'ಬಿಕಿನಿ' ಬೇಡವೆಂದ ಸಚಿವನಿಗೆ 'ಮಿನಿ ಸ್ಕರ್ಟ್' ಗಿಫ್ಟ್

ಪಣಜಿ, ಜು.2:ಹುಡುಗಿಯರು ತುಂಡುಡುಗೆ ಧರಿಸಿ ಪಬ್‌ಗಳಿಗೆ ಹೋಗುವುದನ್ನು ಖಂಡಿಸಿ ಗೋವಾದಲ್ಲಿ 'ಬಿಕಿನಿ ಸಂಸ್ಕೃತಿ' ಮಟ್ಟ ಹಾಕುವ ಬಗ್ಗೆ ಮಾತನಾಡಿದ್ದ ಸಚಿವ ಸುಧಿನ್ ಧಾವಳೀಕರ್‌ ಅವರಿಗೆ ಕಾಂಗ್ರೆಸ್ಸಿಗರು ಮಿನಿ ಸ್ಕರ್ಟ್ ಗಿಫ್ಟ್ ಆಗಿ ಕಳಿಸಿದ್ದಾರೆ.

ಗೋವಾದ ಬಿಜೆಪಿ ಸರ್ಕಾರದ ಲೋಕೋಪಯೋಗಿ ಸಚಿವ ಸುದಿನ್‌ ಧಾವಳೀಕರ್‌ ದಿನದಿಂದ ದಿನಕ್ಕೆ ನೀಡುತ್ತಿರುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತಲೇ ಇವೆ. ಗೋವಾ ಸಮುದ್ರ ತೀರದಲ್ಲಿ ಬಿಕಿನಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು. ನಂತರ ಹುಡುಗಿಯರು ತುಂಡುಡುಗೆ ತೊಟ್ಟು ಪಬ್‌ಗ ಹೋಗುವುದು ಗೋವಾ ಸಂಸ್ಕೃತಿಗೆ ವಿರುದ್ಧ. ಅದೇ ರೀತಿ ಬಿಕಿನಿ ತೊಟ್ಟು ಬೀಚ್‌ಗೆ ಹೋಗುವುದೂ ತಪ್ಪು. ಸ್ವಯಂರಕ್ಷಣೆ ದೃಷ್ಟಿಯಿಂದ ಬಿಕಿನಿ ತೊಡುವುದನ್ನು ನಿರ್ಬಂಧಿಸಬೇಕು ಎಂದು ಧಾವಳೀಕರ್‌ ಹೇಳಿದ್ದರು.

ಧಾವಳೀಕರ್ ಅವರಿಗೆ ಗೋವಾ ಕಾಂಗ್ರೆಸ್ಸಿಗರು ಪಿಂಕ್ ಮಿನಿ ಸ್ಕರ್ಟ್ ಕಳಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಪಿಂಕ್ ಚಡ್ಡಿ ಚಳವಳಿಗೆ ಬದಲಾಗಿ ಈಗ ಮುತಾಲಿಕ್ ಬೆಂಬಲಿತ ಧಾವಳೀಕರ್ ಅವರಿಗೆ ಪಿಂಕ್ ಮಿನಿಸ್ಕರ್ಟ್ ಉಡುಗೊರೆ ಸಿಕ್ಕಿದೆ.

Goa minister wants to 'ban bikini culture'; Cong sends pink mini-skirt for him

ನಾವು ಗೋವಾದಲ್ಲಿ ನೈತಿಕ ಪೊಲೀಸರಿಗೆ ಅವಕಾಶ ಕೊಡುವುದಿಲ್ಲ. 18 ವರ್ಷ ದಾಟಿದವರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ನಿರ್ಧರಿಸುವ ವಿವೇಚನೆ ಹೊಂದಿರುತ್ತಾರೆ ಎಂದು ಕಾಂಗ್ರೆಸ್‌ ವಕ್ತಾರ ದುರ್ಗಾದಾಸ್‌ ಕಾಮತ್‌ ಹೇಳಿದ್ದಾರೆ.

'ಮುತಾಲಿಕ್‌ಗೆ ಪಿಂಕ್‌ ಚಡ್ಡಿ ಕಳಿಸಿದಂತೆ ಧಾವಳೀಕರ್‌ಗೆ ಗುಲಾಬಿ ಬಣ್ಣದ ಸ್ಕೇಟರ್‌ ಜರ್ಸಿ ಸ್ಕರ್ಟ್‌ ಉಡುಗೊರೆ ಕಳುಹಿಸಿದ್ದೇವೆ. ಕೊರಿಯರ್‌ನಲ್ಲಿ ಅವರ ಪೊರ್ವೊರಿಮ್ ಕಚೇರಿಗೆ ಈ ಸ್ಕರ್ಟ್‌ ತಲುಪುತ್ತದೆ' ಎಂದು ದುರ್ಗಾದಾಸ್‌ ಕಾಮತ್‌ ಹೇಳಿದರು.

ಮುತಾಲಿಕ್ ಗೆ ಬೆಂಬಲ : ಗೋವಾದಲ್ಲಿ ಇತ್ತೀಚೆಗೆ ಪಬ್‌ ಸಂಸ್ಕೃತಿ ವಿರುದ್ಧ ಸಮರ ಸಾರಿರುವ ಕರ್ನಾಟಕದ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ನಿಲುವನ್ನು ಧಾವಳೀಕರ್‌ ಸ್ವಾಗತಿಸಿದ್ದಾರೆ. ಗೋವಾದಲ್ಲಿ ಶ್ರೀರಾಮಸೇನೆ ತನ್ನ ಕಚೇರಿ ತೆರಯಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಸುದ್ದಿ ಸುಳ್ಳು. ಇತರೆ ಎನ್ ಜಿಒ ಗಳಂತೆ ಶ್ರೀರಾಮಸೇನೆ ತನ್ನ ಕಚೇರಿ ಇಲ್ಲಿ ಆರಂಭಿಸಬಹುದಾಗಿದೆ ಎಂದು ಧಾವಳೀಕರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಪಿಟಿಐ ಜತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, 'ಧಾವಳೀಕರ್‌ ಹೇಳಿಕೆಯನ್ನು ನಾನು ಸ್ವಾಗತಿಸುವೆ. ಅವರ ಹೇಳಿಕೆಯು ಪಬ್‌ ಸಂಸ್ಕೃತಿ ವಿರೋಧಿಸುವ ನನ್ನ ನಿಲುವನ್ನು ಸಮರ್ಥಿಸುತ್ತದೆ. ಗೋವಾಕ್ಕೆ ಮುಂದಿನ ಸಲ ಹೋದಾಗ ಸಿಎಂ ಮನೋಹರ ಪರ್ರಿಕರ್‌ ಮತ್ತು ಧಾವಳೀಕರ್‌ರನ್ನು ಭೇಟಿಯಾಗುವೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+