• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತಾಂತರ ಸರಿಯಾದರೇ, ಮರುಮತಾಂತರವೇಕೆ ತಪ್ಪು?

By ರಾಕೇಶ್ ಶೆಟ್ಟಿ
|

"ಧಾರ್ಮಿಕ ಸ್ವಾತಂತ್ರ್ಯ"ದ ನೆಪದಲ್ಲಿ ಇಷ್ಟು ದಿನ ಭಾರತೀಯ ಸಂಪ್ರದಾಯಗಳ ಮೇಲೆ "ಮತಾಂತರ"ದ ಹೆಸರಿನ ಭ್ರಮೆಯ ಹುಚ್ಚುಕುದುರೆಯೇರಿ ಸವಾರಿ ಮಾಡುತಿದ್ದ ಸೆಮೆಟಿಕ್ ರಿಲಿಜನ್ನುಗಳಿಗೆ ಹೆಗಲು ಕೊಡುತಿದ್ದ ಸೆಕ್ಯುಲರ್ ಪಕ್ಷಗಳು ಈಗ ಪಜೀತಿಗೆ ಬಿದ್ದಿವೆ.ಅಷ್ಟಕ್ಕೂ "ಮರುಮತಾಂತರ" ತಪ್ಪು ಎನ್ನುವುದಾದರೇ "ಮತಾಂತರ" ಸರಿ ಎನ್ನಲಿಕ್ಕೆ ಇವರಿಗೆ ಬಾಯಾದರೂ ಹೇಗೆ ಬರಬೇಕು ಹೇಳಿ? ಈ ಲೇಖನ ನಿಲುಮೆ.ನೆಟ್ ನಲ್ಲಿ ಪ್ರಕಟಿತವಾಗಿದ್ದು ಇಲ್ಲಿ ಪುನರ್ ಪ್ರಕಟಿಸಲಾಗಿದೆ. ಎಲ್ಲಾ ಹಕ್ಕುಗಳು ಲೇಖಕರಿಗೆ ಸೇರಿದ್ದಾಗಿದೆ.

ಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ."15 ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು" ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು "ಅನುಭವಿಸಿ ಬದಲಾಯಿಸುವ ಶಕ್ತಿ - 15 ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು" ಎಂದು ಕಾಣಿಸಲಾರಂಭಿಸಿತು.

ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!

ಆ ಪುಸ್ತಕದಲ್ಲಿ ಏನಿದೆ?: ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್, ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,"ಬೈಬಲ್ ಮತ್ತು ಜೀಸಸ್" ಮಾತ್ರ ಸತ್ಯ ಮತ್ತು ಅವು ಮಾತ್ರವೇ "ಪಾಪಿ"ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!. [ಮತಾಂತರ ಏಕೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ]

ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.

ಆದರೆ, ಉತ್ತರ ಪ್ರದೇಶದ ಆಗ್ರಾದಲ್ಲಿ 57 ಮುಸ್ಲಿಂ ಕುಟುಂಬಗಳು "ಧರ್ಮ ಜಾಗರಣಾ ಮಂಚ" ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮರಳಿದ ಸುದ್ದಿ ಮಾತ್ರ ಈಗ ಸೆಕ್ಯುಲರ್ ಪಕ್ಷಗಳ ನಿದ್ದೆಕೆಡಿಸಿದೆ. ಈ ಬಗ್ಗೆ ಸದನದಲ್ಲಿ ಗದ್ದಲವೂ ಆಗಿದೆ. ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು "ಮತಾಂತರ ನಿಷೇಧ ಕಾಯ್ದೆ"ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ.

"ಮತಾಂತರ"ದ ಹೆಸರಿನ ಹುಚ್ಚುಕುದುರೆ : "ಧಾರ್ಮಿಕ ಸ್ವಾತಂತ್ರ್ಯ"ದ ನೆಪದಲ್ಲಿ ಇಷ್ಟು ದಿನ ಭಾರತೀಯ ಸಂಪ್ರದಾಯಗಳ ಮೇಲೆ "ಮತಾಂತರ"ದ ಹೆಸರಿನ ಭ್ರಮೆಯ ಹುಚ್ಚುಕುದುರೆಯೇರಿ ಸವಾರಿ ಮಾಡುತಿದ್ದ ಸೆಮೆಟಿಕ್ ರಿಲಿಜನ್ನುಗಳಿಗೆ ಹೆಗಲು ಕೊಡುತಿದ್ದ ಸೆಕ್ಯುಲರ್ ಪಕ್ಷಗಳು ಈಗ ಫಜೀತಿಗೆ ಬಿದ್ದಿವೆ.ಅಷ್ಟಕ್ಕೂ "ಮರುಮತಾಂತರ" ತಪ್ಪು ಎನ್ನುವುದಾದರೇ "ಮತಾಂತರ" ಸರಿ ಎನ್ನಲಿಕ್ಕೆ ಇವರಿಗೆ ಬಾಯಾದರೂ ಹೇಗೆ ಬರಬೇಕು ಹೇಳಿ?

