ಗೋವಾ: ಅಮೆರಿಕದ ನಾಗರಿಕರನ್ನು ವಂಚಿಸಿದ ನಕಲಿ ಕಾಲ್ ಸೆಂಟರ್, ಒಂಬತ್ತು ಮಂದಿಯ ಬಂಧನ
ಪಣಜಿ, ಜುಲೈ. 13: ಗೋವಾ ಪೊಲೀಸರು 'ನಕಲಿ ಕಾಲ್ ಸೆಂಟರ್' ನಡೆಸುತ್ತಿದ್ದ ಗ್ಯಾಂಗ್ ಅನ್ನು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಈ ನಕಲಿ ಕಾಲ್ ಸೆಂಟರ್ ಮೂಲಕ ಯುಎಸ್ ಮೂಲದ ಬ್ಯಾಂಕ್‌ಗಳ ಗ್ರಾಹಕ ಸೇವಾ ಕಾರ್ಯನಿರ್ವಾಹಕರಂತೆ ನಟಿಸಿ ಮತ್ತು ಸಾಲ ನೀಡುವುದಾಗಿ ಭರವಸೆ ನೀಡುವ ಮೂಲಕ ಯುಎಸ್ ನಾಗರಿಕರನ್ನು ವಂಚಿಸಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ತಂಡವು, ದಕ್ಷಿಣ ಗೋವಾದ ಮಜೋರ್ಡಾದಲ್ಲಿ ಈ ಸೆಂಟರ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂಬತ್ತು ಜನರನ್ನು ಬಂಧಿಸಿತು. ಅವರು ಅಮೆರಿಕಾದ ನಾಗರಿಕರಿಗೆ ವಂಚನೆ ಮಾಡಲು ಕರೆಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

"ಅಕ್ರಮ ವಿಧಾನಗಳ ಮೂಲಕ ಅಮೆರಿಕಾದ ನಾಗರಿಕರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿದ ಕರೆದಾರರು, ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆಯ ಮೂಲಕ ತೌಆಉ ವಂಚಿಸಬೇಕಿರುವವರನ್ನು ಸಂಪರ್ಕಿಸುತ್ತಾರೆ ಮತ್ತು ಗ್ರಾಹಕರು ಸಾಲವನ್ನು ಕೋರಿ ಪ್ರತಿಕ್ರಿಯಿಸಿದಾಗ, ಅವರು ತಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಎಂದು ಅವರಿಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಗೂಗಲ್ ಪೇ ಮೂಲಕ ಎಲೆಕ್ಟ್ರಾನಿಕ್ ಕರೆನ್ಸಿಗೆ ಪಾವತಿಸಲು ಮತ್ತು ನಂತರ ಭಾರತೀಯ ಕರೆನ್ಸಿಯಲ್ಲಿ ಹಣವನ್ನು ಹಿಂತೆಗೆದುಕೊಳ್ಳಲು ಕೇಳಲಾಗುವ 'ದಂಡ' ಪಾವತಿಸುವ ಮೂಲಕ ಸರಿಪಡಿಸಬಹುದು ಎಂದು ಹೇಳುತ್ತಾರೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಂಚನೆ ಮಾಡುವವರು ಎಕ್ಸ್-ಲೈಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕಾನೂನುಬಾಹಿರ ವಿಧಾನಗಳ ಮೂಲಕ ಯುಎಸ್ ಬ್ಯಾಂಕ್‌ನ ಸಾಲ ನೀಡುವ ಅಧಿಕಾರಿಗಳನ್ನು ಅನುಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆಯ (interactive voice response ) ಮೂಲಕ ಸಂತ್ರಸ್ತರನ್ನು ಸಂಪರ್ಕಿಸಲು ಲ್ಯಾಪ್‌ಟಾಪ್‌ಗಳು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಅನ್ನು ಬಳಸಿದ್ದಾರೆ.

ಕಡಿಮೆ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸಾಲವನ್ನು ನೀಡುವ ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದಾಗಿ ಯುಎಸ್ ನಾಗರಿಕರಿಗೆ ಮನವರಿಕೆ ಮಾಡಿದ್ದಾರೆ ಮತ್ತು ನಂತರ ಬಲಿಪಶುಗಳಿಗೆ ಎಲೆಕ್ಟ್ರಾನಿಕ್ ಪಾವತಿ ವಿಧಾನದ ರೂಪದಲ್ಲಿ ದಂಡವನ್ನು ಪಾವತಿಸಲು ಹೇಳಿ, ಅಮೇರಿಕಾದ ನಾಗರಿಕರಿಗೆ ಮೋಸ ಮಾಡಿದ್ದಾರೆ.
ಬಂಧಿತ ಒಂಬತ್ತು ಮಂದಿಯನ್ನು 32 ವರ್ಷದ ಗುಜರಾತ್‌ನ ಅಹಮದಾಬಾದ್‌ನ ವಿನಯ್ ಮಕ್ವಾನಾ, ಗುಜರಾತ್‌ನ ಮೆಹ್ಸಾನಾದ 28 ವರ್ಷದ ಘಾಚಿ ಅಲ್ಫರ್ಜ್, ಮೇಘಾಲಯದ ಶಿಲ್ಲಾಂಗ್‌ನಿಂದ 26 ವರ್ಷದ ಆಕಾಶ್ ಬಿಸ್ವಾ ಮತ್ತು ಆಕಾಶ್ ಸುನಾರ್, ಪಶ್ಚಿಮ ಬಂಗಾಳದ ಜಲ್ಪೈಗುರಿಯ 20 ವರ್ಷದ ಕೆಸಾಂಗ್ ತಮಾಂಗ್, ಮುಂಬೈನ ಮಾಟುಂಗಾದ 29 ವರ್ಷದ ರಾಹುಲ್ ಸರ್ಸಾರ್, ಮೇಘಾಲಯದ ಶಿಲ್ಲಾಂಗ್‌ನಿಂದ 25 ವರ್ಷದ ಅಜಯ್ ಬಿಸ್ವಾ, ನಾಗಾಲ್ಯಾಂಡ್‌ನ ದಿಮಾಪುರದ 20 ವರ್ಷದ ತನ್ಮೋಯ್ ದಾಸ್‌ಗುಪ್ತಾ ಮತ್ತು ಮುಂಬೈನ 27 ವರ್ಷದ ರೆಹಾನ್ ಶೇಖ್ ಎಂದು ಗುರುತಿಸಿದ್ದಾರೆ.












Click it and Unblock the Notifications