ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಮೀನುಗಳಿಗೆ ಗೋವಾ ನಿರ್ಬಂಧ

ಪಣಜಿ, ನವೆಂಬರ್ 11 : ಗೋವಾ ಸರ್ಕಾರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಮೀನುಗಳನ್ನು 6 ತಿಂಗಳ ಕಾಲ ನಿರ್ಬಂಧಿಸಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರ್ಕಾರ ಹೇಳಿದೆ.

ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶನಿವಾರ ಈ ಕುರಿತು ಘೋಷಣೆ ಮಾಡಿದ್ದಾರೆ. ಈ ಆದೇಶ ನವೆಂಬರ್ 12ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

'ಮೀನುಗಳನ್ನು ಕೆಡದಂತೆ ಸಿಂಪಡಿಸಲಾಗುವ ಫಾರ್ಮಲಿನ್ ಅಂಶವನ್ನು ಪತ್ತೆ ಹಚ್ಚಲು ಸರ್ಕಾರದಿಂದ ಪ್ರಯೋಗಾಲಯ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ' ಎಂದು ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

fish

'ಆರಂಭಿಕ ಹಂತದಲ್ಲಿ 6 ತಿಂಗಳ ಕಾಲ ಹೊರ ರಾಜ್ಯಗಳ ಮೀನುಗಳನ್ನು ನಿರ್ಭಂದಿಸುತ್ತಿದ್ದೇವೆ. ಪ್ರಯೋಗಾಲಯ ತೆರೆಯುವುದು ತಡವಾದಲ್ಲಿ ನಿರ್ಬಂಧ ಮತ್ತೆ ಆರು ತಿಂಗಳು ವಿಸ್ತರಣೆಯಾಗಬಹುದು' ಎಂದು ಸಚಿವರು ವಿವರಣೆ ನೀಡಿದ್ದಾರೆ.

ಹೊರರಾಜ್ಯಗಳ ಮೀನುಗಳ ನಿರ್ಬಂಧ ಕುರಿತು ಪೊಲೀಸ್ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಗಿದೆ. ನಿಯಮ ಮೀರಿದರೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+