ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಸ್ಫೋಟಕ ಕಾರಣ ಪತ್ತೆ, ಇದೇನಾ ಅದು? Ajit Pawar
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ವಿಮಾನ ಅಪಘಾತವಾಗಿ, ದುರಂತ ಸಾವು ಕಂಡ ನೋವು ಈಗಲೂ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಕಾಡುತ್ತಿದೆ. ಅಜಿತ್ ಪವಾರ್ ಅವರು ಸೇರಿ ಇತರ ನಾಲ್ವರು ವಿಮಾನದಲ್ಲಿ ಪ್ರಯಾಣ ಮಾಡುವಾಗ ಈ ದುರಂತ ಸಂಭವಿಸಿತ್ತು. ಆದರೆ ಅದೊಂದು ಕ್ರಮ ಕೈಗೊಂಡಿದ್ದರೆ ಭಾರಿ ದೊಡ್ಡ ಗಂಡಾಂತರ ತಪ್ಪಿಸಬಹುದಿತ್ತು ಎಂದು ಇದೀಗ ಚರ್ಚೆ ಶುರುವಾಗಿದೆ. ಹಾಗಾದರೆ ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಸ್ಫೋಟಕ ಇದೇ ವಿಚಾರ ಕಾರಣವಾಗಿತ್ತಾ? ಬನ್ನಿ ತಿಳಿಯೋಣ.
ಮಹಾರಾಷ್ಟ್ರ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಪ್ರಚಾರ ಮಾಡಲು ಎನ್‌ಸಿಪಿ ನಾಯಕ & ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ರು. ಅಜಿತ್ ಪವಾರ್ ಮಂಗಳವಾರ ಮುಂಬೈನಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿ ಬಳಿಕ ಪುಣೆ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಅಜಿತ್ ಪವಾರ್ ಅವರು ಇದ್ದ ವಿಮಾನ ರನ್‌ವೇ ಹಾದಿಯಲ್ಲೇ ಸ್ಫೋಟಗೊಂಡಿತ್ತು. ಈ ದುರಂತದ ನಂತರ ತನಿಖೆ ಕೂಡ ಚುರುಕುಗೊಂಡಿದೆ, ಆದರೆ ಅದೊಂದೇ ಒಂದು ಎಡವಟ್ಟು ಈ ದುರಂತ ನಡೆಯಲು ಕಾರಣ ಎಂಬ ಆರೋಪ ಮಾಡಲಾಗುತ್ತಿದೆ.

'ಗಗನ್' ಇದ್ದಿದ್ದರೆ ವಿಮಾನ ಉಳಿಯುತ್ತಿತ್ತು?
ಅಂದಹಾಗೆ ಭಾರೀ ಮಳೆ, ಮಂಜು ಕವಿದ ಸಮಯದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಭಾರಿ ದೊಡ್ಡ ಸಹಾಯ ಮಾಡುವುದೇ 'ಗಗನ್'. ಹಾಗಾದರೆ ಏನಿದು ಗಗನ್ ಎಂದು ನೋಡುವುದಾದರೆ, ಉಪಗ್ರಹ ಆಧಾರಿತ ತಂತ್ರಾಂಶ ವ್ಯವಸ್ಥೆಯನ್ನೇ 'ಗಗನ್' ಎಂದು ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ಲಿಯರ್‌ಜೆಟ್ ವಿಮಾನದಲ್ಲಿ ಇರಲೇ ಇಲ್ಲ ಎನ್ನಲಾಗಿದೆ. ಅಕಸ್ಮಾತ್ ಗಗನ್ ತಂತ್ರಾಂಶ ಇದ್ದಿದ್ದರೆ ಆಗ ಅಜಿತ್ ಪವಾರ್ ಅವರ ಜೀವ ಉಳಿಯಬಹುದಿತ್ತು ಅಂತಿದ್ದಾರೆ ತಜ್ಞರು.
ವಿಮಾನದಲ್ಲಿ ಗಗನ್ ಯಾಕೆ ಇರಲಿಲ್ಲ?
ಇಸ್ರೋ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಜಂಟಿಯಾಗಿ ಅಭಿವೃದ್ಧಿ ಮಾಡಿರುವ ತಂತ್ರಾಂಶ ವ್ಯವಸ್ಥೆಯೇ ಗಗನ್. ಭಾರತದ ವಾಯುಪ್ರದೇಶದ ಮೇಲೆ ಹಾರುವ ಎಲ್ಲ ವಿಮಾನಗಳಿಗೂ ಜಿಪಿಎಸ್ ನಿಖರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚು ಮಾಡುತ್ತದೆ ಈ ತಂತ್ರಾಂಶ. ಉಪಗ್ರಹ ಆಧರಿಸಿ ನಿಖರವಾದ ಮಾಹಿತಿ ಒದಗಿಸುತ್ತದೆ, ಹೀಗಿದ್ದರೂ 'ಗಗನ್' ತಂತ್ರಾಂಶ ಏಕೆ ಇರಲಿಲ್ಲ? ಎಂಬ ಚರ್ಚೆ ಇದೀಗ ಶುರುವಾಗಿದೆ. ಭಾರತದಲ್ಲಿ 2021 ಜೂನ್ 30ಕ್ಕೆ ಗಗನ್ ತಂತ್ರಾಂಶ ವ್ಯವಸ್ಥೆ ಜಾರಿ ಮಾಡಲಾಗಿತ್ತು.
ಈ ದಿನಾಂಕದ ನಂತರ ನೋಂದಣಿ ಆಗಿರುವ ಎಲ್ಲ ವಿಮಾನಗಳಲ್ಲಿ ಗಗನ್ ತಂತ್ರಾಂಶ ವ್ಯವಸ್ಥೆಯು ಜಾರಿಯಲ್ಲಿದೆ. ಆದರೆ ಅಪಘಾತಕ್ಕೆ ಈಡಾಗಿರುವ ಅಜಿತ್ ಪವಾರ್ ಅವರ ವಿಮಾನ, ಇದಕ್ಕಿಂತ 28 ದಿನಗಳ ಹಿಂದೆ ಭಾರತದಲ್ಲಿ ನೋಂದಣಿ ಆಗಿತ್ತು. ಹೀಗಾಗಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ಖಾಸಗಿ ವಿಮಾನದಲ್ಲಿ 'ಗಗನ್' ತಂತ್ರಾಂಶ ಇರಲಿಲ್ಲ ಎನ್ನಲಾಗಿದೆ. ಅಕಸ್ಮಾತ್ ಈ ಗಗನ್ ತಂತ್ರಾಂಶ ಇದ್ದಿದ್ದರೆ ಅಜಿತ್ ಪವಾರ್ ಅವರು ಬದುಕುತ್ತಿದ್ದರಾ? ಅವರ ಜಿವ ಉಳಿಸಲು ಗಗನ್ ಸಹಾಯ ಮಾಡುತ್ತಿತ್ತಾ? ಎಂಬ ಚರ್ಚೆ ಶುರುವಾಗಿದೆ.












Click it and Unblock the Notifications