• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೈಲ ಬೆಲೆ ಏರಿಕೆ : 'ಸತ್ಯದ ಸವಾಲ'ನ್ನು ಸ್ವೀಕರಿಸುವರೆ ರಾಹುಲ್ ಗಾಂಧಿ?

By Prasad
|

ಬೆಂಗಳೂರು, ಜುಲೈ 05 : 2018ರ ಮೇ 24ರಂದು ಸರಿಯಾಗಿ 2 ಗಂಟೆ 28 ಸೆಕೆಂಡಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಸವಾಲು ಎಸೆದಿದ್ದರು. ನೆನಪಿದೆಯೆ?

ಅದೇನೆಂದರೆ, "ಪ್ರಿಯ ಪ್ರಧಾನಿಯವರೆ, ನೀವು ವಿರಾಟ್ ಕೊಹ್ಲಿ ಅವರ ಚಾಲೆಂಜ್ ಸ್ವೀಕರಿಸಿದ್ದು ನೋಡಿ ತುಂಬಾ ಸಂತೋಷವಾಯಿತು. ಈಗ ನನ್ನ ಸವಾಲು ಸ್ವೀಕರಿಸಿ. ನೀವು ತೈಲದ ಬೆಲೆ ಇಳಿಸದಿದ್ದರೆ, ಕಾಂಗ್ರೆಸ್ ಇಡೀ ದೇಶದಾದ್ಯಂತ ಆಂದೋಲನ ನಡೆಸುತ್ತದೆ ಮತ್ತು ಬೆಲೆ ಇಳಿಸುವಂತೆ ನಿಮ್ಮ ಮೇಲೆ ಒತ್ತಡ ಹೇರುತ್ತದೆ."

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

ಈ ಸವಾಲು ಒಡ್ಡಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಭಾರೀ ಕರತಾಡನ ಬಂದಿದ್ದವು, ಪ್ರಶಂಸೆಗಳ ಸುರಿಮಳೆಯಾಗಿದ್ದವು. ಅಸಲಿಗೆ, ಆ ಸಮಯದಲ್ಲಿ ಕೂಡ ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಾಣುತ್ತಿದ್ದವು ಮತ್ತು ಬಡ ಮತ್ತು ಕೆಳ ಮಧ್ಯಮ ವರ್ಗದವರನ್ನು ಕಂಗೆಡಿಸಿದ್ದವು.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ಕಾಲ ಹೇಗೆ ಚಲಿಸುತ್ತದೆಂದರೆ, ಈಗ ಅವರಿಗೇ ಈ ಸವಾಲು ಒಡ್ಡುವಂಥ ಪ್ರಸಂಗ ಎದುರಾಗಿದೆ. ಅವರದೇ (ಜೆಡಿಎಸ್ ಜೊತೆ ಮೈತ್ರಿ) ಸರಕಾರವಿರುವ ಕರ್ನಾಟಕದಲ್ಲಿ ಪೂರ್ಣಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿ, ಶ್ರೀಸಾಮಾನ್ಯರಿಗೆ ಭರ್ಜರಿ ಶಾಕ್ ನೀಡಿದ್ದಾರೆ.

ವಾಹನ ಸವಾರರಿಗೆ ತಟ್ಟಿದ ಸಾಲಮನ್ನಾ ಬಿಸಿ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

ಇದೀಗ, ರಾಹುಲ್ ಗಾಂಧಿ ಅವರು ಮೇನಲ್ಲಿ ಎಸೆದಿದ್ದ ಬಾಣವನ್ನು ತಿರುಗಿಸಿ ಟ್ವಿಟ್ಟಿಗರು ರಾಹುಲ್ ಅವರಿಗೇ ಬಿಡುತ್ತಿದ್ದಾರೆ. ಮುಟ್ಟಿ ನೋಡಿಕೊಳ್ಳುವಂತೆ ಬಾರಿಸುತ್ತಿದ್ದಾರೆ. ಅಂದು ರಾಹುಲ್ ಅವರು ಪ್ರಧಾನಿಗೆ #FuelChallenge ಎಸೆದಿದ್ದರು, ಇಂದು ಮೋದಿ ಬೆಂಬಲಿಗರು ರಾಹುಲ್ ಅವರಿಗೆ #TruthChallenge ಎಸೆದಿದ್ದಾರೆ. ಸ್ವೀಕರಿಸ್ತಾರಾ ರಾಹುಲ್?

