ದೇವಸ್ಥಾನದಲ್ಲಿ ಕಳೆದುಹೋದ ಚಪ್ಪಲಿಯನ್ನ ಹುಡುಕಿಕೊಟ್ಟ ChatGPT: ಯುವಕನ ಈ ಐಡಿಯಾ ಮಾತ್ರ ಸೂಪರ್

ಉಜ್ಜಯಿನಿ: ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆದಂತೆ ಕೃತಕ ಬುದ್ಧಿಮತ್ತೆ ಅಂದರೆ ಎಐ ಕೂಡ ಅದರ ಜೊತೆ ಜೊತೆಗೆ ಬೆಳೆಯುತ್ತಾ ನಮ್ಮ ದೈನಂದಿನ ಜೀವನದಲ್ಲಿ ಆಳವಾಗಿ ಬೇರೂರುತ್ತಿದೆ. ಅನೇಕ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಸುಲಭವಾಗಿ ಬಗೆಹರಿಸುತ್ತಿದೆ. ಸಾಮಾನ್ಯವಾಗಿ ಚಾಟ್‌ಜಿಪಿಟಿಯನ್ನ ಕೋಡಿಂಗ್ ಬರೆಯಲು, ಲೇಖನ ರಚಿಸಲು ಅಥವಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಳಸಲಾಗುತ್ತದೆ.

ಆದರೆ, ಇಲ್ಲೊಬ್ಬ ಯುವಕ ದೇವಸ್ಥಾನದ ಹೊರಗೆ ಸಾವಿರಾರು ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋಗಿದ್ದ ತನ್ನ ಚಪ್ಪಲಿಯನ್ನ ಹುಡುಕಲು ಚಾಟ್‌ಜಿಪಿಟಿಯನ್ನ ಬಳಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಬಳಿ ನಡೆದ ಈ ಕುತೂಹಲಕಾರಿ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Goa Man

ಸಾವಿರಾರು ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ಕ್ಲಾಗ್ಸ್

ಹೌದು ನೋಡಿ, ಗೋವಾ ಮೂಲದ ಶುಭಾಂಗ್ ಬೋರ್ಕರ್ ಎಂಬ ಯುವಕ ಇತ್ತೀಚೆಗೆ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದರ್ಶನ ಮುಗಿಸಿ ಹೊರಬಂದ ಅವರಿಗೆ ಒಂದು ದೊಡ್ಡ ಸಮಸ್ಯೆಯೊಂದು ಎದುರಾಗಿತ್ತು. ದೇವಸ್ಥಾನದ ಹೊರಗಡೆ ಭಕ್ತರು ಬಿಟ್ಟಿದ್ದ ಸಾವಿರಾರು ಚಪ್ಪಲಿಗಳ ರಾಶಿಯಲ್ಲಿ ತಾವು ಬಿಟ್ಟಿದ್ದ 'ಕ್ಲಾಗ್ಸ್' (ಒಂದು ರೀತಿಯ ಚಪ್ಪಲಿ) ಎಲ್ಲಿದೆ ಎಂಬುದೇ ಅವರಿಗೆ ತಿಳಿಯಲಿಲ್ಲ. ಸಾಲು ಸಾಲಾಗಿ, ಗುಡ್ಡೆಯಾಗಿ ಬಿದ್ದಿದ್ದ ಚಪ್ಪಲಿಗಳ ಮಧ್ಯೆ ತಮ್ಮ ಜೋಡಿ ಚಪ್ಪಲಿಯನ್ನು ಗುರುತಿಸುವುದು ಅವರಿಗೆ ಬಹುತೇಕ ಅಸಾಧ್ಯವಾಗಿತ್ತು. ಗಂಟೆಗಟ್ಟಲೆ ಹುಡುಕುವ ಬದಲು ತಂತ್ರಜ್ಞಾನದ ಮೊರೆ ಹೋಗಲು ಶುಭಾಂಗ್ ನಿರ್ಧರಿಸಿದರು.

ಚಾಟ್‌ಜಿಪಿಟಿಯ ಮೊರೆ ಹೋದ ಶುಭಾಂಗ್

ತಮ್ಮ ಸ್ಮಾರ್ಟ್‌ಫೋನ್ ತೆಗೆದ ಶುಭಾಂಗ್, ಚಪ್ಪಲಿಗಳ ರಾಶಿಯಿದ್ದ ಆ ಇಡೀ ಜಾಗವನ್ನ ಒಂದು ವಿಡಿಯೋ ಮಾಡಿದರು. ಬಳಿಕ ಚಾಟ್‌ಜಿಪಿಟಿ ಆ್ಯಪ್ ತೆರೆದು, ತಾವು ಈ ಹಿಂದೆ ತೆಗೆದಿದ್ದ ತಮ್ಮದೇ ಕ್ಲಾಗ್ಸ್ ಚಪ್ಪಲಿಯ ಸ್ಪಷ್ಟವಾದ ಫೋಟೋವನ್ನ ಅದಕ್ಕೆ ಅಪ್‌ಲೋಡ್ ಮಾಡಿದರು.

ಜೊತೆಗೆ, "ನಾನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿದ್ದು, ಇಲ್ಲಿನ ಸಾವಿರಾರು ಚಪ್ಪಲಿಗಳ ಮಧ್ಯೆ ನನ್ನ ಚಪ್ಪಲಿ ಕಳೆದುಹೋಗಿದೆ. ಈ ವಿಡಿಯೋದಲ್ಲಿರುವ ಚಪ್ಪಲಿಗಳ ಗುಂಪನ್ನು ಸ್ಕ್ಯಾನ್ ಮಾಡಿ, ನನ್ನ ಚಪ್ಪಲಿ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ ಕೊಡಿ" ಎಂದು ಚಾಟ್‌ಜಿಪಿಟಿಗೆ ಕಮಾಂಡ್ ನೀಡಿದರು.

ಆ ನಂತರ ಚಪ್ಪಲಿ ರ‍್ಯಾಕ್‌ನ ಬೇರೆ ಬೇರೆ ಸೈಡಿನಿಂದ ಫೋಟೋಗಳನ್ನ ಸಹ ಅವರು ಚಾಟ್‌ಜಿಪಿಟಿಗೆ ಕಳುಹಿಸಿದರು.

ಸರಿಯಾದ ಜಾಗ ಪತ್ತೆಹಚ್ಚಿದ ಎಐ

ಶುಭಾಂಗ್ ನೀಡಿದ ವಿಡಿಯೋ ಮತ್ತು ಫೋಟೋಗಳನ್ನ ಸ್ಕ್ಯಾನ್‌ ಮಾಡಿದ ಚಾಟ್‌ಜಿಪಿಟಿ, ಕೆಲವೇ ಕ್ಷಣಗಳಲ್ಲಿ ಅಚ್ಚರಿಯ ಫಲಿತಾಂಶ ನೀಡಿತು. ಚಪ್ಪಲಿ ಇರಿಸಲಾಗಿದ್ದ ರ‍್ಯಾಕ್‌ನ ಬಲ ಭಾಗದಲ್ಲಿ, ಗುಡ್ಡೆಯಾಗಿರುವ ಚಪ್ಪಲಿಗಳ ಮಧ್ಯಭಾಗದ ಸ್ವಲ್ಪ ಕೆಳಗಡೆ ನಿಮ್ಮ ಚಪ್ಪಲಿ ಇರುವಂತಿದೆ ಎಂದು ಅದು ನಿಖರವಾದ ಜಾಗವನ್ನು ಸೂಚಿಸಿತು.

ಎಐ ನೀಡಿದ ಸೂಚನೆಯಂತೆ ಶುಭಾಂಗ್ ಆ ಜಾಗಕ್ಕೆ ಹೋಗಿ ನೋಡಿದಾಗ, ಅಚ್ಚರಿಯೆಂಬಂತೆ ಅವರ ಚಪ್ಪಲಿ ಅಲ್ಲಿಯೇ ಇತ್ತು. ಈ ಮೂಲಕ ಚಾಟ್‌ಜಿಪಿಟಿ ತನ್ನ ಅದ್ಭುತ ದೃಶ್ಯ ವಿಶ್ಲೇಷಣಾ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತುಪಡಿಸಿತು. ಖುಷಿಗೊಂಡ ಶುಭಾಂಗ್, "ನಾವಿಬ್ಬರೂ ಸೇರಿ ಒಂದು ತಂಡವಾಗಿ ಕೆಲಸ ಮಾಡಿದೆವು" ಎಂದು ಚಾಟ್‌ಜಿಪಿಟಿಗೆ ಧನ್ಯವಾದ ತಿಳಿಸಿದರು.

ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆಗಳು

ಶುಭಾಂಗ್ ಬೋರ್ಕರ್ ಅವರು ಈ ಇಡೀ ಪ್ರಕ್ರಿಯೆಯ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಕೃತಕ ಬುದ್ಧಿಮತ್ತೆಯ ಈ ವಿಶಿಷ್ಟವಾದ ಮತ್ತು ದೈನಂದಿನ ಬಳಕೆಯ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಚಾಟ್‌ಜಿಪಿಟಿಯನ್ನ ಇಂಥದ್ದೊಂದು ಕೆಲಸಕ್ಕೂ ಬಳಸಬಹುದು ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ" ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ತಮಾಷೆಯಾಗಿ, "ಇದೇ ಪರಿಸ್ಥಿತಿ ನನಗೆ ಬಂದಿದ್ದರೆ, ನಾನು ಅಲ್ಲಿರುವ ಚಪ್ಪಲಿಗಳಲ್ಲೇ ಅತ್ಯಂತ ಸುಂದರವಾದ ಮತ್ತು ದುಬಾರಿ ಚಪ್ಪಲಿಯನ್ನ ಹಾಕಿಕೊಂಡು ಮನೆಗೆ ಹೋಗುತ್ತಿದ್ದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ನನ್ನಿಂದ ಪ್ರಪಂಚದ ದೊಡ್ಡ ದೊಡ್ಡ ಕೆಲಸಗಳನ್ನ ಮಾಡಿಸಿಕೊಳ್ಳುತ್ತಾರೆ ಎಂದುಕೊಂಡಿದ್ದ ಚಾಟ್‌ಜಿಪಿಟಿಗೆ, ಹೀಗೆ ಚಪ್ಪಲಿ ಹುಡುಕುವ ಕೆಲಸ ಕೊಟ್ಟಾಗ ಅದು ಕೂಡ ಒಮ್ಮೆ ಶಾಕ್ ಆಗಿರಬಹುದು" ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ, ಈ ಎಐ ಕೇವಲ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮಾತ್ರವಲ್ಲ, ಸಾಮಾನ್ಯ ಮನುಷ್ಯರ ದೈನಂದಿನ ಸಣ್ಣಪುಟ್ಟ ಕಷ್ಟಗಳನ್ನ ದೂರ ಮಾಡಲು ಕೂಡ ಎಷ್ಟು ಉಪಯುಕ್ತವಾಗಿದೆ ಎಂಬುದಕ್ಕೆ ಈ ಘಟನೆ ಒಂದು ಒಳ್ಳೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+