ಆಮಿಷದ ಮತಾಂತರ ತಡೆಗೆ ನಿಷೇಧ ಕಾಯ್ದೆ ಅಗತ್ಯ

ಆಗ್ರಾದಲ್ಲಿ ಘರ್ ವಾಪಸಿ(ಮರಳಿ ಮನೆಗೆ) ಆಗಿರುವ 57 ಮುಸ್ಲಿಮ್ ಕುಟುಂಬಗಳ ಬಡತನವನ್ನು ಬಳಸಿಕೊಂಡು ಅವರಿಗೆ ಆಮಿಷವೊಡ್ಡಿ ಮರುಮತಾಂತರಿಸಲಾಗಿದೆ ಎನ್ನುವುದು ಸೆಕ್ಯುಲರ್ಗಳ ಅಳಲಾಗಿದೆ.ಹಾಗಿದ್ದರೆ ಇಷ್ಟು ದಿನ ಧಾರ್ಮಿಕ ಸ್ವಾತಂತ್ರ್ಯದ ಸೋಗಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಆಮಿಷವೊಡ್ಡಿ ಮತಾಂತರ ಮಾಡಿಲ್ಲವೇ? ಮಾಡುತ್ತಿಲ್ಲವೇ?

ಮತಾಂತರಕ್ಕೆಂದೇ ಯುರೋಪು,ಅಮೇರಿಕಾಗಳಿಂದ ಕ್ರಿಶ್ಚಿಯನ್ ಮಿಷನರಿಗಳಿಗೆ ಮತ್ತು ಅರಬ್ ದೇಶಗಳಿಂದ ಮುಸ್ಲಿಮರಿಗೆ ಹರಿಯುವ ಹಣದ ಹೊಳೆಯ ಬಗ್ಗೆ, ಮಿಷನರಿ ನೆಟ್ವರ್ಕ್ ಗಳು ಕೆಲಸ ಮಾಡುವ ವಿಧಾನದ ಬಗ್ಗೆ ಬರೆಯುತ್ತ ಕುಳಿತರೇ ಒಂದು ಪುಸ್ತಕವೇ ಆದೀತು! ಕ್ರಿಶ್ಚಿಯನ್ನರು, ಮುಸ್ಲಿಮರು ಮಾಡುವ ಮತಾಂತರ ತಪ್ಪಲ್ಲ ಎನ್ನುವುದಾದರೆ ಧರ್ಮಜಾಗರಣ ಮಂಚದವರು ಮಾಡಿರುವ ಮರುಮತಾಂತರವೇಕೆ ತಪ್ಪಾಗುತ್ತದೆ?

1935ರಲ್ಲಿ ಕ್ರಿಶ್ಚಿಯನ್ ಮಿಷನರಿಯೊಬ್ಬಳಿಗೆ ನೀಡಿದ ಸಂದರ್ಶನದಲ್ಲಿ "ನನ್ನ ಕೈಯಲ್ಲಿ ಅಧಿಕಾರವಿದ್ದಿದ್ದರೆ ಮತಾಂತರವನ್ನು ನಿಷೇಧಿಸುತ್ತಿದ್ದೆ.ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ" ಎಂದಿದ್ದರು ಗಾಂಧೀಜಿ. [ಭಾಗ್ವತ್ ಹೇಳಿಕೆಗೆ ವಿಎಚ್ ಪಿ ಬೆಂಬಲ]

ಭಾರತೀಯ ಸಂಪ್ರದಾಯಗಳ ಪಾಲಿಗೆ ಇಸ್ಲಾಂ,ಕ್ರಿಶ್ಚಿಯಾನಿಟಿ ಇತ್ಯಾದಿಗಳು ದೇವರೆಡೆಗೆ ಸಾಗುವ ಭಿನ್ನ ಹಾದಿಗಳು ಅಷ್ಟೇ.ತಮ್ಮ ಪಾಡಿಗೆ ತಾವಿದ್ದರೆ ಸಂಪ್ರದಾಯವಾದಿಗಳಿಗೇನು ಸಮಸ್ಯೆಯಾಗುವುದಿಲ್ಲ.ಆದರೆ ರಿಲಿಜನ್ನುಗಳು ತಮ್ಮ ರಿಲಿಜನ್ನಿನ ಪ್ರಚಾರಕ್ಕೆ,ಮತಾಂತರಕ್ಕೆ ಮೂಗು ತೂರಿಸಿದರೆ ಗಾಂಧೀಜಿ ಹೇಳಿದಂತೆ ಸಮಾಜದಲ್ಲಿ ಈ ರೀತಿಯ ಅಶಾಂತಿಯ ಅಲೆ ಎದ್ದೇ ಏಳುತ್ತದೆ.

Ghar Wapsi be accepted, Anti Conversion Law Needed

ಮಿಷನರಿಗಳ ಕಥೆ : "ಮಿಷನರಿಗಳು ಆಫ್ರೀಕಾ ದೇಶಕ್ಕೆ ಬಂದಾಗ ಅವರ ಕೈಯಲ್ಲಿ 'ಬೈಬಲ್' ಇತ್ತು ನಮ್ಮ ಕೈಯಲ್ಲಿ 'ಭೂಮಿ' ಯಿತ್ತು.ಅವರು ಜೊತೆಯಲ್ಲಿ ಪ್ರಾರ್ಥನೆ ಮಾಡೋಣವೆಂದರು.ನಾವು ಪ್ರಾರ್ಥನೆಗೆಂದು ಕಣ್ಣುಮುಚ್ಚಿ ತೆರೆದಾಗ,ಅವರ ಕೈಯಲ್ಲಿ ನಮ್ಮ 'ಭೂಮಿ'ಯಿತ್ತು, ನಮ್ಮ ಕೈಯಲ್ಲಿ ಅವರ "ಬೈಬಲ್' ಇತ್ತು" ಎಂದಿದ್ದರು ಆಫ್ರೀಕಾದ ಡೆಸ್ಮಂಡ್ ಟುಟು.ಮತಾಂತರವೆಂದರೆ ಅದು ಕೇವಲ ನಮ್ಮ ದೇವರುಗಳ ಬದಲಾವಣೆಯಲ್ಲ ಅದರಾಚೆಗೆ ನಮ್ಮ ಸಂಸ್ಕೃತಿ,ನಮ್ಮ ಬದುಕು,ನಮ್ಮ ಪರಿಸರವನ್ನು ಅದು ಬದಲಾಯಿಸುತ್ತದೆ.

ಮತಾಂತರ ನಿಷೇಧ ಕಾಯ್ದೆ ಅಗತ್ಯ: ಭಾರತ ಸಹಸ್ರಾರು ವರ್ಷಗಳಿಂದ ಈ ಸೆಮೆಟಿಕ್ ರಿಲಿಜನ್ನುಗಳ ಮತಾಂತರ ದಾಳಿಗೆ ಗುರಿಯಾಗಿದೆ ಮತ್ತು ಗುರಿಯಾಗುತ್ತಲೇ ಇದೆ.ಈ ದಾಳಿ ನಿಲ್ಲಬೇಕಾದರೇ,ಪ್ರಬಲವಾದ "ಮತಾಂತರ ನಿಷೇಧ ಕಾಯ್ದೆ" ಅತ್ಯಗತ್ಯವಾಗಿದೆ.ಆಗಷ್ಟೇ ಈ ಮತಾಂತರ-ಮರುಮತಾಂತರ ಜಿದ್ದಾಜಿದ್ದು ನಿಲ್ಲಬಹುದು ಇಲ್ಲದಿದ್ದರೆ ಸಾಧ್ಯವಿಲ್ಲ.ಏಕೆಂದರೆ "ಮತಾಂತರ"ವೆನ್ನುವುದು ಸೆಮೆಟಿಕ್ ರಿಲಿಜನ್ನುಗಳ ಪಾಲಿಗೆ ಪುಣ್ಯಕಾರ್ಯ.

ಅವರ ಪ್ರಕಾರ, ಅವರ ರಿಲಿಜನ್ನುಗಳ ಮಾತ್ರವೇ ಮಾನವಕುಲಕ್ಕೆ ಸತ್ಯದೇವನ ಇಚ್ಛೆಯನ್ನು ತಿಳಿಸುವ ನಿಜವಾದ ವಾಣಿಯಾಗಿದೆ ಹಾಗೂ ಅವರ ಡಾಕ್ಟ್ರಿನ್ನುಗಳಲ್ಲಿ ಸರಿಯಾದ ನಂಬಿಕೆಯನ್ನಿಟ್ಟು ಈ ದೈವೀ ಇಚ್ಚೆಗೆ ಸಂಪೂರ್ಣ ಶರಣಾಗತರಾಗುವ ಮೂಲಕ ಮಾತ್ರವೇ ಮಾನವ ಜೀವಿಗಳು ಮೋಕ್ಷವನ್ನು ಪಡೆಯಬಹುದು. [ಮಹಾ ಮತಾಂತರ ಕಾರ್ಯಕ್ರಮ ರದ್ದು]

"ತನ್ನದು ಮಾತ್ರ ಸತ್ಯ,ಉಳಿದದ್ದೆಲ್ಲಾ ಸುಳ್ಳು" ಎನ್ನುವುದು ಎಲ್ಲಾ ಸೆಮೆಟಿಕ್ ರಿಲಿಜನ್ನುಗಳ ಮೂಲಲಕ್ಷಣ.ಹಾಗಾಗಿಯೇ ಅವರು "ಸುಳ್ಳು" ರಿಲಿಜನ್ನಿನಿಂದ ಹಾದಿಯಿಂದ "ಸತ್ಯ"ವಾದ ರಿಲಿಜನ್ನಿಗೆ ಜನರನ್ನು ಕರೆತರುವ ಪುಣ್ಯಕಾರ್ಯದ ಭ್ರಮೆಯಲ್ಲಿ "ಮತಾಂತರ"ವನ್ನು ಮಾಡುತಿದ್ದಾರೆ ಮತ್ತು ಮಾಡುತ್ತಲೇ ಇರುತ್ತಾರೆ.

ಕಟು ವಾಸ್ತವವೇನೆಂದರೆ,ರಿಲಿಜನ್ನುಗಳಿಗೆ ಮತಾಂತರವು ಪುಣ್ಯಕಾರ್ಯವೆಂಬ "ಭ್ರಮೆ" ಕಳಚಲಾರದು.ಹಾಗಾಗಿ ಅವರ ಭ್ರಮೆಯಿಂದ ಭಾರತವನ್ನು ರಕ್ಷಿಸಲು ಪ್ರಬಲ "ಮತಾಂತರ ನಿಷೇಧ ಕಾಯ್ದೆ" ಜಾರಿಗೆ ಬರಲೇಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯವೂ ಈಡೇರಿದಂತಾಗುತ್ತದೆ.ಅದು ಬಾಪೂಜಿಗೆ ನಾವು ಕೊಡುವ ನಿಜವಾದ ಗೌರವವೂ ಹೌದು.ಈ ಬಗ್ಗೆ ಚರ್ಚೆಯಾಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+