ಆದರೆ,ಈ ಕಾಯ್ದೆಯ ಕುರಿತು ಖಂಡಿತವಾಗಿಯೂ ಸೆಕ್ಯುಲರ್ ಪಕ್ಷಗಳು "ಇದು ಸಂವಿಧಾನ ವಿರೋಧಿ" ಕ್ರಮ ಎಂದು ಗಿಳಿಪಾಠ ಒಪ್ಪಿಸಲಿವೆ ಕಾದು ನೋಡಿ. "ಧಾರ್ಮಿಕ ಸ್ವಾತಂತ್ರ್ಯ"ದ ನೆಪದಲ್ಲಿ ಒಂದು ರಿಲಿಜನ್ ಅನ್ನು, ಯಾವುದೇ ರಿಲಿಜನ್ನಿನ ಹಂಗಿಲ್ಲದೇ ಬದುಕುತ್ತಿರುವ ಭಾರತೀಯರ ಮೇಲೆ ಹೇರುವುದು "ವ್ಯಕ್ತಿ ಸ್ವಾತಂತ್ರ್ಯ"ದ ಮೇಲಿನ ದಬ್ಬಾಳಿಕೆಯಲ್ಲವೇ? [ಮರು ಮತಾಂತರ ಹುಟ್ಟಿದ್ದೇ ಉಡುಪಿಯಲ್ಲಿ]

ಹಾಗಿದ್ದರೆ,ಈ ಸಮಸ್ಯೆಯ ಮೂಲ ಕಾರಣವೇನು? ನಾವು ಅಳವಡಿಸಿಕೊಂಡಿರುವ ಪಾಶ್ಚಾತ್ಯ ಲಿಬರಲ್ ಸಂವಿಧಾನವೇ ಈ ಸಮಸ್ಯೆಯ ಮೂಲ ಕಾರಣ.ತಮ್ಮ ರಿಲಿಜನ್ನು ಮಾತ್ರವೇ ಏಕಮೇವ ಸತ್ಯವೆಂದು ಪ್ರತಿಪಾದಿಸುತ್ತ ಪರಸ್ಪರ ಸ್ಪರ್ಧಿಗಳಾಗುವ ಸೆಮೆಟಿಕ್ ರಿಲಿಜನ್ನುಗಳೇ ಇರುವ ದೇಶದಲ್ಲಿ ಪ್ರಭುತ್ವವು ರಿಲಿಜನ್ನಿನ ವಿಷಯದಲ್ಲಿ ತಟಸ್ಥ ಧೋರಣೆ ಅನುಸರಿಸಬೇಕು ಎನ್ನುವ ಧೋರಣೆಯ ಈ ಪಾಶ್ಚಾತ್ಯ ಸಂವಿಧಾನದಿಂದ ಸಮಸ್ಯೆಯಾಗುವುದಿಲ್ಲ.

ಆದರೆ ಭಾರತದಂತಹ "ರಿಲಿಜನ್ ಇಲ್ಲ"ದೆಯೇ ಎಲ್ಲವನ್ನೂ ಗೌರವಿಸುವ ಮತ್ತು ತಮ್ಮ ಪಾಡಿಗೆ ತಾವಿರಲು ಬಯಸುವ ಬಹು ಸಂಪ್ರದಾಯಗಳ ಜನರಿರುವ ದೇಶದಲ್ಲಿ ಈ ಪಾಶ್ಚಾತ್ಯ ಸಮಾಜ ಆಧಾರಿತ ಲಿಬರಲ್ ಸಂವಿಧಾನ ನಮ್ಮ ಸಮಾಜಕ್ಕೆ ಹೊಂದಿಕೆಯಾಗುವುದಿಲ್ಲ.ಈ ಸತ್ಯವನ್ನು ನಮ್ಮ ಸೆಕ್ಯುಲರ್ ಮಹಾಶಯರು ಅರಿತುಕೊಳ್ಳುತ್ತಾರೆಯೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If Conversion is okay why not Ghar Wapsi be accepted.'Ghar Vapsi' (Home Coming) is not unconstitutional according to supreme court order. Here is an article by Citizen Journalist Rakesh Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more