ಸತ್ಯದ ಸವಾಲನ್ನು ಸ್ವೀಕರಿಸಿ ರಾಹುಲ್

ಪ್ರಿಯ ರಾಹುಲ್ ಗಾಂಧೀಜಿ, ನಾಗರಿಕರಾಗಿ ಸತ್ಯದ ಸವಾಲನ್ನು ಕೂಡಲೆ ಸ್ವೀಕರಿಸಿ. ಅಥವಾ ಪೆಟ್ರೋಲ್ ಬೆಲೆ ಇಳಿಸಿರೆಂದು ಸವಾಲು ಹಾಕಿದ್ದು, ಅತ್ತು ಕರೆದಿದ್ದು ಕೇವಲ ಮತಕ್ಕಾಗಿ ಎಂದು ಒಪ್ಪಿಕೊಳ್ಳಿ. ಕರ್ನಾಟಕದಲ್ಲಿ ನಿಮ್ಮ ಸರಕಾರವೇ ಏರಿಸಿರುವ ಪೆಟ್ರೋಲ್ ಬೆಲೆಯನ್ನು ಕೂಡಲೆ ಇಳಿಸಿ. ಸತ್ಯದ ಸವಾಲನ್ನು ಸ್ವೀಕರಿಸಲು ಸಿದ್ಧವೆ ಎಂದು ಸುಶಾಂತ್ ಸಿನ್ಹಾ ಅವರು ಚಾಲೆಂಜ್ ನೀಡಿದ್ದಾರೆ.

ರಾಹುಲ್ ಗಾಂಧಿ ಅಸಲಿ ಮುಖ ಅನಾವರಣ

ಬಜೆಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದಾರೆ. ರಾಹುಲ್ ಅವರು ಸವಾಲು ಸ್ವೀಕರಿಸಿದ್ದಾರೆ. ಅವರ ನಿಜವಾದ ಮುಖ ಏನೆಂದು ಇದೀಗ ಗೊತ್ತಾಗುತ್ತದೆ. ಜೆಡಿಎಸ್ ನ ಬಣ್ಣ ಕೂಡ ಅನಾವರಣಗೊಂಡಿದೆ. ಕಾಂಗ್ರೆಸ್ ಪ್ರಜಾತಂತ್ರದ ಕಗ್ಗೊಲೆ ಮಾಡುತ್ತಿದೆ ಎಂದು ರಾಜ್ ಸಿಂಗ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್, ಸೈಕಲ್ ಬೇಕಾ, ಎತ್ತಿನಗಾಡಿಯಾ?

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆ ಆಗುವುದಿಲ್ಲ!" ಹೀಗೆಂದು ಹೇಳಲು ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗುವುದಿಲ್ಲವೆ? ಮಿಸ್ಟರ್ ರಾಹುಲ್ ಗಾಂಧಿ, ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಸೈಕಲ್ ಬೇಕಂತೀರಾ, ಎತ್ತಿನ ಗಾಡಿಯಲ್ಲಿ ಸಂಚರಿಸ್ತೀರಾ? ನರೇಂದ್ರ ಮೋದಿ ಅವರಿಗೆ ನೀವು ಹಾಕಿದ್ದ ಸವಾಲು ನೆನಪಿದೆಯೆ? ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಹಾಕಿರುವ ಸೆಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಶ್ರೀನಿವಾಸ್ ಜಿ ಎನ್ನುವವರು ರಾಹುಲ್ ಅವರನ್ನು ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಬೆಲೆ ಏರಿಸಿದರೆ ಓಕೇನಾ?

ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸದಿದ್ದಾಗ ಅವರು ಹೆಚ್ಚಿನ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ, ರಾಹುಲ್ ಗಾಂಧಿ ಅವರ ಪಾರ್ಟನರ್ ಎಚ್ ಡಿ ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದಾಗ ಅವರು ರೈತರಿಗೆ ಸಹಾಯ ಮಾಡುತ್ತಾರೆ! ಕುಛ್ ಭೀ! ಎಂದು ಶಕುಂತಲಾ ಅಯ್ಯರ್ ಅವರು ರೇಷ್ಮೆಯಂತೆ ನುಣುಪಾಗಿ ಏಟು ನೀಡಿದ್ದಾರೆ, ಐ ಮೀನ್ ಟ್ವೀಟ್ ಮಾಡಿದ್ದಾರೆ.

ಏಕೆ ಈ ಆಷಾಢಭೂತಿತನ ರಾಹುಲ್ ಗಾಂಧಿ?

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯ ಚಾಲೆಂಜಲ್ಲಿ ರಾಹುಲ್ ಗಾಂಧಿಯವರೇ ಸೋತಿದ್ದಾರೆ. ಅವರು 1 ಪೈಸೆ ಏರಿದ್ದನ್ನೂ ಪ್ರಶ್ನಿಸಿದ್ದರು. ಆದರೆ ಕಾಂಗ್ರೆಸ್ (ಜೆಡಿಎಸ್) ಸರಕಾರ ಕರ್ನಾಟಕದಲ್ಲಿ ಅದನ್ನೇ ಮಾಡಿದೆ. ರಾಹುಲ್ ಗಾಂಧಿಯವರೆ, ಏಕೆ ಈ ಆಷಾಢಭೂತಿತನ? ಇದೀಗ ತೈಲ ಸೆಸ್ ಹೇರಲಾಗಿದ್ದು ಪೆಟ್ರೋಲ್, ಡೀಸೆಲ್ 1 ರು.ಗಿಂತ ಹೆಚ್ಚಿಸಲಾಗಿದೆ ಮತ್ತು ವಿದ್ಯುತ್ ಬೆಲೆ ಕೂಡ 20 ಪೈಸೆಯಷ್ಟು ಏರಿಸಲಾಗಿದೆ ಎಂದು ಸುಕನ್ಯಾ ಅಯ್ಯರು ಎಂಬುವವರು ಕೆಂಡ ಕಾರಿದ್ದಾರೆ.

ನಿಮಗೆ ನೈತಿಕತೆಯೇ ಇಲ್ಲ ರಾಹುಲ್

ಕುಮಾರಸ್ವಾಮಿ (ಕಾಂಗ್ರೆಸ್-ಜೆಡಿಎಸ್) ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದಕ್ಕೆ ನಿಮ್ಮ ಅಭಿಪ್ರಾಯವೇನು (ರಾಹುಲ್ ಗಾಂಧಿ)? ಇದಕ್ಕೆ ನೀವೇ ಒಪ್ಪಿಗೆ ಕೊಟ್ಟಂತೆ ಕಾಣಿಸುತ್ತಿದೆ? ಹಾಗಿದ್ರೆ, ನೀವೇಕೆ ನರೇಂದ್ರ ಮೋದಿಯವರ ಫಿಟ್ನೆಸ್ ಚಾಲೆಂಜನ್ನು ಅಣಕಿಸಿದಿರಿ? ಎಷ್ಟು ಸರಳವಾಗಿ ಡಬಲ್ ಟಾಕ್ ಮಾಡುತ್ತೀರಿ? ನಿಮಗೆ ನೈತಿಕತೆಯೇ ಇಲ್ಲ ಅಥವಾ ನಿಮಗೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲ. ನೀವು ಬರೀ ರಾಜಕೀಯ ಮಾಡುತ್ತಿದ್ದೀರಿ ಎಂದು ಯುಎಚ್ಕೆ ಪ್ರಸಾದ್ ಎಂಬುವವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು karnataka budget 2018 ಸುದ್ದಿಗಳುView All

English summary
Fuel price has been hiked in Karnataka in the budget presented by H D Kumaraswamy. Tweeples are questioning him and throwing back same challenge when he mocked Narendra Modi when he accepted Fitness challenge. Will Rahul Gandhi answer these questions?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more