G20 Summit: ವಿಶ್ವದ ಘಟಾನುಘಟಿ ನಾಯಕರು ದೆಹಲಿಯ ಯಾವೆಲ್ಲಾ ಹೋಟೆಲ್‌ಗಳಲ್ಲಿ ತಂಗಲಿದ್ದಾರೆ ಗೊತ್ತಾ? ವಿವರ ನೋಡಿ
ನವದೆಹಲಿ, ಸೆಪ್ಟೆಂಬರ್ 7: ಜಗತ್ತಿನ ಅಭಿವೃದ್ಧಿಗೆ ಉಕ್ರೇನ್ ಯುದ್ಧ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು ಜಿ20 ಆರ್ಥಿಕ ಪ್ರಮುಖ ದೇಶದಗಳ ನಾಯಕರು ನವದೆಹಲಿಯಲ್ಲಿ ಸೇರಲಿದ್ದಾರೆ. ಸೆಪ್ಟೆಂಬರ್ 9 ಮತ್ತು 10 ರಂದು ಜಿ20 ಶೃಂಗಸಭೆ ಆಯೋಜಿಸಲು ರಾಷ್ಟ್ರ ರಾಜಧಾನಿ ನವದೆಹಲಿ ಸಜ್ಜಾಗಿದೆ.
ದೆಹಲಿಯಲ್ಲಿ ಈಗಾಗಲೇ ಜಿ20 ಶೃಂಗಸಭೆ ಆಯೋಜನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆಗಾಗಿ ನಗರದಲ್ಲಿ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಕೋತಿಗಳ ಕಾಟ ತಪ್ಪಿಸಲು ದೊಡ್ಡ ಪ್ರಮಾಣದ ಲಾಂಗುರ್ ಕಟೌಟ್‌ಗಳನ್ನು ಅಳವಡಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಆಸ್ಟ್ರೇಲಿಯಾ ಪ್ರಧಾನಿ, ಆಂಥೋನಿ ಅಲ್ಬನೀಸ್, ಚೀನಾ ನಿಯೋಗ ಈ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಪ್ರಮುಖ ನಾಯಕರು ತಂಗಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಈಗಾಗಲೇ ನವದೆಹಲಿಯಲ್ಲಿರುವ ಎಲ್ಲಾ ಐಷಾರಾಮಿ ಹೋಟೆಲ್‌ಗಳನ್ನು ಜಿ20 ಶೃಂಗಸಭೆಯ ನಾಯಕರಿಗಾಗಿ ಕಾಯ್ದಿರಿಸಲಾಗಿದೆ. ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರಮುಖ ನಾಯಕರು ಮತ್ತು ಅವರು ತಂಗುವ ಹೋಟೆಲ್‌ಗಳ ಮಾಹಿತಿ ಇಲ್ಲಿದೆ.
*ಜೋ ಬಿಡನ್
ಅಮೆರಿಕ ಅಧ್ಯಕ್ಷ ಜೋ ಬಿಡನ್ ಜಿ20 ಶೃಂಗಸಭೆಗೆ ಆಗಮಿಸಲಿದ್ದಾರೆ, ದೆಹಲಿಯ ಐಟಿಸಿ ಮೌರ್ಯದಲ್ಲಿ ತಂಗಲಿದ್ದಾರೆ. ಬಿಡನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಶೃಂಗಸಭೆಯಲ್ಲಿ ಶುದ್ಧ ಇಂಧನ ಪರಿವರ್ತನೆ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚಿಸುವ ನಿರೀಕ್ಷೆಯಿದೆ.
*ರಿಷಿ ಸುನಕ್
ಬ್ರಿಟನ್ ಪ್ರಧಾನ ಮಂತ್ರಿಯಾಗಿ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸ ಮಾಡಲಿರುವ ರಿಷಿ ಸುನಕ್ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಶಾಂಗ್ರಿಲಾ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಶೃಂಗಸಭೆಯ ಮೊದಲು, ರಿಷಿ ಸುನಕ್ ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.
*ಚೀನಾ ನಿಯೋಗ
ಪ್ರೀಮಿಯರ್ ಲಿ ಕಿಯಾಂಗ್ ಚೀನಾದ ನಿಯೋಗವನ್ನು ಮುನ್ನಡೆಸಲಿದ್ದಾರೆ, ಅಧ್ಯಕ್ಷ ಜಿನ್‌ಪಿಂಗ್ ಭಾಗವಹಿಸುವುದಿಲ್ಲ ಎನ್ನುವುದು ಖಚಿತವಾಗಿದೆ. ಈ ಮೂಲಕ ಅಮೆರಿ ಅಧ್ಯಕ್ಷ ಬಿಡೆನ್ ಜೊತೆ ಮುಖಾಮುಖಿಯನ್ನು ಚೀನಾ ಅಧ್ಯಕ್ಷ ತಪ್ಪಿಸಿಕೊಂಡಿದ್ದಾರೆ. 2008 ರಲ್ಲಿ ಮೊದಲ ಆವೃತ್ತಿ ನಡೆದ ನಂತರ ಚೀನಾದ ಅಧ್ಯಕ್ಷರು ಜಿ20 ನಾಯಕರ ಶೃಂಗಸಭೆಯನ್ನು ತಪ್ಪಿಸಿಕೊಂಡಿರುವುದು ಇದೇ ಮೊದಲು, 2020 ಮತ್ತು 2021 ರಲ್ಲಿ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಜಿನ್‌ಪಿಂಗ್ ಭಾಗವಹಿಸಿದ್ದರು. ಚೀನಾ ನಿಯೋಗ ದೆಹಲಿಯ ತಾಜ್ ಹೋಟೆಲ್‌ನಲ್ಲಿ ತಂಗಲಿದೆ.
