ಮೇ 12ರಿಂದ ಸಂಚರಿಸಲಿರುವ ರೈಲುಗಳ ಸಮಗ್ರ ಪಟ್ಟಿ
ಬೆಂಗಳೂರು, ಮೇ 11: ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಗೊಂಡಿದ್ದರಿಂದ ಮಾರ್ಚ್ 22ರಿಂದ ರೈಲು ಸಂಚಾರ ದೇಶದೆಲ್ಲೆಡೆ ಸ್ಥಗಿತಗೊಳಿಸಲಾಗಿತ್ತು. ಈಗ ಮೂರನೇ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ 15 ಜೋಡಿಗಳಲ್ಲಿ ರೈಲುಗಳು ಸಂಚಾರ ಆರಂಭಿಸಲಿವೆ.
Recommended Video
ಶ್ರಮಿಕ ರೈಲುಗಳ ಪ್ರತಿ ಕೋಚ್ ಗಳಲ್ಲಿ ಕೇವಲ 54 ಪ್ರಯಾಣಿಕರಿಗೆ ಅನುಮತಿ ನೀಡಲಾಗಿತ್ತು. ಈ ಪ್ಯಾಸೆಂಜರ್ ರೈಲಿನಲ್ಲಿ 72 ಮಂದಿ ಪ್ರಯಾಣಿಸಬಹುದಾಗಿದೆ.
ಟಿಕೆಟ್ ಬುಕ್ಕಿಂಗ್ ಮಾಡಲು IRCTC ವೆಬ್ ತಾಣಕ್ಕೆ ಭೇಟಿ ನೀಡಿ, ಎಂದಿನ ಕ್ರಮದಂತೆ ಟಿಕೆಟ್ ಬುಕ್ ಮಾಡಿ.. ಮೇ 11 ರ ಸಂಜೆ 4 ಗಂಟೆಯಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. IRCTC ವೆಬ್ ಸೈಟ್ ನಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ. ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ಕೌಂಟರ್ ಬಂದ್ ಆಗಿರಲಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಕೂಡಾ ನೀಡಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

ಸುಮಾರು 15 ರಾಜಧಾನಿ ಮಾರ್ಗಗಳಲ್ಲಿ ಎಲ್ಲಾ ಹವಾನಿಯಂತ್ರಿತ ಪ್ಯಾಸೆಂಜರ್ ರೈಲುಗಳು ಮೇ 12ರಿಂದ ಸಂಚಾರ ಆರಂಭಿಸಲಿವೆ. ಪ್ರಯಾಣ ದರವನ್ನು ಸೂಪರ್ ಫಾಸ್ಟ್ ರೈಲಿನ ದರದಂತೆ ನಿಗದಿ ಮಾಡಲಾಗಿದೆ.
| ವಿಶೇಷ ಪ್ಯಾಸೆಂಜರ್ ರೈಲುಗಳು | ||
|---|---|---|
| ಎಲ್ಲಿಂದ | ಎಲ್ಲಿಗೆ | ಎಂದಿನಿಂದ |
| ಹೌರಾ | ನವದೆಹಲಿ | ಮೇ 12, 2020 |
| ದೆಹಲಿ | ಹೌರಾ | ಮೇ 13, 2020 |
| ರಾಜೇಂದ್ರನಗರ್ | ನವದೆಹಲಿ | ಮೇ 12, 2020 |
| ನವದೆಹಲಿ | ರಾಜೇಂದ್ರನಗರ್ | ಮೇ 13, 2020 |
| ದಿಬ್ರುಗರ್ | ನವದೆಹಲಿ | ಮೇ 14, 2020 |
| ನವದೆಹಲಿ | ದಿಬ್ರುಗರ್ | ಮೇ 12, 2020 |
| ನವದೆಹಲಿ | ಜಮ್ಮು ತಾವಿ | ಮೇ 13, 2020 |
| ಜಮ್ಮು ತಾವಿ | ನವದೆಹಲಿ | ಮೇ 14, 2020 |
| ಬೆಂಗಳೂರು | ನವದೆಹಲಿ | ಮೇ 12, 2020 |
| ನವದೆಹಲಿ | ಬೆಂಗಳೂರು | ಮೇ 12, 2020 |
| ತಿರುವನಂತಪುರಂ | ನವದೆಹಲಿ | ಮೇ 15, 2020 |
| ನವದೆಹಲಿ | ತಿರುವನಂತಪುರಂ | ಮೇ 13, 2020 |
| ಚೆನ್ನೈ ಸೆಂಟ್ರಲ್ | ನವದೆಹಲಿ | ಮೇ 15, 2020 |
| ನವದೆಹಲಿ | ಚೆನ್ನೈ ಸೆಂಟ್ರಲ್ | ಮೇ 13, 2020 |
| ಬಿಲಾಸ್ ಪುರ್ | ನವದೆಹಲಿ | ಮೇ 14, 2020 |
| ನವದೆಹಲಿ | ಬಿಲಾಸ್ ಪುರ್ | ಮೇ 12, 2020 |
| ರಾಂಚಿ | ನವದೆಹಲಿ | ಮೇ 14, 2020 |
| ನವದೆಹಲಿ | ರಾಂಚಿ | ಮೇ 13, 2020 |
| ಮುಂಬೈ ಸೆಂಟ್ರಲ್ | ನವದೆಹಲಿ | ಮೇ 12, 2020 |
| ನವದೆಹಲಿ | ಮುಂಬೈ ಸೆಂಟ್ರಲ್ | ಮೇ 13, 2020 |
| ಅಹಮದಾಬಾದ್ | ನವದೆಹಲಿ | ಮೇ 12, 2020 |
| ನವದೆಹಲಿ | ಅಹಮದಾಬಾದ್ | ಮೇ 13, 2020 |
| ಅಗರ್ತಲಾ | ನವದೆಹಲಿ | ಮೇ 18, 2020 |
| ನವದೆಹಲಿ | ಅಗರ್ತಲಾ | ಮೇ 20, 2020 |
| ಭುವನೇಶ್ವರ | ನವದೆಹಲಿ | ಮೇ 13, 2020 |
| ನವದೆಹಲಿ | ಭುವನೇಶ್ವರ | ಮೇ 14, 2020 |
| ನವದೆಹಲಿ | ಮಡಗಾಂವ್ | ಮೇ 15, 2020 |
| ಮಡಗಾಂವ್ | ನವದೆಹಲಿ | ಮೇ 17, 2020 |
| ಸಿಕಂದರಾಬಾದ್ | ನವದೆಹಲಿ | ಮೇ 20, 2020 |
| ನವದೆಹಲಿ | ಸಿಕಂದರಾಬಾದ್ | ಮೇ 17, 2020 |












Click it and Unblock the Notifications