ರಾಹುಲ್ ಮಾತು ಕೇಳಿ ರಾಜೀನಾಮೆ ನೀಡಿದ ಗೋವಾ ಕಾಂಗ್ರೆಸ್ ಅಧ್ಯಕ್ಷ
ಪಣಜಿ, ಮಾರ್ಚ್ 20: ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಶಾಂತಾರಾಮ್ ನಾಯಕ್ ಇಂದು ಹಠಾತ್ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಅವರು ರಾಹುಲ್ ಗಾಂಧಿ ಭಾಷಣವೇ ಕಾರಣ ಎಂದಿದ್ದಾರೆ.
ಶಾಂತಾರಾಮ್ ನಾಯಕ್ ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳುಹಿಸಿದ್ದಾರೆ. ಇದರಲ್ಲಿ ತಮ್ಮ ರಾಜೀನಾಮೆಗೆ ಕಾರಣವನ್ನೂ ಅವರು ತಿಳಿಸಿದ್ದಾರೆ.
ನಿನ್ನೆ ಅಂದರೆ ಸೋಮವಾರ ಮುಕ್ತಾಯಗೊಂಡ ಕಾಂಗ್ರೆಸ್ ಮಹಾಧಿವೇಶನದಲ್ಲಿ ರಾಹುಲ್ ಗಾಂಧಿ ಯುವ ಜನಾಂಗ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬರಬೇಕು ಎಂದು ಕರೆ ನೀಡಿದ್ದರು.

ತಾವು ಈ ಮಾತಿನಿಂದ ಸ್ಪೂರ್ಥಿಗೊಂಡಿರುವುದಾಗಿ ಹೇಳಿರುವ ಶಾಂತಾರಾಮ್ ನಾಯಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.












Click it and Unblock the Notifications