*ಜಸ್ಟಿನ್ ಟ್ರುಡೊ
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಶನಿವಾರ ಮತ್ತು ಭಾನುವಾರದಂದು ಜಿ 20 ಶೃಂಗಸಭೆಗಾಗಿ ಆಗಮಿಸುವ ಮೊದಲು ಏಷ್ಯಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಇಂಡೋನೇಷ್ಯಾಕ್ಕೆ ಪ್ರಯಾಣಿಸಲಿದ್ದಾರೆ. ಅವರು ಲಲಿತ್ ಹೋಟೆಲ್‌ನಲ್ಲಿ ತಂಗಲಿದ್ದಾರೆ
*ಆಂಥೋನಿ ಅಲ್ಬನೀಸ್
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಭಾರತ ಭೇಟಿಯು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿದೆ, ಇದರಲ್ಲಿ ಅವರು ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ಗೆ ಭೇಟಿ ನೀಡಲಿದ್ದಾರೆ. ಜಿ20 ಶೃಂಗಸಭೆಗಾಗಿ ಅವರು ಇಂಪೀರಿಯಲ್ ಹೋಟೆಲ್‌ನಲ್ಲಿ ತಂಗಲಿದ್ದಾರೆ.
ಇತರ ಪ್ರಮುಖ ನಾಯಕರು ತಂಗುವ ಹೋಟೆಲ್‌ಗಳ ವಿವರ:
*ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್: ಕ್ಲಾರಿಡ್ಜಸ್ ಹೋಟೆಲ್
*ಟರ್ಕಿಶ್ ನಿಯೋಗ: ಒಬೆರಾಯ್ ಹೋಟೆಲ್
*ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ ಮತ್ತು ಸ್ಪೇನ್‌ನಿಂದ ಬರುವ ನಿಯೋಗಗಳು: ಲೆ ಮೆರಿಡಿಯನ್
*ಬ್ರೆಜಿಲಿಯನ್ ನಿಯೋಗಗಳು: ತಾಜ್ ಪ್ಯಾಲೇಸ್ ಹೋಟೆಲ್
*ಇಂಡೋನೇಷಿಯನ್ ಮತ್ತು ಆಸ್ಟ್ರೇಲಿಯನ್ ತಂಡಗಳು: ಇಂಪೀರಿಯಲ್ ಹೋಟೆಲ್
*ಯುಕೆ ಮತ್ತು ಜರ್ಮನಿ ನಿಯೋಗಗಳು: ಶಾಂಗ್ರಿ-ಲಾ ಹೋಟೆಲ್
*ಇಟಾಲಿಯನ್ ಮತ್ತು ಸಿಂಗಾಪುರದ ತಂಡಗಳು: ಹಯಾಟ್ ರೀಜೆನ್ಸಿ
*ಅಮೆರಿಕ ನಿಯೋಗ: ಮೌರ್ಯ ಶೆರಾಟನ್
*ಒಮಾನ್ ಗ್ರೂಪ್: ಲೋಧಿ ಹೋಟೆಲ್
*ಫ್ರೆಂಚ್ ಗ್ರೂಪ್: ಕ್ಲಾರಿಡ್ಜಸ್ ಹೋಟೆಲ್
*ಬಾಂಗ್ಲಾದೇಶ ಗುಂಪು: ಗುರುಗ್ರಾಮ್‌ನಲ್ಲಿರುವ ಗ್ರ್ಯಾಂಡ್ ಹಯಾಟ್
*ಕೆನಡಿಯನ್ ಮತ್ತು ಜಪಾನೀಸ್ ನಿಯೋಗಗಳು: ಲಲಿತ್ ಹೋಟೆಲ್
*ಕೊರಿಯನ್ ನಿಯೋಗ: ಒಬೆರಾಯ್ ಹೋಟೆಲ್, ಗುರುಗ್ರಾಮ್
*ಈಜಿಪ್ಟಿನ ನಿಯೋಗ: ಸಾಕೇತ್‌ನಲ್ಲಿರುವ ಐಟಿಸಿ ಶೆರಾಟನ್
*ಸೌದಿ ಅರೇಬಿಯಾದ ನಿಯೋಗ: ಗುರುಗ್ರಾಮ್‌ನಲ್ಲಿರುವ ಲೀಲಾ ಹೋಟೆಲ್
*ಯುಎಇ ನಿಯೋಗ: ದೆಹಲಿಯ ತಾಜ್ ಮಹಲ್ ಹೋಟೆಲ್.












Click it and Unblock the Notifications