ಮೋದಿ ಚಿತ್ರಕ್ಕೊಂದು ಸೂಕ್ತವಾದ ಶೀರ್ಷಿಕೆ ಕೊಡಿ
ಬೆಂಗಳೂರು, ಮೇ 14 : ಭಾರತ ದೇಶದ ಭವಿಷ್ಯವನ್ನು ಹೇಗೆ ರೂಪಿಸುವುದು ಎಂಬ ಬಗ್ಗೆ ಚಿಂತನೆಯಾ? ಗುಜರಾತ್ ಮುಂದಿನ ಗತಿ ಹೇಗಪ್ಪಾ ಎಂಬ ಆಲೋಚನೆಯಾ? ವಿರೋಧ ಪಕ್ಷದವರನ್ನು ಯಾವ ರೀತಿ ಸಕಾರಾತ್ಮಕವಾಗಿ ಆಡಳಿತ ನಡೆಸಲು ಬಳಸಿಕೊಳ್ಳಬೇಕೆಂಬ ವಿಚಾರವಾ? ಹಿತಶತ್ರುಗಳನ್ನು ಹೇಗೆ ಮಟ್ಟಹಾಕುವುದು ಎಂಬ ದುಗುಡವಾ? ನರೇಂದ್ರ ಮೋದಿ ಅವರ ಈ ಚಿತ್ರ ಏನನ್ನೂ ಸೂಚಿಸುತ್ತಿರಬಹುದು?
ಈ ಚಿತ್ರಕ್ಕೊಂಡು ಸೂಕ್ತವಾದ ಶೀರ್ಷಿಕೆ ಕೊಡ್ತೀರಾ ಪ್ಲೀಸ್ ಎಂದು ಟ್ವಿಟ್ಟಿಗರನ್ನು, ಫೇಸ್ ಬುಕ್ಕಿಗರನ್ನು Narendra Modi For PM (@NaMo4PM) ಟ್ವಿಟ್ಟರ್ ಖಾತೆ ಕೇಳಿಕೊಂಡಿದೆ. ಈ ಚಿತ್ರಕ್ಕೆ ಇದೇ ಸರಿಯಾದ ಶೀರ್ಷಿಕೆ ಎಂದು ಹಲವಾರು ನೆಟ್ಟಿಗರು ತಮಗನಿಸಿದ ಕ್ಯಾಪ್ಶನ್ ನೀಡುತ್ತಿದ್ದಾರೆ.
ಕಿಂಗ್ ಆಫ್ ಹೋಪ್ಸ್, ಕಿಂಗ್ ಆಫ್ ಕಿಂಗ್ಸ್, ಸೈಲೆಂಟ್ ಬಟ್ ಡೆಡ್ಲಿ, ಸಿಂಗಂ, ಗುಜರಾತ್ ಕಾ ಮಹಾ ಫೇಕು, ದಿ ವಿಷನರಿ, ಭಾರತದ ಭವಿಷ್ಯದತ್ತ ದೃಷ್ಟಿ ನೆಟ್ಟಿದ್ದಾರೆ, ಶ್ರೀ ಹಿಂದೂಸ್ತಾನ್, ಆಶಾದಾಯಕ ಮುಖ ನಮೋನಮಃ, ಸಖತ್ ಅವಕಾಶಕ್ಕಾಗಿ ಕಾಯುತ್ತಿರುವ ಹುಲಿ.... ಹೀಗೆ ಸಾಗುತ್ತದೆ ಶೀರ್ಷಿಕೆಗಳ ಮೆರವಣಿಗೆ. ನಿಮದೂ ಇದ್ದರೆ ಸೇರಿಸಿ.

ನರೇಂದ್ರ ಮೋದಿ ಅವರನ್ನು ಯಾವ ರೀತಿ ನೋಡಬೇಕೆಂಬುದು ಅವರವರಿಗೆ ಬಿಟ್ಟ ವಿಚಾರ. ಹೊಗಳುವ ಅಥವಾ ತೆಗಳುವ ಹಕ್ಕು ಭಾರತದ ಎಲ್ಲ ನಾಗರಿಕರಿಗೂ ಇದೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲ ನಾಗರಿಕರಿಗೂ ಸಮಾನವಾಗಿ ನೀಡಲಾಗಿದೆ. ಆದರೆ, ಮಿತಿಮೀರದಿದ್ದರೆ ಉತ್ತಮ. [ಮೋದಿ ಪ್ರಧಾನಿಯಾದ ದಿನ ಉಚಿತ ಮೆಂತೆ ಪಕೋಡ]
ಇದೀಗತಾನೆ ಮುಗಿದಿರುವ ಮಹಾಚುನಾವಣೆಯ ಮತಎಣಿಕೆಗೆ ಕೇವಲ ಎರಡು ದಿನ ಮಾತ್ರ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಮುಂದಾಳತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಹುಮತ ಗಳಿಸುವುದು ಖಚಿತ. ಹಾಗೊಂದ್ವೇಳೆ ಆದರೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿಯುವುದು ಕೂಡ ಖಚಿತ.
Suitable Caption for this Photo http://t.co/illyDdVvLF
— Narendra Modi For PM (@NaMo4PM) May 14, 2014 ಹಾಗಾಗಿ, ಸದ್ಯ ದೇಶದ ಕಣ್ಣು ಮಾತ್ರವಲ್ಲ ಇಡೀ ವಿಶ್ವದ ಕಣ್ಣು ಸಹಜವಾಗಿ ನರೇಂದ್ರ ಮೋದಿ ಅವರ ಮೇಲೆ ನೆಟ್ಟಿದೆ. ಅವರು ನಿಂತರೂ ಸೊಗಸು, ಕುಂತರೂ ಸೊಗಸು, ಸಿಡಿದೆದ್ದರೂ ಸೊಗಸು, ಪೇಟ ತೊಟ್ಟರೂ ಸೊಗಸು, ತುರಾಯಿ ತೊಟ್ಟರೂ ಸೊಗಸು. ಹೀಗಿದ್ದರೂ, ನರೇಂದ್ರ ಮೋದಿ ಅವರ ಮನದಾಳದಲ್ಲಿ ದುಗುಡವೇನಾದರೂ ಮನೆಮಾಡಿದೆಯಾ? [ಮೋದಿ ಜೊತೆ ಅರ್ನಬ್ ಸಂದರ್ಶನ]












Click it and Unblock the Notifications