ಪಿಸ್ತೂಲು ತೋರಿಸಿ ತಾಯಿ, ಸೋದರನ ಎದುರೇ ಬಾಲಕಿ ಮೇಲೆ ಅತ್ಯಾಚಾರ
ಭೋಪಾಲ್, ಸೆಪ್ಟೆಂಬರ್ 4: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಪಿಸ್ತೂಲು ತೋರಿಸಿದ ದುಷ್ಕರ್ಮಿಗಳು ಬೆದರಿಸಿದ್ದಾರೆ. ಬಾಲಕಿಯ ಮನೆಯಲ್ಲಿ ಆಕೆಯ ತಾಯಿ ಹಾಗೂ ಹದಿನಾಲ್ಕು ವರ್ಷದ ಸೋದರನ ಎದುರೇ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. "ಬಾಲಕಿಯು ತನ್ನ ಸೋದರ ಹಾಗೂ ತಾಯಿಯೊಂದಿಗೆ ಮನೆಯಲ್ಲಿದ್ದಳು. ಆಗ ಮನೆಗೆ ನುಗ್ಗಿದ ಮೂವರ ಪೈಕಿ ಇಬ್ಬರು ಬಾಲಕಿಯ ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ಒಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ".

ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿದವನು ಜನ್ವರ್ ಸಿಂಗ್ ಕುಶ್ವಾ. ಆತನಿಗೆ ಸಹಾಯ ಮಾಡಿದವರು ರಾಜು ಕುಶ್ವಾ ಹಾಗೂ ರಾಮ್ ನಿವಾಸ್ ಕುಶ್ವಾ. ಮೂವರನ್ನೂ ಬಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣ ಎಂದು ಆರೋಪ ಇದ್ದು, ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.












Click it and Unblock the Notifications