ಚೀನಾ ಬಗ್ಗುಬಡಿಯಲು ಸಜ್ಜಾಗುತ್ತಿದೆ ಭಾರತೀಯ ಸೇನೆ?
ನವದೆಹಲಿ, ಆ.8: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವ ಸಂದರ್ಭದಲ್ಲೇ ಭಾರತೀಯ ಸೇನಾ ಮುಖ್ಯಸ್ಥರು ಮಹತ್ವದ ಆದೇಶ ಹೊರಡಿಸಿದ್ದಾರೆ. ಮಧ್ಯ ಮತ್ತು ಪೂರ್ವ ವಲಯದ ಕಮಾಂಡರ್‌ಗಳು ಯಾವುದೇ ಸನ್ನಿವೇಶ ಎದುರಿಸಲು ಸಿದ್ಧವಾಗಿರುವಂತೆ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಬಂದಿದೆ.
Recommended Video
ಲಕ್ನೋದಲ್ಲಿರುವ ಭಾರತೀಯ ಭೂಸೇನಾ ಕೇಂದ್ರ ಕಮಾಂಡ್ ಕಚೇರಿಗೆ ಭೇಟಿ ನೀಡಿದ್ದ ಜನರಲ್ ನರವಾಣೆ ಅವರಿಗೆ ಕಮಾಂಡರ್‌ಗಳು ಮಹತ್ವದ ಮಾಹಿತಿ ನೀಡಿದ್ದಾರೆ. 'ಎಲ್‌ಎಸಿ' ಉದ್ದಕ್ಕೂ ಚೀನಾ ಸೈನಿಕರ ಸಂಖ್ಯೆ ಹೆಚ್ಚಿಸಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಭಾರತ-ಚೀನಾ ಗಡಿ ಕೂಡುವ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲೂ ಹೆಚ್ಚಿನ ಸೈನಿಕರನ್ನು ಚೀನಾ ನೇಮಿಸಿದೆ.
ಈ ಮಾಹಿತಿ ಸಿಗುತ್ತಿದ್ದಂತೆ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಕಮಾಂಡರ್‌ಗಳಿಗೆ ಸರ್ವಸನ್ನದ್ಧವಾಗಿ ಇರುವಂತೆ ಮಹತ್ವದ ಸೂಚನೆ ನೀಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಚೀನಾ ಇಲ್ಲೂ ತನ್ನ ಕಪಟ ಬುದ್ಧಿ ತೋರಿಸುವ ಸಾಧ್ಯತೆ ಇದ್ದು, ಚೂರು ಎಚ್ಚರ ತಪ್ಪಿದರೂ ಚೀನಾ ಸೇನೆ ಒಳನುಸುಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಭಾರತ ಕೂಡ ಹೆಚ್ಚಿನ ಸೈನಿಕರನ್ನು ಚೀನಾ ಗಡಿಯಲ್ಲಿ ನಿಯೋಜಿಸಿದೆ.

ಮಾತುಕತೆಗೆ ಬಗ್ಗದ ಕಪಟಿ ’ಡ್ರ್ಯಾಗನ್‘
ಸದ್ಯದ ಪರಿಸ್ಥಿತಿ ಗಮನಿಸಿದರೆ ಚೀನಾ ಸೇನೆ ಯುದ್ಧಕ್ಕೆ ಯೋಜನೆ ರೂಪಿಸಿ ಕಾಯುತ್ತಿರುವಂತೆ ಕಾಣುತ್ತಿದೆ. ಗಡಿಯಲ್ಲಿ 4-5 ಸಶಸ್ತ್ರ ಬ್ರಿಗೇಡ್‌ಗಳನ್ನೂ ನಿರ್ಮಿಸಿದೆ. ಪೂರ್ವ ಲಡಾಖ್‌ನ ‘ಎಲ್‌ಎಸಿ' ಬಳಿ ಭಾರಿ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜನೆ ಮಾಡಿದೆ. ಆದರೆ ಈ ಹಿಂದೆ ಎರಡೂ ಸೇನೆಗಳ ನಡುವೆ ನಡೆದಿದ್ದ ಉನ್ನತಮಟ್ಟದ ಮಾತುಕತೆ ನಂತರ ಚೀನಾ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತದೆ ಎಂದೇ ನಂಬಲಾಗಿತ್ತು. ಆದರೆ ತೊಟ್ಟಿಲು ತೂಗಿ, ಮಗುವನ್ನೂ ಚಿವುಟುವ ಕೆಲಸ ಮಾಡುತ್ತಿದೆ ಕುತಂತ್ರಿ ಡ್ರ್ಯಾಗನ್.

ನಾವು ಯಾರಿಗೂ ಕಮ್ಮಿ ಇಲ್ಲ..!
ಗಡಿಯಲ್ಲಿ ಚೀನಾ ತನ್ನ ಸೇನಾಬಲ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಸೈನಿಕರ ಸಂಖ್ಯೆಯನ್ನು ಹೆಚ್ಚು ಮಾಡಿದ್ದು, ಸುಮಾರು 40 ಸಾವಿರ ಸೈನಿಕರನ್ನು ನಿಯೋಜಿಸಿದೆ. ಅಲ್ಲದೆ ದಿಢೀರ್ ದಾಳಿಗಳನ್ನ ಹಿಮ್ಮೆಟಿಸಲು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಈಗಾಗಲೇ ಹಲವು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್, ಕ್ಷಿಪಣಿ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಚೀನಾ ಗಡಿಯಲ್ಲಿ ಬಿಡಾರ ಹೂಡಿವೆ. ಇದು ಭಾರತೀಯ ಸೇನಾ ಪಡೆಯ ಬಲಪ್ರದರ್ಶನವೂ ಆಗಿದೆ. ಈ ಬಾರಿ ಚೀನಾ ಭಾರತದ ತಂಟೆಗೆ ಬಂದ್ರೆ ಮುಟ್ಟಿ ನೋಡಿಕೊಳ್ಳುವ ಹಾಗೆ ಪೆಟ್ಟು ಕೊಡಲು ಸೇನೆ ಸನ್ನದ್ಧವಾಗಿದೆ.

ಜಾಗತಿಕವಾಗಿ ಚೀನಾ ವಿರುದ್ಧ ಅಸಮಾಧಾನ..!
ಚೀನಾ ಗಡಿ ಬಗ್ಗೆ ಪಿರಿಪಿರಿ ಮಾಡುತ್ತಲೇ ಬಂದಿದೆ ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಹೀಗೆ ಗಡಿ ಕಿರಿಕ್ ತೆಗೆದಿರುವುದು ಭಾರತದ ಜೊತೆ ಮಾತ್ರವಲ್ಲ. ಅಕ್ಕಪಕ್ಕದ ಪ್ರತಿ ರಾಷ್ಟ್ರದ ಜೊತೆಗೂ ಕಪಟಿ ಚೀನಾ ಗಡಿ ಬಗ್ಗೆ ಪಿರಿಪಿರಿ ಮಾಡುತ್ತಲೇ ಬಂದಿದೆ. ಈಗಾಗಲೇ ದಕ್ಷಿಣ ಚೀನಾ ಸಮುದ್ರ, ತೈವಾನ್ ಹಾಗೂ ಹಾಂಕಾಂಗ್ ವಿಚಾರದಲ್ಲಿ ಚೀನಾ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೈರಸ್ ಫ್ಯಾಕ್ಟರಿ ಚೀನಾದ ವಿನಾಶಕ್ಕೆ ಮುನ್ನುಡಿ
ಹೀಗೆ ಚೀನಾ ವಿರುದ್ಧ ಅಸಮಾಧಾನ ಭುಗಿಲೆದ್ದಿರುವಾಗಲೇ ಭಾರತವನ್ನೂ ಕುತಂತ್ರಿ ಚೀನಾ ಎದುರು ಹಾಕಿಕೊಳ್ಳುತ್ತಿದೆ. ಇದು ವೈರಸ್ ಫ್ಯಾಕ್ಟರಿ ಚೀನಾದ ವಿನಾಶಕ್ಕೆ ಮುನ್ನುಡಿ ಬರೆದಂತಾಗುತ್ತಿದೆ. ಭವಿಷ್ಯದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ಚೀನಾ ವಿರೋಧಿಗಳು ಒಗ್ಗೂಡಿ, ಚೀನಾವನ್ನು ಬಗ್ಗುಬಡಿಯಲು ರಣತಂತ್ರ ಹೆಣೆಯುತ್ತಿವೆ. ಆದರೆ ಚೀನಾ ಈಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದೇ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications