ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಟೀಕಿಸುವ ಭರದಲ್ಲಿ ರಮ್ಯಾ ಮತ್ತೆ ಎಡವಟ್ಟು: ಟ್ವಿಟ್ಟಿಗರ ಮಹಾಪೂಜೆ

|
Google Oneindia Kannada News

Recommended Video

ನರೇಂದ್ರ ಮೋದಿಯವರ #GoBackModi ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ! ರಮ್ಯಾ ಎಡವಟ್ಟು | Oneindia kannada

ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವ ಸಂಬಂಧ ತಮಿಳುನಾಡಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಗುರುವಾರ (ಏ 12) ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚೆನ್ನೈ ಭೇಟಿಯ ವೇಳೆಯೂ ಅವರಿಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿದೆ.

ಪ್ರಧಾನಿ ಮೋದಿ ಭೇಟಿಯನ್ನು ವಿರೋಧಿಸಿ #GoBackModi ಹ್ಯಾಷ್ ಟ್ಯಾಗ್ ವಿಶ್ವಾದ್ಯಂತ ಟ್ರೆಂಡಿಂಗ್ ನಲ್ಲಿದ್ದು, "ಲೌಡ್ ಎಂಡ್ ಕ್ಲಿಯರ್" ಎನ್ನುವ ಒಕ್ಕಣೆಯ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಲಾಠಿ ಬಿಟ್ಟು ಬಲೂನ್ ಗೆ 'ಗುಂಡು ಪಿನ್' ಚುಚ್ಚಿದ ತಮಿಳುನಾಡು ಪೊಲೀಸರು! ಲಾಠಿ ಬಿಟ್ಟು ಬಲೂನ್ ಗೆ 'ಗುಂಡು ಪಿನ್' ಚುಚ್ಚಿದ ತಮಿಳುನಾಡು ಪೊಲೀಸರು!

ತಮಿಳರ ಪ್ರತಿಭಟನೆಗೆ ಬೆಂಬಲಿಸುವ ಮೂಲಕ, ಕನ್ನಡಿಗರ ಸ್ವಾಭಿಮಾನಕ್ಕೆ ರಮ್ಯಾ ಧಕ್ಕೆ ತಂದಿದ್ದಾರೆ, ಇವರು ತಮಿಳರ ಪರ ಅಥವಾ ಕನ್ನಡಿಗರ ವಿರೋಧಿ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಮೂಲಕ, ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಮತ್ತೆ ರಮ್ಯಾ ಎಡವಟ್ಟು ಮಾಡಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ತಮಿಳುನಾಡಿನಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ ಮತ್ತು ಟ್ವಿಟ್ಟಿಗರ ಆಕ್ರೋಶ, ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸಬೇಕೆನ್ನುವುದಕ್ಕಾಗಿ. ಮಂಡಳಿ ರಚನೆಗೆ ಕನ್ನಡಿಗರ ತೀವ್ರ ವಿರೋಧವಿದೆ ಎನ್ನುವುದನ್ನು ಅರಿತೂ, ಮಂಡ್ಯದವರಾಗಿರುವ ರಮ್ಯಾ ಅವರ ಈ ನಡೆ ವ್ಯಾಪಕ ಟೀಕೆಗೊಳಗಾಗಿದೆ.

'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!

ಪ್ರಧಾನಿ ಮೋದಿ ವಿರುದ್ದ ಟ್ರೆಂಡ್ ಆಗಿರುವ ಹ್ಯಾಷ್ ಟ್ಯಾಗಿಗೆ ಪೋಸ್ಟ್ ಮಾಡುವುದರಲ್ಲಿ ಮತ್ತು ಪ್ರತಿಕ್ರಿಯಿಸುವುದರಲ್ಲಿ ಮಂಚೂಣಿಯಲ್ಲಿರುವ ರಮ್ಯಾ, ಈಗ ತಮಿಳುನಾಡು ಜನರ ಪ್ರತಿಭಟನೆ, ಕರ್ನಾಟಕದ ವಿರುದ್ದವಾದದ್ದು ಎನ್ನುವುದನ್ನು ಅರಿತೂ ಮಾಡಿರುವ ಟ್ವೀಟಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮುಂದೆ ಓದಿ..

