• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ ಅಲರ್ಟ್ :ದಕ್ಷಿಣ ರಾಜ್ಯಗಳತ್ತ ನುಗ್ಗುತ್ತಿರುವ 'ಗಜ' ಚಂಡಮಾರುತ

|

ಬೆಂಗಳೂರು, ನವೆಂಬರ್ 12: ತಿತ್ಲಿ ಚಂಡಮಾರುತ ಸೃಷ್ಟಿಸಿದ ಅನಾಹುತಗಳು ಮಾಸುವ ಮುನ್ನವೇ ಗಜ ಚಂಡ ದಕ್ಷಿಣ ರಾಜ್ಯಗಳತ್ತ ನುಗ್ಗುತ್ತಿದೆ.

ಮುಂದಿನ 24 ಗಂಟೆಯೊಳಗಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶವನ್ನು ಪ್ರವೇಶಿಸಲಿದ್ದು, ನವೆಂಬರ್ 15ರ ವೇಳೆಗೆ ಕರ್ನಾಟಕವನ್ನು ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಿತ್ಲಿ ಚಂಡಮಾರುತದ ಹೊಡೆತಕ್ಕೆ 62 ಬಲಿ, 8 ದಿನದಿಂದ ವಿದ್ಯುತ್ ಇಲ್ಲ

ಬಂಗಾಳಕೊಲ್ಲಿಯ ಆಗ್ನೇಯ ಭಾಗ ಮತ್ತು ಮಧ್ಯಭಾಗದಲ್ಲಿ ಸೃಷ್ಟಿಯಾಗಿದ್ದ ಮಳೆ ಮಾರುತ ಗಂಟೆಗೆ 12 ಕಿ.ಮೀ ವೇಗದಲ್ಲಿ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನತ್ತ ಸಾಗುತ್ತಿತ್ತು. ಆದರೆ ಈಗ ಪ್ರಾಬಲ್ಯ ಹೆಚ್ಚಿಸಿಕೊಂಡಿರುವ ಮಾರುತ ಪ್ರಬಲ ಚಂಡಮಾರುತವಾಗಿ ಮಾರ್ಪಟ್ಟಿದೆ. ಮಂಗಳವಾರ ಹಾಗೂ ಬುಧವಾರ ಸಮುದ್ರಕ್ಕೆ ಇಳಿಯದಂತೆ ಉಭಯ ರಾಜ್ಯಗಳ ಮೀನುಗಾರರಿಗೆ ಎಚ್ಚರಿಸಲಾಗಿದೆ.

ನವೆಂಬರ್ 15ರ ನಂತರ ರಾಜ್ಯದಲ್ಲಿ ಮಳೆ

ನವೆಂಬರ್ 15ರ ನಂತರ ರಾಜ್ಯದಲ್ಲಿ ಮಳೆ

ರಾಜ್ಯದ ಸಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ನವೆಂಬರ್ 15ರ ನಂತರ ಚಂಡ ಮಾರುತ ಪ್ರವೇಶಿಸಲಿದೆ, ರಾಜ್ಯಕ್ಕೆ ಹಿಂಗಾರಯ ಪ್ರವೇಶಿಸಿ 10 ದಿನಗಳು ಕಳೆದರೂ ನಿರೀಕ್ಷಿಸಿದ ಪ್ರಮಾಣದ ಮಳೆಯಾಗಿಲ್ಲ. ಈ ಗಜ ಚಂಡ ಮಾರುತದಿಂದ ಮಳೆಯಾಗುವ ನಿರೀಕ್ಷೆಯನ್ನು ರಾಜ್ಯದ ಜನರು ಇಟ್ಟುಕೊಂಡಿದ್ದಾರೆ.

'ತಿತ್ಲಿ'ಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ನಾಯ್ಡು: ಬಿಜೆಪಿ

ಗಜ ಚಂಡ ಮಾರುತ ಚೆನ್ನೈನಿಂದ 930 ಕಿಮೀ ದೂರದಲ್ಲಿದೆ

ಗಜ ಚಂಡ ಮಾರುತ ಚೆನ್ನೈನಿಂದ 930 ಕಿಮೀ ದೂರದಲ್ಲಿದೆ

ಗಜ ಚಂಡ ಮಾರುತ ಇದೀಗ ಚೆನ್ನೈ ನಿಂದ ಪೂರ್ವಭಾಗದಲ್ಲಿ 930 ಕಿ.ಮೀ ದೂರದಲ್ಲಿದೆ. ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಕ್ಕೆ ಗಜ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.

ತಿತ್ಲಿ ಚಂಡಮಾರುತದ ರೌದ್ರಾವತಾರಕ್ಕೆ ಒಡಿಶಾದಲ್ಲಿ 52 ಮಂದಿ ಬಲಿ

ತುಮಕೂರು, ಕೋಲಾರ, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ತುಮಕೂರು, ಕೋಲಾರ, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ತಮಿಳುನಾಡು ಹಾಗೂ ಆಂಧ್ರ ಗಡಿಯಲ್ಲಿರುವ ರಾಜ್ಯದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ತುಂತುರು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಹಿಂಗಾರಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ 188.2 ಮಿ.ಮೀ ಮಳೆಯಾಗಬೇಕು

ಹಿಂಗಾರಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ 188.2 ಮಿ.ಮೀ ಮಳೆಯಾಗಬೇಕು

ಹಿಂಗಾರಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ವಾಡಿಕೆಯಂತೆ 188.2 ಮಿ.ಮೀ ಮಳೆಯಾಗಬೇಕು, ಕಳೆದ ವರ್ಷ 181 ಮಿ.ಮೀ ಮಳೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ಅ.1 ರಿಂದ ನ.11ರವರೆಗೆ ರಾಜ್ಯದಲ್ಲಿ ಸರಾಸರಿ ಕೇವಲ 82.2 ಮಿ.ಮೀ ಮಳೆಯಾಗಿದ್ದು ಶೇ. 47 ಮಳೆ ಕೊರತೆಯಾಗಿದೆ.

English summary
Indian meteorological department has been forecasted that GAJA cyclone from Bay of Bengal is moving towards south states in next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X