ಗೋವಾದ ಕಾಂಗ್ರೆಸ್ ಕಾರ್ಯಕರ್ತೆಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ
ಪಣಜಿ, ನವೆಂಬರ್ 05 : ತಮ್ಮ ವಿರುದ್ಧ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ಸಾಮೂಹಿಕ ಅತ್ಯಾಚಾರ ಮಾಡಿಸುವುದಾಗಿ ಬಿಜೆಪಿ ನಾಯಕ ಸುಭಾಶ್ ಶಿರೋಡ್ಕರ್ ಅವರು ಬೆದರಿಕೆ ಒಡ್ಡಿದ್ದಾರೆ ಎಂದು ಗೋವಾದ ಕಾಂಗ್ರೆಸ್ ಕಾರ್ಯಕರ್ತೆ ದಿಯಾ ಶೆಟ್ಕರ್ ಅವರು ಆರೋಪ ಮಾಡಿದ್ದಾರೆ.
ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ದಿಶಾ ಶೆಟ್ಕರ್ ಅವರು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಭಾನುವಾರ ಸುಭಾಶ್ ಶಿರೋಡ್ಕರ್ ಬೆಂಬಲಿಗ ಅಂತ ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ತಮಗೆ ಕರೆ ಮಾಡಿದ್ದರು. ತಮ್ಮ ಮೇಲೆ ಸಾಮೀಹಿಕ ಅತ್ಯಾಚಾರ ಮಾಡಿಸುವುದಾಗಿ ಅತ್ಯಂಕ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸಿದರು ಎಂದು ಆರೋಪಿಸಿದ್ದಾರೆ.
ಸುಭಾಶ್ ಶಿರೋಡ್ಕರ್ ಅವರ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಪ್ರವೇಶಿಸಬಾರದು, ಹಾಗೇನಾದರೂ ಮಾಡಿದರೆ ಕೊಲ್ಲಿಸಲೂ ಹೆದರುವುದಿಲ್ಲ ಎಂದೂ ಬೆದರಿಕೆ ಒಡ್ಡಿದ್ದಾರೆ. ಒಬ್ಬ ಮಹಿಳೆಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಸುಭಾಶ್ ಶಿರೋಡ್ಕರ್ ಮತ್ತು ಅವರ ಬೆಂಬಲಿಗರು ಇಷ್ಟು ಕೀಳು ಮಟ್ಟದ ಹಂತಕ್ಕೆ ಇಳಿದಿದ್ದಾರೆ ಎಂದು ದಿಯಾ ಶೆಟ್ಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಗೋವಾದ ಶಿರೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುಭಾಶ್ ಶಿರೋಡ್ಕರ್ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದರು. ದಿಯಾ ಶೆಟ್ಕರ್ ಅವರು ಮಾಡಿರುವ ಸಾಮೂಹಿಕ ಅತ್ಯಾಚಾರ ಮತ್ತು ಬೆದರಿಕೆಯ ಈ ಆರೋಪಗಳಿಗೆ ಸುಭಾಶ್ ಶಿರೋಡ್ಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications