Jharkhand: ಜಾರ್ಖಂಡ್‌ನ ಪಲಮುನಲ್ಲಿ ಎನ್‌ಕೌಂಟರ್: ಆರೋಪಿ ಅಮನ್ ಸಾಹು ಸಾವು!
150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಗ್ಯಾಂಗ್‌ಸ್ಟರ್ ಅಮನ್ ಸಾಹು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಘಟನೆ ಜಾರ್ಖಂಡ್‌ನ ಪಲಾಮುದಲ್ಲಿ ನಡೆದಿದೆ. ಮಂಗಳವಾರ ಬೆಳಿಗ್ಗೆ ಈ ಆರೋಪಿಯನ್ನು ಛತ್ತೀಸ್‌ಗಢದ ರಾಯ್‌ಪುರ ಜೈಲಿನಿಂದ ರಾಂಚಿಗೆ ಕರೆತರುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎನ್‌ಕೌಂಟರ್‌ನಲ್ಲಿ ಆರೋಪಿ ಮೃತಪಟ್ಟಿದ್ದಾನೆ.
ಜಾರ್ಖಂಡ್‌ನಲ್ಲಿ ಹೆಚ್ಚಿನ ಅಪರಾಧಗಳನ್ನು ಜೈಲುಗಳೊಳಗೆ ಇರುವ ಅಪರಾಧಿಗಳು ಕ್ರಿಮಿನಲ್ ಗ್ಯಾಂಗ್‌ಗಳ ಸಹಾಯದಿಂದ ಮಾಡಿಸುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಗುಪ್ತಾ ಹೇಳಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಗ್ಯಾಂಗ್‌ಸ್ಟರ್ ಅಮನ್ ಸಾಹು 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವುದು ಮಾತ್ರವಲ್ಲದೆ ಕೆಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದನು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಗುಪ್ತಾ ಹೇಳಿಕೆಯ ಭಾಗವಾಗಿ ಗ್ಯಾಂಗ್‌ಸ್ಟರ್ ಅಮನ್ ಸಾಹು ಜೈಲಿನ ಮೇಲೆ ದಾಳಿ ಮಾಡಲಾಯಿತು. ಈ ವೇಳೆ ಸಾಹುವನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ರಾಂಚಿಗೆ ಕರೆತರುತ್ತಿದ್ದರು. ಈ ಸಮಯದಲ್ಲಿ ಎನ್‌ಕೌಂಟರ್ ನಡೆದಿದೆ.
ಎನ್‌ಕೌಂಟರ್‌ನಲ್ಲಿ ಅಮನ್ ಸಾಹು ಸಾವು
ಅಧಿಕಾರಿಗಳ ಪ್ರಕಾರ ಮಂಗಳವಾರ ಬೆಳಿಗ್ಗೆ 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ಮತ್ತು ಕೆಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ದರೋಡೆಕೋರನನ್ನು ನೆರೆಯ ಛತ್ತೀಸ್‌ಗಢದ ರಾಯ್‌ಪುರ ಜೈಲಿನಿಂದ ರಾಂಚಿಗೆ ಕರೆತರುತ್ತಿದ್ದಾಗ ಈ ಎನ್‌ಕೌಂಟರ್ ನಡೆದಿದೆ. ಗುಂಡಿನ ದಾಳಿಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ಮೇದಿನಿನಗರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಮಣಿಭೂಷಣ್ ಪ್ರಸಾದ್ ಹೇಳಿದ್ದಾರೆ. ಹಾಗಾದರೆ ಎನ್‌ಕೌಟಂರ್ ನಡೆದಿದ್ದು ಹೇಗೆ?
ಘಟನೆಯ ಬಗ್ಗೆ ಮಾತನಾಡಿದ ಡಿಜಿಪಿ
ಈ ಘಟನೆಯ ಬಗ್ಗೆ ವಿವರಿಸಿದ ಮೇದಿನಿನಗರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಮಣಿಭೂಷಣ್ ಪ್ರಸಾದ್, 'ಅಮನ್ ಸಾವೊ ಅಲಿಯಾಸ್ ಅಮನ್ ಸಾಹು ಅವರನ್ನು ರಾಯ್‌ಪುರದಿಂದ ರಾಂಚಿಗೆ ಕರೆತರಲಾಗುತ್ತಿತ್ತು. ಸೋಮವಾರದಂದು ವಿಕಾಸ್ ತಿವಾರಿ, ಅಮನ್ ಶ್ರೀವಾಸ್ತವ ಮತ್ತು ಅಮನ್ ಸಾಹು ಎಂಬ ಮೂವರು ದರೋಡೆಕೋರರು ಜೈಲುಗಳ ಒಳಗಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಜಿಪಿ ಹೇಳಿದ್ದರು. ತನಿಖೆಯ ಭಾಗವಾಗಿ ಸಿಮ್ಡೇಗಾ ಮತ್ತು ಹಜಾರಿಬಾಗ್ ಜೈಲುಗಳಲ್ಲಿ ದಾಳಿ ನಡೆಸಲಾಯಿತು. ಅಲ್ಲಿಂದ ಸಾಹುವನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು'.
'ಇದ್ದಕ್ಕಿದ್ದಂತೆ ಸಾಹುವಿನ ಗ್ಯಾಂಗ್‌ನ ಸದಸ್ಯರು ಅವನನ್ನು ಕರೆತರುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ರಾಂಚಿಯಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ರಾಮಗಢ ಪೊಲೀಸ್ ಠಾಣೆ ಪ್ರದೇಶದ ಚೈನ್‌ಪುರ ಬಳಿ ಅವನನ್ನು ಬಿಡಿಸಲು ಪ್ರಯತ್ನಿಸಿದರು' ಎಂದು ಹೇಳಿದರು.
ಸಾಹುವಿನ ಗ್ಯಾಂಗ್ ಸದಸ್ಯರು ಅವನನ್ನು ಬಿಡಿಸಲು ದಾಳಿ ನಡೆಸುತ್ತಿದ್ದಂತೆ, ಸಾಹು ಒಬ್ಬ STF ಜವಾನನಿಂದ INSAS ರೈಫಲ್ ಅನ್ನು ಕಸಿದುಕೊಂಡು ಗುಂಡು ಹಾರಿಸಲು ಪ್ರಾರಂಭಿಸಿದನು. ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದರು. ಇದು ಸಾಹುವಿನ ಸಾವಿಗೆ ಕಾರಣವಾಯಿತು. ನಂತರ ಇತರ ಗ್ಯಾಂಗ್ ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ.












Click it and Unblock the Notifications