ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಚಿನ್ನ ಕಳ್ಳ ಸಾಗಾಟದಲ್ಲೂ ಭಟ್ಕಳದ ನಂಟು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್.27: ಚಿನ್ನ ಕಳ್ಳ ಸಾಗಣೆ ಹೊಸ ಅಪರಾಧವೇನಲ್ಲ. ಚಿನ್ನವನ್ನು ಹೊಟ್ಟೆಯೊಳೆಗೆ, ಪ್ಯಾಂಟ್ ಬಟನ್ ನಲ್ಲಿ, ಶರ್ಟ್ ಗುಂಡಿಗಳಲ್ಲಿ, ಅಷ್ಟೇ ಏಕೆ ಗುದದ್ವಾರದಲ್ಲಿ ಇಟ್ಟುಕೊಂಡು ಸಾಗಾಟ ಮಾಡುವಾಗ ಸಿಕ್ಕಿಬಿದ್ದು ಜೈಲು ಸೇರಿದವರಿದ್ದಾರೆ. ಆದರೆ ಗೋವಾ ಪೊಲೀಸರಿಗೆ ಸಿಕ್ಕ ಮಾಹಿತಿ ಮತ್ತಷ್ಟು ವಿಚಿತ್ರವಾಗಿದೆ.

ಉಗ್ರವಾದದ ಆಪಾದನೆಯಲ್ಲಿ ಸದಾ ಮುಂದಿರುವ ಭಟ್ಕಳ ಈ ಬಾರಿ ಚಿನ್ನದ ಕಳ್ಳ ಸಾಗಣೆಯ ಪಟ್ಟವನ್ನು ಹೊತ್ತುಕೊಂಡಿದೆ. ಗೋವಾದ ಕಂದಾಯ ಅಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿ ಅನೇಕ ಅಂಶಗಳನ್ನು ಬಹಿರಂಗ ಮಾಡಿದ್ದು ಇಬ್ಬರು ಭಟ್ಕಳ ನಿವಾಸಿಗಳ ಮೇಲೆ ಶಂಕೆ ವ್ಯಕ್ತವಾಗಿದೆ.

gold

ಛತ್ರಿಯ ಹಿಡಿಕೆ, ಕ್ರೀಮ್ ಗಳ ಕವರ್, ಸೂಟ್ ಕೇಸ್ ಹಿಡಿಕೆಯಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ಅಬಕಾರಿ ಮತ್ತು ಕಸ್ಟಮ್ಸ್ ದಳದ ಜಂಟಿ ಆಯುಕ್ತ ಸಿನ್ಹಾ ಎಸ್ ಕೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಪ್ರಕರಣವೇನು?
ಕೇಂದ್ರ ಅಬಕಾರಿ ತನಿಖಾ ದಳದ ಅಧಿಕಾರಿಗಳು ವಿಮಾನ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಗೋವಾದಿಂದ ದುಬೈಗೆ ಹೊರಟಿದ್ದ ಎಐ-994 ವಿಮಾನವನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಅನುಮಾನ ಬಂದು ಭಟ್ಕಳ ಮೂಲದ ಮಹಮದ್ ಅಬ್ದುಲ್ ಎಂಬಾತನನ್ನು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ದುಬೈನಿಂದ ಆಗಮಿಸಿದ ವಿಮಾಣದ ಪರಿಶೀಲನೆಯಲ್ಲಿ ತೊಡಗಿದ್ದಾಗ ಭಟ್ಕಳ ಮೂಲದ ಫರ್ಹಾನ್ ಎಂಬಾತನನ್ನು ಪ್ರಶ್ನೆ ಮಾಡಲಾಗಿದೆ. ಇದಾದ ನಂತರ ಚಿನ್ನ ಕಳ್ಳ ಸಗಾಟದ ಮಾರ್ಗದ ಬಗ್ಗೆ ನಿಖರ ಮಾಹಿತಿಗಳು ದೊರೆಯಲು ಆರಂಭಿಸಿವೆ.

ಬೇರೆ ಬೇರೆ ವಿಧಾನದಲ್ಲಿ ಸಾಗಾಟ
ಚಿನ್ನವನ್ನು ಯಾ ಬಗೆಯಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ಗಮನಕ್ಕೆ ಬರುತ್ತಿರಲಿಲ್ಲ. ಪೆನ್, ಪರ್ಸ್, ಸ್ಪ್ರಿಂಗ್ ರೀತಿಯಲ್ಲಿ ಸಾಗಾಟ ನಡೆಸಿದ್ದು ತಿಳಿದು ಬಂದಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಚಿನ್ನದ ಹಿಡಿಕೆಯ ಛರ್ತಿ, ಕ್ರೀಮ್ ಗಳ ಕವರ್, ಸೂಟ್ ಕೇಸ್ ಚಕ್ರಗಳಲ್ಲಿ ಚಿನ್ನ ಕಂಡುಬಂದಿದೆ. ಒಟ್ಟು 32 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಚಿಕ್ಕ ಪ್ರಮಾಣದಲ್ಲಿ ಸಾಗಾಟ
ಚಿನ್ನಕಳ್ಳ ಸಾಗಾಟದಾರರು ಹೊಸ ಮಾರ್ಗವನ್ನು ಹುಡುಕಿಕೊಂಡಿದ್ದು ಚಿಕ್ಕ ಪ್ರಮಾಣದಲ್ಲಿ ಚಿನ್ನ ಸಾಗಾಟಕ್ಕೆ ಇಳಿದಿದ್ದಾರೆ ಎಂಬುದು ಅಧಿಕಾರಿಗಳಿಗೆ ತಿಳದಿದೆ. ತಕ್ಷಣಕ್ಕೆ ಇಂಥವರೇ ತೊಡಗಿಕೊಂಡಿದ್ದಾರೆ ಎಂದು ಬಂಧಿಸಲು ಅಸಾಧ್ಯವಾದರೂ ಬ್ರೇಕ್ ಹಾಕಲು ಅಧಿಕಾರಿಗಳ ತಂಡ ಸಿದ್ಧತೆ ಮಾಡಿಕೊಂಡಿದೆ.

English summary
The Customs and Central Excise, Goa is handling a very interesting case relating to gold smuggling. This incident which involved two residents of Bhatkal who were attempting to smuggle gold tells us the kind of things smugglers do in a bid to further their business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X