ರಾಜಕುಮಾರ್ ನಿಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು

ರಾಜಕುಮಾರ್ ನಿಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು

ರಾಜಕುಮಾರ್ ನಿಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅವರ ಪುಣ್ಯದಿನದಂದೇ ಕನ್ನಡಿಗರ ವಿರುದ್ದ ಮಾತನಾಡುತ್ತಿದ್ದೀಯಾ? ಕುಡಿಯುವ ನೀರಿನಲ್ಲೂ ರಾಜಕೀಯ ಮಾಡುವ ನಿಮಗೆ ನಾಚಿಕೆಯಾಗಬೇಕು. ಮೋದಿ ಮಾನ ಕಳೆಯೋದರಲ್ಲೇ ಕಾಲ ಕಳೆಯುತ್ತಿದ್ದೀಯಾ? ಮೋದಿಗೆ ಸರಿಸಾಟಿಯಾಗುವಷ್ಟು ಮೊದಲು ತಯಾರಿ ಮಾಡಿಕೋ.

ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರುನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು

ಟ್ವೀಟ್ ಮಾಡುವ ಮುನ್ನ ಸ್ವಲ್ಪ ಸೆನ್ಸ್ ಬಳಸಿ ಮೇಡಂ

ಟ್ವೀಟ್ ಮಾಡುವ ಮುನ್ನ ಸ್ವಲ್ಪ ಸೆನ್ಸ್ ಬಳಸಿ ಮೇಡಂ

ಮಂಡ್ಯದ ಮಾಜಿ ಸಂಸದೆಯಾಗಿ ಟ್ವೀಟ್ ಮಾಡುವ ಮುನ್ನ ಸ್ವಲ್ಪ ಸೆನ್ಸ್ ಬಳಸಿ ಮೇಡಂ, ಟ್ವೀಟ್ ಮಾಡುವ ಮುನ್ನ ಸ್ವಲ್ಪ ಯೋಚಿಸಿ ಟ್ವೀಟ್ ಮಾಡಿ. ಕಾವೇರಿ ವಿಚಾರದಲ್ಲಿ ನಿಮ್ಮ ಪಕ್ಷದ ನಿಲುವೇನು? ಲೌಡ್ ಎಂಡ್ ಕ್ಲಿಯರ್, ಕಾಂಗ್ರೆಸ್ ಮುಕ್ತ್ ಭಾರತ್.. ಹೀಗೆ ರಮ್ಯಾ ಟ್ವೀಟಿಗೆ ವಿರುದ್ದವಾಗಿ ಬಂದಿರುವ ಟ್ವೀಟ್.

ಕನ್ನಡಿಗರ ಹಿತ ಮರೆತು ಹೀಗೆ ತಮಿಳರ ಪರ ನಿಲ್ಲಬಾರದಾಗಿತ್ತು

ಊಟಿ ಕಾನ್ವೆಂಟಿನ ಪ್ರಾಡಕ್ಟ್ ರಮ್ಯ ಕನ್ನಡಿಗರ ಹಿತ ಮರೆತು ಹೀಗೆ ತಮಿಳರ ಪರ ನಿಲ್ಲಬಾರದಾಗಿತ್ತು..!! ತಮಿಳುನಾಡಿನ ಕಾವೇರಿ ಹೋರಾಟಗಾರರ ಪರ ನಿಲ್ಲುವ ಮೂಲಕ ತನ್ನ ತಾಯ್ನಾಡಿಗೆ ದ್ರೋಹ ಬಗೆಯುವ ಕೆಲಸ ಮಾಡಬಾರದಿತ್ತು..‌😠 ಅದು ಮಂಡ್ಯದವಳಾಗಿ...😠

ಕನ್ನಡ ದ್ರೋಹಿ ರಮ್ಯಾ ಗೆ ಧಿಕ್ಕಾರ.. ಈ ರೀತಿಯ ಟ್ವೀಟ್

ಕನ್ನಡ ದ್ರೋಹಿ ರಮ್ಯಾ ಗೆ ಧಿಕ್ಕಾರ.. ಈ ರೀತಿಯ ಟ್ವೀಟ್

ಮತ್ತೊಂದು ಫೇಕ್ ಅಕೌಂಟ್. ನಿಮ್ಮ ಈ ಟ್ಟೀಟ್ ನಿಂದ ತಿಳಿಯಿತು, ಕಾಂಗ್ರೆಸ್ ನವರಿಗೆ CWMB ರಚನೆಯಾಗಬೇಕು ಅಂತ. ತಮಿಳುನಾಡಿನ ಪರವಾಗಿ ನಿಂತ @divyaspandana . ಕಾಂಗ್ರೆಸ್ ನಿಂದ ಕರ್ನಾಟಕಕ್ಕೆ ದ್ರೋಹ. ಕನ್ನಡ ದ್ರೊಹಿ ರಮ್ಯಾ ಗೆ ಧಿಕ್ಕಾರ.. ಈ ರೀತಿಯ ಟ್ವೀಟ್

ಸುಪ್ರೀಂ ಆದೇಶದ ಪ್ರಕಾರ ತ.ನಾಡಿಗೆ ನೀರು ಬಿಡಬೇಕು ಎನ್ನುವುದು ನಿಮ್ಮ ನಿಲುವೇ?

ಸುಪ್ರೀಂ ಆದೇಶದ ಪ್ರಕಾರ ತ.ನಾಡಿಗೆ ನೀರು ಬಿಡಬೇಕು ಎನ್ನುವುದು ನಿಮ್ಮ ನಿಲುವೇ?

ಕರ್ನಾಟಕದ ಮೂಲದವರಾಗಿ ಸುಪ್ರೀಂ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಡಬೇಕು ಎನ್ನುವುದು ನಿಮ್ಮ ನಿಲುವೇ? ಇದಕ್ಕೆಲ್ಲಾ ಇವರು ರಾಹುಲ್ ಗಾಂಧಿಯ ರೀತಿಯಲ್ಲಿ ಸರಿಯಾದ ಉತ್ತರ ನೀಡದೇ ನುಣುಚಿಕೊಳ್ಳುತ್ತಾರೆ. ಮಂಡ್ಯದವರು ಗೋಬ್ಯಾಕ್ ಮೋದಿ ಎಂದರೆ ಇಷ್ಟವಾಗುತ್ತಿತ್ತು.

ರಮ್ಯಾ ಬೇಡ ಅಂತ ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್

ರಮ್ಯಾ ಬೇಡ ಅಂತ ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್

ಕನ್ನಡ ವಿರೋಧಿ ನಿಮ್ಮಂತಹ ನಾಯಕರ ತಮಿಳುನಟ ಸಿಂಬುವಿನ ಕಾಲ ಅಡಿಗೆ ನುಗ್ಗಬೇಕು. ತಮಿಳರ ಪ್ರತಿಭಟನೆಯನ್ನು ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ರಮ್ಯಾಗೆ, ರಮ್ಯಾ ಬೇಡ ಅಂತ ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಮಾಡಿ ಹೋರಾಟ ಮಾಡುತ್ತಾರಾ ನೋಡಬೇಕು.

English summary
GoBackModi hashtag trending worldwide to protest Centre's failure to form the Cauvery Management board. AICC Social Media head Ramya tweeted 'Loud and Clear' tweet, sparks lot of criticism from twitterite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X