಲ ಗಮಿಸಬೇಕು?
ಒಟ್ಟಾರೆ ನೋಡಿದರೆ ಚಿನ್ನದ ಕ್ಯಾರೆಟ್ ಆಯ್ಕೆ ಮಾಡುವಾಗ ಗ್ರಾಹಕರು ತಮ್ಮ ಅಗತ್ಯ ಮತ್ತು ಬಳಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮದುವೆ ಹಾಗೂ ಸಂಪ್ರದಾಯಿಕ ಆಭರಣಗಳಿಗೆ 22 ಕ್ಯಾರೆಟ್ ಅಥವಾ 916 ಚಿನ್ನ ಸೂಕ್ತವಾಗಿದ್ದರೆ, ಹೂಡಿಕೆಗಾಗಿ 24 ಕ್ಯಾರೆಟ್ ಚಿನ್ನ ಉತ್ತಮ ಆಯ್ಕೆಯಾಗಿದೆ. ಡೈಮಂಡ್ ಅಥವಾ ದೈನಂದಿನ ಬಳಕೆಯ ಆಭರಣಗಳಿಗೆ 18 ಕ್ಯಾರೆಟ್ ಅಥವಾ 14 ಕ್ಯಾರೆಟ್ ಚಿನ್ನವನ್ನು ಆಯ್ಕೆ ಮಾಡಬಹುದು. ಚಿನ್ನ ಖರೀದಿಸುವಾಗ ಕ್ಯಾರೆಟ್, ಬಿಐಸ್ ಹಾಲ್‌ಮಾರ್ಕ್, ತಯಾರಿಕಾ ಶುಲ್ಕ ಹಾಗೂ ಬೆಲೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮಾರುಕಟ್ಟೆಯ ತಜ್ಞರು.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications