Ghaziabad: ವೇದಿಕೆ ಮೇಲೆ 'ಜೈ ಶ್ರೀ ರಾಮ್' ಎಂದ ವಿದ್ಯಾರ್ಥಿಗೆ ಗದರಿದ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಒತ್ತಾಯ: ವಿಡಿಯೋ

'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ವೇದಿಕೆಯಿಂದ ಹೊರಬರಲು ತಿಳಿಸಿದ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಘಟನೆ ಗಾಜಿಯಾಬಾದ್ ಎಬಿಇಎಸ್ ಕಾಲೇಜ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಾಜಿಯಾಬಾದ್‌ನ ಖಾಸಗಿ ಕಾಲೇಜಿನ ಈ ವಿಡಿಯೋದಲ್ಲಿ ವಿದ್ಯಾರ್ಥಿಯು ಪ್ರದರ್ಶನ ನೀಡಲು ಕಾರ್ಯಕ್ರಮದ ವೇದಿಕೆಗೆ ತೆರಳುತ್ತಾನೆ. ವೇದಿಕೆ ಮುಂಭಾಗದಲ್ಲಿ ಸಭಿಕರೆಲ್ಲರು ಕುಳಿತಿರುತ್ತಾರೆ. ಈ ವೇಳೆ ವಿದ್ಯಾರ್ಥಿ 'ಜೈ ಶ್ರೀರಾಮ್' ಎಂದು ಕೂಗಿದ್ದಾನೆ. ಇತರ ಕಾಲೇಜು ವಿದ್ಯಾರ್ಥಿಗಳು ಕೂಡ 'ಜೈ ಶ್ರೀರಾಮ್' ಎಂದು ಹೇಳುತ್ತಾರೆ.

Ghaziabad: Student asked to leave stage over Jai Shree Ram chant: Viral Video

ತಕ್ಷಣ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಕಾಲೇಜು ಶಿಕ್ಷಕಿಯೊಬ್ಬರು ಆತನನ್ನು ತಡೆದು ವೇದಿಕೆಯಿಂದ ಹೊರಹೋಗುವಂತೆ ಹೇಳುತ್ತಾರೆ. ಇದೊಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ಇದಕ್ಕೆಲ್ಲ ಅವಕಾಶವಿಲ್ಲ ಎಂದು ಶಿಕ್ಷಕರು ಗದರಿಸುತ್ತಾರೆ. ಹೀಗೆ ನಡೆದುಕೊಂಡಿರುವುದನ್ನು ಖಂಡಿಸಿ ಮಹಿಳಾ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗುತ್ತಿದೆ.

ABES ಇಂಜಿನಿಯರಿಂಗ್ ಕಾಲೇಜಿನ ವಿಡಿಯೋ

ಈ ವೈರಲ್ ವೀಡಿಯೊ ಗಾಜಿಯಾಬಾದ್‌ನ ಎಬಿಇಎಸ್ ಎಂಜಿನಿಯರಿಂಗ್ ಕಾಲೇಜಿನದ್ದು ಎಂದು ಹೇಳಲಾಗಿದೆ. ಇದರಲ್ಲಿ ವಿದ್ಯಾರ್ಥಿ ಕಾಲೇಜಿನ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದರು. ಜನರು ಟ್ವಿಟ್ಟರ್‌ನಲ್ಲಿ ಗಾಜಿಯಾಬಾದ್ ಪೊಲೀಸ್ ಕಮಿಷನರೇಟ್ ಅನ್ನು ಟ್ಯಾಗ್ ಮಾಡಿದ್ದಾರೆ ಮತ್ತು "ಜೈ ಶ್ರೀ ರಾಮ್" ಎಂದು ಹೇಳುವ ಮೂಲಕ ಸಭಿಕರನ್ನು ಸ್ವಾಗತಿಸಿದ ನಂತರ ಶಿಕ್ಷಕಿ ಮಮತಾ ಗೌತಮ್ ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದು ಖಂಡನೀಯ ಎಂದು ಹೇಳಿದ್ದಾರೆ.

ಗಾಜಿಯಾಬಾದ್ ಪೊಲೀಸ್ ಕಮಿಷನರೇಟ್‌ನ ಟ್ವಿಟರ್ ಹ್ಯಾಂಡಲ್‌ನಿಂದಲೂ ಅದಕ್ಕೆ ಪ್ರತ್ಯುತ್ತರ ನೀಡಲಾಗಿದೆ. ಈ ಪ್ರಕರಣದಲ್ಲಿ ಕ್ರಾಸಿಂಗ್ ಪೊಲೀಸ್ ಠಾಣಾ ಪ್ರಭಾರಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತ

ವಿಡಿಯೋ ವೈರಲ್ ಆದ ನಂತರ ಹಿಂದೂ ಸಂಘಟನೆಗಳು ಕೂಡ ಅಸಮಾಧಾನ ವ್ಯಕ್ತಪಡಿಸಿವೆ. ಈ ಬಗ್ಗೆ ಎಬಿಇಎಸ್ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವಂತೆ ಹಿಂದೂ ರಕ್ಷಣಾ ದಳ ಆಗ್ರಹಿಸಿದೆ. ಹಿಂದೂ ರಕ್ಷಾ ದಳದ ಅಧ್ಯಕ್ಷೆ ಪಿಂಕಿ ಚೌಧರಿ ಅವರು ಈ ಘಟನೆಯ ಬಗ್ಗೆ ಅನೇಕ ಕಾಲೇಜು ವಿದ್ಯಾರ್ಥಿಗಳಿಂದ ಕರೆಗಳನ್ನು ಸ್ವೀಕರಿಸುತ್ತಿರುವುದಾಗಿ ಹೇಳಿದ್ದಾರೆ. ದೇಶದ ಯುವಕರು ಶ್ರೀರಾಮನನ್ನು ಆದರ್ಶವಾಗಿ ಪರಿಗಣಿಸುತ್ತಾರೆ. ಅವರ ಆದರ್ಶಗಳನ್ನು ಅನುಸರಿಸಲು ಬಯಸುತ್ತಾರೆ. ಹೀಗಿರುವಾಗ ಕಾಲೇಜು ಅಧ್ಯಾಪಕರು ಮಾಡಿದ ಕೆಲಸ ತಪ್ಪಿದೆ. ಈ ವಿಚಾರವಾಗಿ ಹಿಂದೂ ರಕ್ಷಣಾ ದಳ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಲಿದೆ. ಜೊತೆಗೆ ಹಿಂದೂ ಸಂಘಟನೆಗಳು ಇಬ್ಬರು ಶಿಕ್ಷಕಿಯರಾದ ಶ್ವೇತಾ ಶರ್ಮಾ ಮತ್ತು ಮಮತಾ ಗೌತಮ್ ಅವರನ್ನು ಕಾಲೇಜು ಆಡಳಿತ ಮಂಡಳಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿವೆ.

ಕಾಲೇಜು ಆಡಳಿತ ಮಂಡಳಿಯು ತನಿಖಾ ಸಮಿತಿ

ಸಿಕ್ಕಿರುವ ಮಾಹಿತಿ ಪ್ರಕಾರ ವಿಡಿಯೋದಲ್ಲಿ ಕಾಣುತ್ತಿರುವ ವಿದ್ಯಾರ್ಥಿಯ ಹೆಸರು ಆರುಷ್. ಈತ ಕಾಲೇಜಿನಲ್ಲಿ ಇಸಿಇ ಕೋರ್ಸ್ ವಿದ್ಯಾರ್ಥಿ. ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಗಾಜಿಯಾಬಾದ್ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆಡಳಿತ ಮಂಡಳಿ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಎಬಿಇಎಸ್ ಕಾಲೇಜಿನ ನಿರ್ದೇಶಕರು ತಿಳಿಸಿದ್ದಾರೆ. ಸಮಿತಿಯ ವರದಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವುದಿಲ್ಲ ಎಂದು ಕಾಲೇಜಿನ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಲೋಣಿ ಶಾಸಕ ಪ್ರತಿಕ್ರಿಯೆ

ಲೋಣಿ ಶಾಸಕ ನಂದ್ ಕಿಶೋರ್ ಗುರ್ಜರ್ ಟ್ವೀಟ್ ಮಾಡಿ, "ಶ್ರೀರಾಮನ ಹೆಸರಿನಲ್ಲಿ ಶುಭಾಶಯ ಕೋರಲು ABES ಕಾಲೇಜು ಪ್ರಾಧ್ಯಾಪಕರ ಆಕ್ಷೇಪಣೆ ನಾಚಿಕೆಗೇಡಿನ ಮತ್ತು ಖಂಡನೀಯವಾಗಿದೆ. ಇವರ ವಿರುದ್ಧ ಗಾಜಿಯಾಬಾದ್‌ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳನ್ನು ನಿಂದಿಸುವುದು ಸಹಿಸುವುದಿಲ್ಲ'' ಎಂದು ಬರೆದಿದ್ದಾರೆ.

ಪ್ರಾಧ್ಯಾಪಕರ ಅಮಾನತಿಗೆ ಆಗ್ರಹ

ಮತ್ತೊಂದು ಟ್ವೀಟ್‌ನಲ್ಲಿ, ''ABES ಕಾಲೇಜು ಪ್ರಾಧ್ಯಾಪಕರು ರಾಮನನ್ನು ಅವಮಾನಿಸಿದ್ದಾರೆ. ಕಾಲೇಜು ಆಡಳಿತ ಪ್ರಾಧ್ಯಾಪಕರನ್ನು ಅಮಾನತುಗೊಳಿಸಿ ಪ್ರಕರಣ ದಾಖಲಿಸದಿದ್ದರೆ, ಕಾಲೇಜು ನಡೆಸಲು ಬಿಡುವುದಿಲ್ಲ'' ಎಂದು ಬರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+